Home / ಅಂತರಾಷ್ಟ್ರೀಯ / ಮಸ್ಕಿ‌ ಹಳ್ಳ ದಂಡೆ ಸೇತುವೆ ಬಳಿ ಸಿಲುಕಿರುವ ವ್ಯಕ್ತಿಗಳು, ಪ್ರಾಣ ರಕ್ಷಣೆಗಾಗಿ ಪರದಾಟ

ಮಸ್ಕಿ‌ ಹಳ್ಳ ದಂಡೆ ಸೇತುವೆ ಬಳಿ ಸಿಲುಕಿರುವ ವ್ಯಕ್ತಿಗಳು, ಪ್ರಾಣ ರಕ್ಷಣೆಗಾಗಿ ಪರದಾಟ

Spread the love

ರಾಯಚೂರು: ಮಸ್ಕಿ ಜಲಾಶಯಕ್ಕೆ 2,100 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಳವಾಗಿದೆ. ಮಸ್ಕಿ ಡ್ಯಾಂನಿಂದ 1,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪೋತ್ನಾಳ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಹಳ್ಳದ ದಂಡೆಗೆ ತೆರಳದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಸ್ಕಿ ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿ ಪರದಾಟ:
ಇನ್ನು ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಹಳ್ಳದ ದಂಡೆ ಮುಳುಗಿ ಹೋಗಿದೆ.

ದ್ವೀಪದಂತಾದ ಸೇತುವೆಯ ಕೆಳಗೆ ನಿಂತು ರಕ್ಷಣೆಗಾಗಿ ವ್ಯಕ್ತಿಗಳಿಬ್ಬರು ಪರದಾಡುತ್ತಿದ್ದಾರೆ. ಮಸ್ಕಿ ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿಗಳು ರಕ್ಷಣೆಗಾಗಿ ಕೂಗಾಡುತ್ತಿದ್ದಾರೆ. ಸ್ಥಳೀಯರು ಸಹ ಹಗ್ಗಗಳನ್ನು ಬಳಸಿ ಸಿಲುಕಿರುವವರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇನ್ನು ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಆ ಇಬ್ಬರು ವ್ಯಕ್ತಿಗಳ ರಕ್ಷಣೆ ಮಾಡಬೇಕಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ