Breaking News

ಜಿಲ್ಲೆ

ಪೊಗರು’ ವಿವಾದಕ್ಕೆ ತೆರೆ: ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ ಎಂದ ನಿರ್ದೇಶಕ ನಂದ ಕಿಶೋರ್

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರವಾಗಿ ಹೋರಾಟ ನಡೆಸುವುದಾಗಿಯೂ ಬ್ರಾಹ್ಮಣ ಸಮುದಾಯದ ಸಂಘದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನಿಡಿದ್ದರು. ಇದರ ಬೆನ್ನಲ್ಲೇ ಇದೀಗ ವಿವಾದಕ್ಕೆ ತೆರೆಯೆಳೆಯುವ ಯತ್ನ ನಡೆದಿದೆ. ಪೊಗರು ಚಿತ್ರ ವಿವಾದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ನಂದ ಕಿಶೋರ್, ಯಾವುದೇ ಸಮುದಾಯಕ್ಕೆ ನೋವುಂಟು ಮಾಡಲು ಸೀನ್ ಮಾಡಿಲ್ಲ. ಬ್ರಾಹ್ಮಣರಿಗೆ …

Read More »

ಮೀಟರ್ ದರ ಏರಿಸುವಂತೆ ಆಟೋ ಚಾಲಕರ ಪ್ರತಿಭಟನೆ

ಬೆಂಗಳೂರು, ಫೆ.23- ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲಾ ಬೆಲೆಗಳು ಹೆಚ್ಚುತ್ತಿವೆ. ಅದಕ್ಕೆ ಅನುಗುಣವಾಗಿ ಆಟೋ ಮೀಟರ್ ದರವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ಸಿಐಟಿಯು ನೇತೃತ್ವದ ಆಟೋರಿಕ್ಷಾ ಯೂನಿಯನ್ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಎಂಟು ವರ್ಷಗಳ ಹಿಂದೆ 2013ರಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಯಾಗಿದೆ. ಅಲ್ಲಿಂದ ಈವರೆಗೂ ದರ ಇದ್ದಷ್ಟೇ ಇದೆ. ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ, …

Read More »

ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್

ಬೆಂಗಳೂರು: ರಾಜ್ಯ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಲ್ಲಿಗೆ ಕರೆಸಿದ್ದು, ನಿರಾಣಿ ತನ್ನ ಮೈಸೂರು ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ದೌಡಾಯಿಸಿದ್ದಾರೆ. ಮುರುಗೇಶ್ ನಿರಾಣಿ ಅವರು ಅವರು ಇಂದು ಮೈಸೂರು ಪ್ರವಾಸದ ಯೋಜನೆ ಮಾಡಿಕೊಂಡಿದ್ದರು. ಆದರೆ ಅಮಿತ್ ಶಾ ಕರೆಯ ಬೆನ್ನಲ್ಲೇ ಪ್ರವಾಸ ಮೊಟಕುಗೊಳಿಸಿ ದಿಲ್ಲಿ ವಿಮಾನ ಏರಿದ್ದಾರೆ.   ಮೈಸೂರು ಪ್ರವಾಸ ಮುಗಿಸಿ ಸಂಜೆ ದಿಲ್ಲಿಗೆ ಬರುತ್ತೇನೆ ಎಂದು ನಿರಾಣಿ ಹೇಳಿದರೂ …

Read More »

ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನಿರ್ಧರಿಸಿ : ಹೊರಟ್ಟಿ

ಬೆಂಗಳೂರು,ಫೆ.23- ಯಾವುದೇ ಸಮುದಾಯಕ್ಕೆ ಮೀಸಲಾತಿ ಸಿಗುವುದಾದರೆ ಅರ್ಥಿಕ ಮಾನದಂಡದ ಮೇಲೆ ನಿರ್ಧಾರವಾಗಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೇ 1.36 ಕೋಟಿ ಬಡತನರೇಖೆಗಿಂತ ಕೆಳಗಿರುವ ಬಡವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ ಎಷ್ಟು ಮಂದಿ ಬಡವರಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮೀಸಲಾತಿ ನೀಡುವುದು ಸೂಕ್ತ ಎಂದು ಸಲಹೆ ಮಾಡಿದರು. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಮೀಸಲಾತಿಗಾಗಿ ಹೋರಾಟಗಳು …

Read More »

ಬಜೆಟ್ ಅಧಿವೇಶನ ಮಾರ್ಚ್ 4ರಿಂದ ವಿಧಾನಸಭೆಯಲ್ಲಿ ಆರಂಭ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನವು ಮಾರ್ಚ್ 4ರಿಂದ ಆರಂಭವಾಗಲಿದ್ದು, ಇದು ಮಾ.31ರ ತನಕ ಮುಂದುವರಿಯಲಿದೆ. ಮಾರ್ಚ್ 8ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ಮಂಡಿಸಲಿರುವರು. ಈ ಬಗ್ಗೆ ಶಾಸಕಾಂಗದ ಕಾರ್ಯದರ್ಶಿ ಎಂ.ಕೆ. ವಿಜಯಲಕ್ಷ್ಮೀ ಅವರು ಅಧಿಸೂಚನೆ ಜಾರಿ ಮಾಡಿರುವರು. ಮಾ.4 ಮತ್ತು 5ರಂದು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆಯು ನಡೆಯಲಿದೆ. ಇದು ಈ ಬಜೆಟ್ ಅಧಿವೇಶನದ ಆಕರ್ಷಣೆಯಾಗಿರಲಿದೆ.

Read More »

ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ‍್ಯಾಲಿ

ಬೆಂಗಳೂರು, ಜ.23- ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯವರು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ಖಂಡಿಸಿದರು.ಶೇ.30ರಷ್ಟು ಶುಲ್ಕ ಕಡಿತ ಮಾಡಿರುವುದರಿಂದ ಖಾಸಗಿ ಶಾಲೆಗಳವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ವತಿಯಿಂದ ಮೆಜಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಸಾವಿರಾರು ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ್ಯಾಲಿ ನಡೆಸಿ ಸರ್ಕಾರ ಈ ಕ್ರಮವನ್ನು …

Read More »

ಬೆಳಗಾವಿಯಲ್ಲಿ ಪೆಟ್ರೊಲ್ ಕಳ್ಳರ ಹಾವಳಿ ….. ಸಿಸಿ ಕ್ಯಾಮರಾದಲ್ಲಿ ಸೆರೆ

ಪೆಟ್ರೋಲ್ ಬೆಲೆ ಏರಿಕೆ ಈಗ ಹೊಸ ಸಮಸ್ಯೆ ತಂದೊಡ್ಡಿದೆ. ಇಷ್ಟು ದಿನ ಮನೆ ಬೀಗ ಮುರಿದು ಒಳ ನುಗ್ಗಿ ಆಭರಣ ಕದಿಯುತ್ತಿದ್ದ ಕಳ್ಳರೀಗ, ಮನೆಯಂಗಳದಲ್ಲಿ ನಿಲ್ಲಿಸಿರುವ ವಾಹನಗಳಿಂದ ಪೆಟ್ರೋಲ್ ಎಗರಿಸಿ ಪರಾರಿಯಾಗುತ್ತಿದ್ದಾರೆ. ಹೀಗಾಗಿ ಕುಂದಾನಗರಿ ಖ್ಯಾತಿಯ ಬೆಳಗಾವಿ ಜನ, ಅಪಾರ್ಟ್​ಮೆಂಟ್​ನ ಪಾರ್ಕಿಂಗ್​ನಲ್ಲಿ ಹಾಗೂ ತಮ್ಮದೇ ಮನೆಯ ಅಂಗಳದಲ್ಲಿ ವಾಹನ ನಿಲ್ಲಿಸಲೂ ಹಿಂಜರಿಯುವಂತಾಗಿದೆ. ಪೆಟ್ರೋಲ್ ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ದಿನೇದಿನೆ ಇಂಧನ ದರ ಗಗನಕ್ಕೆ | ಕಳ್ಳತನಕ್ಕೆ ಸುಲಭ …

Read More »

ರಾಜ್ಯದ ಸಂಸದರು ಕನ್ನಡದ ಪರ ಕೆಲಸ ಮಾಡುತ್ತೇವೆ: ಮುಖಂಡರಿಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭರವಸೆ

ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆಯ ಹಾವಳಿ ಕಡಿಮೆಯಾಗಿದೆ.ಸಂಸತ್ತಿನಲ್ಲಿ ಕರ್ನಾಟಕದ ಎಲ್ಲ ಸಂಸದರು ಕನ್ನಡದ ಪರ ಕೆಲಸ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭರವಸೆ ನೀಡಿದರು. ಬೆಳಗಾವಿ ಹಳೆ ಜಿಪಂ ಸಭಾಂಗಣದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಸೋಮವಾರ ನಡೆಯಿತು. ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಲೋಕಸಭೆಯಲ್ಲಿ ಶಿವಸೇನೆಯ ಸಂಸದರು ಬೆಳಗಾವಿ, ಗಡಿ ವಿಷಯದ ಕುರಿತು ಧ್ವನಿ ಎತ್ತಿದ್ದರು. ಈ ಕುರಿತು ಬೆಳಗಾವಿ ಕನ್ನಡ ಕ್ರಿಯಾ …

Read More »

ಕುಲಗೋಡ ಬಲಭೀಮ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮುಂದಿನ ವರ್ಷ ನಡೆಯಲಿರುವ ಇಲ್ಲಿಯ ಪ್ರಸಿದ್ಧ ಬಲಭೀಮ ದೇವಸ್ಥಾನದ ಕಾರ್ತಿಕೋತ್ಸವ ನಿಮಿತ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಳೆದ ಶನಿವಾರದಂದು ಚಾಲನೆ ನೀಡಿದರು. ಮೂಡಲಗಿ ತಾಲೂಕಿನ ಕುಲಗೋಡದ ಸುಪ್ರಸಿದ್ಧ ಬಲಭೀಮ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಅವರು, ಕಾರ್ತಿಕೋತ್ಸವದ ಅಂಗವಾಗಿ 2022 ರಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಲಗೋಡ ಭಾಗದ ಬಲಭೀಮ ದೇವಸ್ಥಾನವು …

Read More »

ಸುಮಾರು 15ಕ್ಕೂ ಹೆಚ್ಚು ಬುಕ್ಕಿಗಳನ್ನು ಕರೆದು ಗೋಕಾಕ್ DYSP ಖಡಕ್ ವಾರ್ನಿಂಗ್

ಗೋಕಾಕ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು ಹೆಡಮುರಿ ಕಟ್ಟಲು ಪೊಲೀಸರು ರೆಡಿಯಾಗಿದ್ದಾರೆ, ಮತ್ತೊಂದೆಡೆ ಬೀಸೋ ದೊಣ್ಣೆಯಿಂದ ಪಾರಾಗಲು ಹರಸಾಹಸ ನಡೆಸಿದ್ದಾರೆ.   ಪ್ರಕಟವಾಗುತ್ತಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಗೋಕಾಕ ಪೊಲೀಸರು ಈಗ ದಂಧೆಕೋರರ ಉದ್ದನೆಯ ಪಟ್ಟಿ ಹಿಡಿದುಕೊಂಡು ನಗರದಲ್ಲಿ ಸಂಚರಿಸತೊಡಗಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಬುಕ್ಕಿಗಳ ಪೈಕಿ 15 ಬುಕ್ಕಿಗಳನ್ನು ಗೋಕಾಕ ಡಿಎಸ್ಪಿಯವರು ಎಲ್ಲರನ್ನು ಕರೆಯಿಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.   ಪೊಲೀಸರ ಕ್ರಮದಿಂದ ಬೆಚ್ಚಿಬಿದ್ದ ಇನ್ನೂ …

Read More »