Breaking News
Home / ಜಿಲ್ಲೆ (page 720)

ಜಿಲ್ಲೆ

ನಿಮ್ಮ ಬಳಿ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದಲೇ ಬಂದ ಡೈನಮೇಟ್‍ಗಳಿವೆ:ಕಟೀಲ್

ಬೆಂಗಳೂರು: ನಿಮ್ಮ ಬಳಿ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದಲೇ ಬಂದ ಡೈನಮೇಟ್‍ಗಳಿವೆ ಒಂದೊಂದು ಡೈನಾಮೈಟ್‍ ನಿಮ್ಮನ್ನು ಪುಡಿ ಪುಡಿ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನಲೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ …

Read More »

ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ

ಬೆಂಗಳೂರು: ಭಾರೀ ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ತತ್ತರಿಸಿದ್ದು, ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ವಾಯುಭಾರ ಕುಸಿತದಿಂದಾಗಿ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಜೊತೆಗೆ ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ಹಾಗೂ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಯ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ …

Read More »

ನಾಳೆಸಿದ್ದರಾಮಯ್ಯ ಬೆಳಗಾವಿ ಗೆ

ಬೆಂಗಳೂರು, ಅ.18- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಾಳೆಯಿಂದ ಪ್ರವಾಹ ಪೀಡಿತ ಬಾದಾಮಿ ಕ್ಷೇತ್ರದಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ತೆರಳುವ ಸಿದ್ದರಾಮಯ್ಯ ಅವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ತಲುಪಿ ನಂತರ ತಮ್ಮ ಸ್ವಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ 12.30ಕ್ಕೆ ತಲುಪಲಿದ್ದಾರೆ. ಬಾದಾಮಿಯಲ್ಲಿ ಕೆಡಿಪಿ ಸಭೆ ನಡೆಸಿ ಅಂದು ಅಲ್ಲೆ ವಾಸ್ತವ್ಯ ಹೂಡಲಿದ್ದಾರೆ. ಮಾರನೇ ದಿನ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ …

Read More »

ಹೋಮ್‍ಕ್ವಾರಂಟೈನ್ ನಲ್ಲಿ ಸಚಿವ ಸುರೇಶ್‍ಕುಮಾರ್

ಬೆಂಗಳೂರು, ಅ.18- ಕಳೆದ 13 ದಿನಗಳಿಂದ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರ ಆರೋಗ್ಯ ಸುಧಾರಿಸಿದ್ದು, ಹೋಮ್‍ಕ್ವಾರಂಟೈನ್ ನಿಗಾ ವ್ಯವಸ್ಥೆಯಲ್ಲಿದ್ದಾರೆ. ಈ ಬಗ್ಗೆ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಅ.5ರಂದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದು. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದು. ಆದರೆ, ಅ.10 …

Read More »

ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು.

ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಮೂರು ಉದ್ದೇಶದಿಂದ ಕಾಂಗ್ರೆಸ್ ಕಚೇರಿಯಲ್ಲಿ ಕ್ಯಾಂಟಿನ್ ತೆರೆ ಯಲಾಗಿದೆ. ಸಾಮಾನ್ಯ ಜನರು, ಕಾರ್ಯಕರ್ತರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಹಾಗೂ ಕಾಂಗ್ರೆಸ್ ಮಹಾನ್ ನಾಯಕರ ಇತಿಹಾಸ ತಿಳಿಸಿಕೊಡುವ ಉದ್ದೇಶದಿಂದ ಕ್ಯಾಂಟಿನ್ ತೆರೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ …

Read More »

ಬೆಂಗ್ಳೂರು ವಿಮಾನ ನಿಲ್ದಾಣದ ಗೋದಾಮಿನಿಂದಲೇ 2.5 ಕೆಜಿ ಚಿನ್ನ ನಾಪತ್ತೆ

ಬೆಂಗಳೂರು: ಕೇರಳ ಚಿನ್ನ ಸ್ಮಗ್ಲಿಂಗ್‌ಗೆ ದಾವೂದ್‌ ಲಿಂಕ್‌ ಇದೆ ಎಂಬ ಸ್ಫೋಟಕ ವಿಚಾರ ತನಿಖೆಯ ವೇಳೆ ಬಯಲಾಗುತ್ತಿದ್ದಂತೆ ಇತ್ತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನವೇ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದ್ದ 2.5 ಕೆಜಿ ಚಿನ್ನ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಸ್ಟಮ್ಸ್‌ ಇಲಾಖೆಯ ಜಂಟಿ ಆಯ್ತುಕ ಎಂ. ಜೆ. ಚೇತನ್‌ …

Read More »

ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ

ಮಂಡ್ಯ: ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ನಡೆದಿದೆ. ಶ್ರೀಪ್ರಸಾದ್(32) ಕಾವೇರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ. 3 ದಿನದ ಹಿಂದೆ ನಿಧನರಾಗಿದ್ದ ಅಜ್ಜಿಯ ಅಸ್ಥಿ ವಿಸರ್ಜನೆಗಾಗಿ ಶ್ರೀಪ್ರಸಾದ್ ಮತ್ತು ಕುಟುಂಬಸ್ಥರು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿದ್ದರು. ಹೀಗಾಗಿ ಗೋಸಾಯ್ ಘಾಟ್ ಬಳಿ ವಿಧಿ ವಿಧಾನ ಮುಗಿಸಿ ಕುಟುಂಬದ ಮೂವರು ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗೆ ಇಳಿದಿದ್ದರು. ಈ ವೇಳೆ ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಾಗೂ …

Read More »

ನಾಯಂಡಹಳ್ಳಿ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ

ಬೆಂಗಳೂರು: ನಾಯಂಡಹಳ್ಳಿ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ನಾಯಂಡಹಳ್ಳಿಯ ವಿಶ್ವಪ್ರಿಯಾ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.   ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಚಾಲಕ ಹಾಗೂ ಇತರರು ವಾಹನದ ಗಾಜು ಒಡೆದು ಹೊರಬಂದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಸದ್ಯ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಅನ್ನೋ ಮಾಹಿತಿ ಲಾಭ್ಯವಾಗಿದೆ. ಕಾರಿನಲ್ಲಿ …

Read More »

ರೈತರ ಶ್ರೇಯೋಭಿವೃದ್ಧಿಗೆ ಅನುದಾನ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ರೈತರ ಶ್ರೇಯೋಭಿವೃದ್ಧಿಗೆ ಅನುದಾನ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿಗೆ ನೀಡಲಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು. ‘ಸಕಾಲದಲ್ಲಿ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಯಂತ್ರೋಪಕರಣಗಳನ್ನು ನೀಡಲಾಗುತ್ತಿದ್ದು ರೈತರು ಸದ್ಬಳಕೆ ಮಾಡಿಕೊಂಡು, ಆರ್ಥಿಕ …

Read More »

ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ.

ಅಫಜಲಪುರ: ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ. ತಾಲ್ಲೂಕಿನ ಭೀಮಾ ಬ್ಯಾರೇಜಿನ ಹಿನ್ನೀರಿನಿಂದ ಕರಜಗಿ ಹೋಬಳಿಯ ಸುಮಾರು 20 ಗ್ರಾಮಗಳು ಮೂರಾಬಟ್ಟೆಯಾಗಿವೆ. ಸೊನ್ನ ಬ್ಯಾರೇಜನಿಂದ ಭೀಮಾ ನದಿಗೆ ಶನಿವಾರ 8.50 ಲಕ್ಷ ಕ್ಯುಸೆಕ್‌ ನೀರು ಹರಿಬಿಡುತ್ತಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೀಮಾ ತೀರದ ಮಣ್ಣೂರ, ಹೊಸುರ, ಶೇಷಗೀರಿ, ಉಡಚಣ, ಭೋಸಗಾ, ಅಳ್ಳಗಿ(ಬಿ), ಗೌರ, ಬಂಕಲಗಾ, ಶಿರವಾಳ, ದಿಕ್ಸಂಗಾ, ತೆಲ್ಲುಣಗಿ, ನಂದರಗಿ ಸೇರಿದಂತೆ ಹಲವು ಹಳ್ಳಿಗಳು …

Read More »