Breaking News
Home / ಜಿಲ್ಲೆ (page 738)

ಜಿಲ್ಲೆ

ಅಂತ್ಯಕ್ರಿಯೆ ಹೆಣಗಾಟ: ನೀರಿನ ಮಧ್ಯೆಯೇ ಹೆಣ ಸಾಗಿಸಲು ಕುಟುಂಬಸ್ಥರ ಪರದಾಟ

ಕೊಪ್ಪಳ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳದಲ್ಲೇ ನಡೆದುಹೋಗಿ ಗ್ರಾಮಸ್ಥರು ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಘಟನೆ ನಡೆದಿದೆ. ಅಳವಂಡಿ ಗ್ರಾಮದಲ್ಲಿ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದ ರಮೇಶ್ ಎಂಬುವವರ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರು ಹರಿಯೋ ನೀರಿನಲ್ಲಿ ನಡೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿದ್ದಾರೆ. ಅಳವಂಡಿ-ಕಂಪ್ಲಿಗೆ ಸಂಪರ್ಕ ಕಲ್ಪಿಸೋ ಹಳ್ಳದ ಕಡೆ ಸ್ಮಶಾನ ಇರೋ ಹಿನ್ನೆಲೆಯಲ್ಲಿ ಮಳೆಯಲ್ಲೇ …

Read More »

ಪೊಲೀಸ್​ ಠಾಣೆ ಅಭಿವೃದ್ಧಿಗಾಗಿ ಎಂದು ಸಾಹೇಬರ ಹೆಸರು ಬಳಸಿ, ಮುಖ್ಯಪೇದೆ ಹಣ ವಸೂಲಿ

ವಿಜಯಪುರ: ಬೈಕ್ ಸವಾರರಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ವಸೂಲಿ ಮಾಡತ್ತಿರುವ ಘಟನೆ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ಠಾಣೆ ಹೆಡ್‌ ಕಾನ್ಸ್‌ಟೇಬಲ್ H.S.ಹೊಸಮನಿ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ. ಬೈಕ್​ಗಳಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ಪೀಕುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ್ರೆ ಪೊಲೀಸ್ ಠಾಣೆಗೆ ಉಪಕರಣ ಖರೀದಿ ಮಾಡಲು ಮತ್ತು ಸಿಸಿಕ್ಯಾಮರಾಗಾಗಿ PSI ಸೂಚನೆ ಮೇರೆಗೆ ಹಣ ಸಂಗ್ರಹಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಹೇಳುತ್ತಿದ್ದಾರಂತೆ. ಪ್ರತಿ ಬೈಕ್ …

Read More »

ಸಿಡಿಲು ಬಡಿದು ಜಮೀನಿನಲ್ಲಿ ಕಟ್ಟಿಹಾಕಿದ್ದ 20ಕ್ಕೂ ಹೆಚ್ಚು ಕುರಿಗಳು ಸಾವು

ಯಾದಗಿರಿ: ಸಿಡಿಲು ಬಡಿದು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಗ್ರಾಮದ ನಿವಾಸಿ ನರಸಪ್ಪಗೆ ಸೇರಿದ ಕುರಿಗಳು ಸಾವನ್ನಪ್ಪಿದೆ. ಕುರಿಗಳನ್ನು ರಾತ್ರಿ ಜಮೀನಿನಲ್ಲಿ ಕಟ್ಟಿಹಾಕಿದ್ದ ವೇಳೆ ಘಟನೆ ಸಂಭವಿಸಿದೆ. ಘಟನೆ ವೇಳೆ ನರಸಪ್ಪ ಕುರಿಗಳ ಜೊತೆಗಿದ್ದ. ಆದರೆ, ಅದೃಷ್ಟವಶಾತ್ ನರಸಪ್ಪ ಪ್ರಾಣಾಪಯದಿಂದ ಪಾರಾಗಿದ್ದಾನೆ.

Read More »

ಮಳೆ ಆರ್ಭಟಕ್ಕೆ ಕೊಚ್ಚಿ ಹೋಯ್ತು ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ

ಕೊಪ್ಪಳ: ನಿನ್ನೆ ಸುರಿದ ಭಾರಿ ಮಳೆಗೆ ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ ನೀರುಪಾಲಾಗಿರುವ ಘಟನೆ ಕೊಪ್ಪಳ ತಾಲೂಕಿನ ಕೋಳೂರು ಬಳಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆಯೇ ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ ಕುಸಿದಿತ್ತು. ಮತ್ತೇ ಈಗ ನಿನ್ನೆ ಸುರಿದ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ಪರಿಣಾಮ ಕೋಳು ಸುತ್ತ ಮುತ್ತ ಇರೋ‌ ಜಮೀನಿಗೆ ‌ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆಗಳು ನಾಶವಾಗಿವೆ. ಹಲವು ಬಾರಿ ತಡೆಗೋಡೆ ದುರಸ್ಥಿ …

Read More »

HSR ಲೇಔಟ್​ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ BBMP ಸಿಬ್ಬಂದಿ ಕಿರಿಕಿರಿ ಮಾಡಿದ್ದಾರೆ. ಅದಕ್ಕೆ 5 ನಿಮಿಷ ಸಮಯ ಕೊಡಿ ಎಂದು ವಾಹನ ಚಾಲಕ ಕೇಳಿಕೊಂಡ್ರೂ ಅವಕಾಶ ಕೊಟ್ಟಿಲ್ಲವಂತೆ. ನಂತರ ಇವರ ನಡುವೆ ಜಗಳ ಶುರುವಾಗಿ ಪಾಲಿಕೆ ಸಿಬ್ಬಂದಿ ಶರ್ಟ್ ಹರಿದು ವಾಹನದ ಕೀ ಕಸಿದುಕೊಂಡು ದೌರ್ಜನ್ಯ ಮಾಡಿದ್ದಾರೆ ಅಂತಾ ನೊಂದವರು ಅಳಲು ತೋಡಿಕೊಂಡಿದ್ದಾರೆ. ನಾನು ಈಗಾಗಲೇ ಟೆಸ್ಟ್ ಮಾಡಿಸಿಕೊಂಡಿದ್ದೇನೆ ನೆಗಟಿವ್ ಬಂದಿದೆ ಅಂದರು ಕೇಳದೇ ಹಲ್ಲೆ ಮಾಡಿದ್ದಾರೆ. ಈ ರೀತಿ ದೌರ್ಜನ್ಯದಿಂದ ಟೆಸ್ಟ್ ಮಾಡಿಸುವುದು ಸರಿಯಲ್ಲ. ನಮಗೆ ತುರ್ತು ಕೆಲಸವಿದೆ ಐದು ನಿಮಿಷ ಸಮಯ ಕೊಡಿ ಅಂದರು ಕೊಡಲಿಲ್ಲ. ಗುಂಡಾಗಳಂತೆ ನಾಲ್ಕೈದು ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ. ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದ್ರೂ ಬೆಡ್ ಸೌಲಭ್ಯವನ್ನೂ ಸಹ ಮಾಡಲ್ಲ. ಆದ್ರೆ ಸುಮ್ಮನೆ ಟೆಸ್ಟಿಂಗ್ ಅಂತಾ ಚೆನ್ನಾಗಿದ್ದವರ ಮೇಲೆ ಗದಾಪ್ರಹಾರ ಮಾಡ್ತಾರೆ. ಈ ರೀತಿ ದೌರ್ಜನ್ಯದಿಂದ ಟೆಸ್ಟ್ ಮಾಡಿಸುವುದು ಎಷ್ಟರಮಟ್ಟಿಗೆ ಸರಿ ಎಂದು ದೌರ್ಜನ್ಯಕ್ಕೆ ಒಳಗಾದವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇನ್ನು ಸಾರ್ವಜನಿಕರ ಮೇಲಿನ ದೌರ್ಜನ್ಯದ ವಿಡಿಯೋ ಟಿವಿ9 ಗೆ ಲಭ್ಯವಾಗಿದೆ.

ಬೆಂಗಳೂರು: ಮಹಾಮಾರಿ ಕೊರೊನಾ ಈಗಾಗಲೇ ಜನರಿಗೆ ನರಕದ ದರ್ಶನ ಮಾಡಿಸುತ್ತಿದೆ. ಈ ನಡುವೆ BBMP ಸಿಬ್ಬಂದಿ ಕೊರೊನಾ ಟೆಸ್ಟಿಂಗ್ ಹೆಸರಲ್ಲಿ ದರ್ಪ , ದೌರ್ಜನ್ಯವೆಸಗುತ್ತಿದೆ. ಕೊರೊನಾ ಟೆಸ್ಟ್ ಮಾಡಿಸೋಕೆ ಒಪ್ಪಲಿಲ್ಲ ಅಂದ್ರೆ ದಂಡವಲ್ಲ ಬದಲಿಗೆ ಯಾಮಾರಿದ್ರೆ ಏಟು ಬೀಳುತ್ತೆ. ಬೆಂಗಳೂರಿನಲ್ಲಿ ಜನರನ್ನು ಹೆದರಿಸಿ BBMP ಸಿಬ್ಬಂದಿ ಟೆಸ್ಟ್ ಮಾಡ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿಯ ಈ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. HSR ಲೇಔಟ್​ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದವರಿಗೆ ಕೊರೊನಾ ಟೆಸ್ಟ್ …

Read More »

ಬೆಳ್ಳಂಬೆಳಗ್ಗೆ ನಡೀತು ಡಬಲ್​ ಮರ್ಡರ್​.. ಚಾಕುವಿನಿಂದ ಇರಿದು ತಾಯಿ ಮಗನ ಬರ್ಬರ ಹತ್ಯೆ, ಎಲ್ಲಿ?

ಶಿವಮೊಗ್ಗ: ಜಿಲ್ಲೆಯ ಸಾಗರ ಬಳಿಯ ಕಸೆಕಸೆಗೊಡ್ಲು ಗ್ರಾಮದಲ್ಲಿ ತಾಯಿ, ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಾಕುವಿನಿಂದ ಇರಿದು ತಾಯಿ ಬಂಗಾರಮ್ಮ ಹಾಗೂ ಆಕೆಯ ಪುತ್ರ ಪ್ರವೀಣನನ್ನು ಹತ್ಯೆಮಾಡಲಾಗಿದೆ. ಸಾಗರದ ಹಳೇ ಇಕ್ಕೇರಿಯ ಸಮೀಪವಿರುವ ಕಸೆಕಸೆಗೊಡ್ಲು ಗ್ರಾಮದಲ್ಲಿ ಈ ಡಬಲ್ ಮರ್ಡರ್​ ನಡೆದಿದ್ದು ತಾಯಿ ಮಗನನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಭೀಕರವಾಗಿ ಕೊಲೆಮಾಡಲಾಗಿದೆ. ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಕ್ರಮ ಜಾನುವಾರು ಸಾಗಾಟ: ವಾಹನವನ್ನು ಬೆನ್ನಟ್ಟಿ ರಾಸುಗಳನ್ನು ರಕ್ಷಿಸಿದ ಖಾಕಿ ಪಡೆ

ಮಂಗಳೂರು: ಗಾಳಿಯಲ್ಲಿ ಗುಂಡು ಹಾರಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮೂಡುಕೊಣಾಜೆ ಎಂಬಲ್ಲಿ ನಡೆದಿದೆ. ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಜಾನುವಾರು ಸಾಗಿಸ್ತಿದ್ದವರ ಬಂಧಿಸಲು ಮೂಡುಬಿದ್ರೆ ವೃತ್ತ ನಿರೀಕ್ಷಕ BS ದಿನೇಶ್ ಕುಮಾರ್ ತಂಡ ಚೇಸಿಂಗ್ ಮಾಡಿದೆ. ಈ ವೇಳೆ ಜೀಪ್‌ಗೆ ಡಿಕ್ಕಿ ಹೊಡೆಯಲು ಕದೀಮರು ಪ್ರಯತ್ನಿಸಿದ್ದಾರೆ. ಆಗ ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಗುಂಡು …

Read More »

ಮಸ್ಕಿ‌ ಹಳ್ಳ ದಂಡೆ ಸೇತುವೆ ಬಳಿ ಸಿಲುಕಿರುವ ವ್ಯಕ್ತಿಗಳು, ಪ್ರಾಣ ರಕ್ಷಣೆಗಾಗಿ ಪರದಾಟ

ರಾಯಚೂರು: ಮಸ್ಕಿ ಜಲಾಶಯಕ್ಕೆ 2,100 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಳವಾಗಿದೆ. ಮಸ್ಕಿ ಡ್ಯಾಂನಿಂದ 1,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪೋತ್ನಾಳ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಹಳ್ಳದ ದಂಡೆಗೆ ತೆರಳದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮಸ್ಕಿ ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿ ಪರದಾಟ: ಇನ್ನು ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಹಳ್ಳದ ದಂಡೆ ಮುಳುಗಿ ಹೋಗಿದೆ. ದ್ವೀಪದಂತಾದ ಸೇತುವೆಯ ಕೆಳಗೆ ನಿಂತು ರಕ್ಷಣೆಗಾಗಿ …

Read More »

ಕಾನೂನಿಗೆ ಹೆದರೋದು ಯಾಕೆ?.. ನೀವು ಧೈರ್ಯವಂತ ಬಂಡೆ -ಡಿಕೆಶಿಗೆ ಕಟೀಲ್​ ವ್ಯಂಗ್ಯ

ಬೆಳಗಾವಿ: ನೀವು ಧೈರ್ಯವಂತ ಬಂಡೆ. ಎಲ್ಲವನ್ನೂ ಎದುರಿಸೋರು CBIನ ಎದುರಿಸೋಕೆ ಆಗಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪದ ವಿಚಾರವಾಗಿ ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ಸ್ಥಾಪಿತವಾದ ಸಂಸ್ಥೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೇಡ್ ಆಗಿದೆ. ಲಾಲೂ ಪ್ರಸಾದ್ ಯಾದವ್​, …

Read More »

ರೈಲ್ವೆ ಇಲಾಖೆ ಎಡವಟ್ಟು: ಕುರಿ ಮೇಯಿಸಲು ಹೋದವರು ಪಕ್ಕದ ಕಾಲುವೆಯಲ್ಲಿ ಮುಳುಗಿ ಸತ್ತೇ ಹೋದ್ರು..

ಕೋಲಾರ: ಬಾಳಿ ಬದುಕಬೇಕಿದ್ದ ಮೂವರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಕುರಿ ಮೇಯಿಸಲು ಹೋದವರು ಬಾರದ ಲೋಕಕ್ಕೆ ಹೋಗಿದ್ದರಿಂದ ಹೆತ್ತವರು ದಿಕ್ಕೇ ತೋಚದಂತಾಗಿದ್ದಾರೆ. ರೈಲ್ವೆ ಇಲಾಖೆಯವರು ಮಾಡಿರೋ ಅವೈಜ್ಞಾನಿಕ ಕಾಲುವೆ ಇದಕ್ಕೆಲ್ಲ ಕಾರಣವಾಗಿದೆ. ಮೊನ್ನೆ ಕೋಲಾರ ಜಿಲ್ಲೆ ಬಂಗಾರಪೇಟೆ ಸುತ್ತಮುತ್ತ ಭರ್ಜರಿ ಮಳೆ ಸುರಿದಿತ್ತು. ಪರಿಣಾಮ ಕುಂಬಾರಪಾಳ್ಯದ ರೈಲ್ವೆ ಅಂಡರ್​ಪಾಸ್‌ನಲ್ಲಿ ನೀರು ತುಂಬಿತ್ತು. ಈ ವೇಳೆ ತಮ್ಮ ಮನೆಯಲ್ಲಿದ್ದ ಕುರಿಗಳನ್ನ ಮೇಯಿಸುತ್ತಾ ಅಲ್ಲೇ ಆಟವಾಡಿಕೊಂಡಿದ್ದ ಮಕ್ಕಳು ನೀರಿಗೆ ಇಳಿದಿದ್ದಾರೆ. ನೀರಿನ ಆಳ ತಿಳಿಯದೆ …

Read More »