Breaking News
Home / ಜಿಲ್ಲೆ (page 791)

ಜಿಲ್ಲೆ

ಕ್ರೇನ್‍ನಲ್ಲಿ ಚಾರ್ಮಾಡಿ ಘಾಟ್‍ಗೆ ಜೋತು ಬಿದ್ದು ದಾಖಲೆ ಪತ್ರಗಳನ್ನು ತಂದ ಆರೀಫ್

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‍ನಲ್ಲಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಮುಖ ದಾಖಲೆ ಪತ್ರಗಳು ಹಾರಿ ಹೋಗಿದ್ದು, ಇವುಗಳನ್ನು ಸ್ಥಳೀಯ ಸ್ನೇಕ್ ಆರೀಫ್ ಎಂಬವರು ಮಾಲೀಕರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಕಾರಿನಲ್ಲಿದ್ದ …

Read More »

ನಟಿ ರಾಗಿಣಿ ಐ.ಪಿ.ಎಸ್. ಇವಾಗ ಕೈದಿ ನಂಬರ್ ……{ಡ್ರಗ್ ಮಾಫಿಯಾ ಕೇಸಲ್ಲಿ}

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ ಮೊದಲ ದಿನ ಸರಿಯಾಗಿ ನಿದ್ದಯಿಲ್ಲದೆ ಕಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಜೈಲಿನಲ್ಲಿ ರಾತ್ರಿ ಸಿಸಿಬಿಯವರು ಕೊಟ್ಟಿದ್ದ ರಾತ್ರಿ ಊಟ ತಿಂದಿದ್ದಾರೆ. ರೋಟಿ, ದಾಲ್ ತಿಂದು ಜೈಲು ರಾತ್ರಿಯ ವಾಸ್ತವ್ಯಕ್ಕೆ …

Read More »

ರಾಜ್ಯದಲ್ಲಿ 7 ಸಾವಿರ ಪೊಲೀಸರಿಗೆ ಕೊರೊನಾ, 55 ಸಾವು

ಚಿಕ್ಕಮಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಹೇಳಲು ಬಂದಿದ್ದೇನೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಜಿಲ್ಲೆಗೆ ಭೇಟಿ ನೀಡಿದ್ದ ಪ್ರವೀಣ್ ಸೂದ್ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ತುಂಬಾ ಚೆನ್ನಾಗಿತ್ತು. ಈಗ ಸಂಖ್ಯೆ ಹೆಚ್ಚಾಗ್ತಿರೋದಕ್ಕೆ …

Read More »

I.M.A.ಬಹುಕೋಟಿ ವಂಚನೆ ಪ್ರಕರಣ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ ನಿಂಬಾಳಕರ್ ಮತ್ತು ಅಜಯ್ ಹಿಲೋರಿ ವಿರುದ್ಧ ಸಿಬಿಐ ವಿಚಾರಣೆ

ಬೆಂಗಳೂರು – ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ ನಿಂಬಾಳಕರ್ ಮತ್ತು ಅಜಯ್ ಹಿಲೋರಿ ವಿರುದ್ಧ ಸಿಬಿಐ ವಿಚಾರಣೆ ನಡೆಸಲು ಸರಕಾರ ಅನುಮತಿ ನೀಡಿದೆ. ಈ ಸಂಬಂಧ ಸುದೀರ್ಘ ಕಾನೂನುಗಳನ್ನು ಪರಿಶೀಲಿಸಿದ ಸರಕಾರ, ಅಡ್ವೋಕೇಟ್ ಜನರಲ್ ಸಲಹೆ ಪಡೆದು ಸಿಬಿಐ ಕೋರಿಕೆಯಂತೆ ಮತ್ತು ಸಿಬಿಐ ನಡೆಸಿರುವ ಪ್ರಾಥಮಿಕ ತನಿಖಾ ವರದಿಯನ್ನು ಉಲ್ಲೇಖಿಸಿ ತನಿಖೆಗೆ ಒಪ್ಪಿಗೆ ಸೂಚಿಸಿದೆ. ಐಎಂಎ ವಂಚನೆ ಪ್ರಕರಣ ಹೊರಬರುವ ಕೆಲವೇ ಸಮಯ …

Read More »

ಪ್ರಸಕ್ತ ಹಂಗಾಮು 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 5 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ ಗುರಿ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ: ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 5 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಹಾಗೂ ಕಾರ್ಖಾನೆಯ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಭಾನುವಾರದಿಂದ ಪ್ರಭಾ ಶುಗರ್ಸ್ ಪ್ರಸ್ತಕ ವರ್ಷದಿಂದ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಸಕಾಲಯಕ್ಕೆ ಮಳೆಯಾಗಿ ಉತ್ತಮ …

Read More »

14 ‘ಕನ್ನಡ ಭಾಷಾ ದಿನ’ವೆಂದು ಆಚರಿಸಲು ಒತ್ತಾಯ

ಬೆಳಗಾವಿ: ’14ರಂದು ಹಿಂದಿ ದಿವಸ್‌ಗೆ ಪರ್ಯಾಯವಾಗಿ ಅಂತರರಾಷ್ಟ್ರೀಯ ಕನ್ನಡ ಭಾಷಾ ದಿನವೆಂದು ಆಚರಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಇಲ್ಲಿನ ಕೇಂದ್ರ ಅಂಚೆ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಕನ್ನಡ ದಿನ ಆಚರಿಸುವಂತೆ ಕಚೇರಿ ಗೋಡೆಗಳಿಗೆ ಭಿತ್ತಿಪತ್ರಗಳನ್ನು ಅಂಟಿಸಿದರು. ಅಂಚೆ ಇಲಾಖೆ ಅಧಿಕಾರಿಗಳಿಗೆ ಸಿಹಿ ವಿತರಿಸಿದರು. ‘ರಾಷ್ಟ್ರೀಕೃತ ಬ್ಯಾಂಕ್‌, ಅಂಚೆ ಕಚೇರಿ ಹಾಗೂ ರೈಲು ನಿಲ್ದಾಣಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಆಡಳಿತದಲ್ಲಿ ಕನ್ನಡವನ್ನು ಬಳಸಬೇಕು. …

Read More »

‘ಲಿಂಗಾಯತ’ ಜಾತಿ ಪ್ರಮಾಣಪತ್ರಕ್ಕೆ ಆಗ್ರಹ

ಬೆಳಗಾವಿ: ‘ಲಿಂಗಾಯತ’ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ‘ಲಿಂಗಾಯತ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ಕೊಡುವಲ್ಲಿ ಲೋಪದೋಷಗಳು ಉಂಟಾಗುತ್ತಿವೆ. ನಮ್ಮ ಮೂಲ ಜಾತಿ ‘ಲಿಂಗಾಯತ’ ಆಗಿದೆ. ಆದರೆ, ಕಂದಾಯ ಇಲಾಖೆಯಿಂದ ‘ವೀರಶೈವ ಲಿಂಗಾಯತ’ ಎಂದು ನಮೂದಿಸಿ ಪ್ರಮಾಣಪತ್ರ ಕೊಡಲಾಗುತ್ತಿದೆ. ಇದು ನಮಗೆ ಮುಜುಗರ ಉಂಟು ಮಾಡುತ್ತಿದೆ’ ಎಂದು ತಿಳಿಸಿದರು. ‘ಲಿಂಗಾಯತ’ ಎಂದು ನಮೂದಿಸಿದ ಪ್ರಮಾಣಪತ್ರ ನೀಡುವ ಮೂಲಕ …

Read More »

ಬೆಳಗಾವಿ: ಸರ್ಕಾರಿ ವೈದ್ಯರ ಪ್ರತಿಭಟನೆ

ಬೆಳಗಾವಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ‘ಸೆ.21ರವರೆಗೆ ಸರ್ಕಾರಕ್ಕೆ ಯಾವುದೇ ವರದಿ ನೀಡದೆ ಕಾರ್ಯನಿರ್ವಹಿಸುತ್ತೇವೆ’ ಎಂದು ತಿಳಿಸಿದರು. ‘ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ವಿಷಯದಲ್ಲಿ ಸರ್ಕಾರಕ್ಕೆ ವರದಿ ನೀಡುವುದನ್ನು ಸ್ಥಗಿತಗೊಳಿಸುತ್ತೇವೆ. ಸೆ. 21ರಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುವುದು. ಬಳಿಕವೂ ಸ್ಪಂದಿಸದಿದ್ದಲ್ಲಿ ಬೆಂಗಳೂರು ಚಲೋ …

Read More »

ಬೆಳಗಾವಿ-ಕರಾಡ ರೈಲು ಮಾರ್ಗ ವಿಸ್ತರಣೆ ಎಂದು?

ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರದ ಬಹು ಬೇಡಿಕೆಯ ಕರಾಡ-ಧಾರವಾಡ ಹೊಸ ರೈಲು ಮಾರ್ಗದ ಈಗಾಗಲೇ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಉಳಿದ ಬೆಳಗಾವಿ-ಕರಾಡ ಹೊಸ ರೈಲು ಮಾರ್ಗ ವಿಸ್ತರಣೆ ಮಾಡಬೇಕು ಎಂದು ಗಡಿ ಜನರ ಒತ್ತಾಯವಾಗಿದೆ. ಗಡಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕರಾಡ-ಧಾರವಾಡ(ಕೊಲ್ಲಾಪುರ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಕಿತ್ತೂರು ಮಾರ್ಗವಾಗಿ) ಹೊಸ ರೈಲು ಮಾರ್ಗ ರಚನೆಯಾಗಬೇಕೆಂದು ಕಳೆದ 2012ರಲ್ಲಿ ರೈಲ್ವೆ ಇಲಾಖೆ ಸರ್ವೇ ಕಾರ್ಯ ಕೈಗೊಂಡಿತ್ತು. ಇದೀಗ ಧಾರವಾಡ-ಬೆಳಗಾವಿ …

Read More »

ಒಳಚರಂಡಿ ಪೈಪ್‌ಲೈನ್‌ ಒಡೆದು ಕಲುಷಿತ ನೀರು ಸಂಗ್ರಹ

ಬೆಳಗಾವಿ: ಮೂರು ದೇವಸ್ಥಾನಗಳು ಇರುವ ಈ ಪ್ರದೇಶದಲ್ಲಿ ಒಳಚರಂಡಿ ಪೈಪ್‌ಲೈನ್‌ ಒಡೆದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸ್ಥಳೀಯರು ಕೆಲ ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಮಧ್ಯ ಭಾಗದಲ್ಲಿರುವ ಸೋಮವಾರ ಪೇಟೆಯಲ್ಲಿ ಮೂರು ದೇವಸ್ಥಾನಗಳ ನಡುವೆ ಒಳಚರಂಡಿ ಇದ್ದು, ಇದರ ಪೈಪ್‌ಲೈನ್‌ ಒಡೆದು ಹೋಗಿದ್ದರಿಂದ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿದೆ. ಇಲ್ಲಿ ನಡೆದುಕೊಂಡು ಹೋಗುವುದು ಸ್ಥಳೀಯರಿಗೆ ಕಷ್ಟದ ಕೆಲಸವಾಗಿದೆ. ಪೈಪ್‌ಲೈನ್‌ ಒಡೆದು ಗಜೀಲು ರಸ್ತೆಗೆ ಹರಿಯುತ್ತಿದ್ದು, ಜನರ ಆರೋಗ್ಯದ …

Read More »