Breaking News
Home / ಜಿಲ್ಲೆ (page 21)

ಜಿಲ್ಲೆ

ಸಿದ್ದರಾಮಯ್ಯನವರ ಕ್ಯಾಬಿನೆಟ್​ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ.: ರಮೇಶ್ ಜಾರಕಿಹೊಳಿ ಕಳವಳ

ಚಿಕ್ಕೋಡಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಯಾಬಿನೆಟ್​ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯನವರು ಇದ್ದಾಗಲೇ ಸತೀಶ್​ಗೆ ಈ ರೀತಿ ಪರಿಸ್ಥಿತಿ ಬಂದಿದೆ. ಬೇರೆ ಯಾರಾದ್ರೂ ಸಿಎಂ ಇದ್ರೆ ಸತೀಶ್​ ಪರಿಸ್ಥಿತಿ ಏನು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾತ್ರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಸತೀಶ್​ ಅವರಿಗೆ …

Read More »

ಕಸಾಪ ತಾಲ್ಲೂಕಾಧ್ಯಕ್ಷ ಸುರೇಶ ಸಿದ್ದಪ್ಪಾ ಹಂಜಿ ಅವರಿಗೆ ಸತ್ಕಾರ

ಬೆಳಗಾವಿ : ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಸಿದ್ದಪ್ಪಾ ಹಂಜಿ ಅವರು ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ರಂಗಗಳಲ್ಲಿ ಮಾಡಿರುವ ಅಮೋಘ ಸೇವೆಯನ್ನು ಗುರುತಿಸಿ É ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ ದ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಲಭಿಸಿರುವ ಕಾರಣ ಬೆಳಗಾವಿ ತಾಲೂಕಿನ ನಿಂಗೆನಟ್ಟಿ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಭೀಮರಾವ್ ಧನಪ್ಪಾ ನಾಯ್ಕ ಹಾಗೂ ಬಂಬರಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ …

Read More »

3 ದಿನ ಕಿತ್ತೂರು ಉತ್ಸವ: ಎತ್ತ ನೋಡಿದರೂ ದೀಪಾಲಂಕಾರದಿಂದ ಕಟ್ಟಡಗಳು ಝಗಮಗಿಸುತ್ತಿವೆ.

ಬೆಳಗಾವಿ: ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಬೆಳಗಾವಿಯಲ್ಲಿ ಚನ್ನಮ್ಮ‌ನ ಕಿತ್ತೂರು ಉತ್ಸವದ ಸಂಭ್ರಮ ಕಳೆಗಟ್ಟಿದೆ.   ಅ.23 ರಿಂದ 25 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ರಾಜ್ಯಮಟ್ಟದ ಉತ್ಸವಕ್ಕೆ ಕಿತ್ತೂರು ಸಜ್ಜಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಶ್ವಾರೂಢ ಚನ್ನಮ್ಮನ ಪ್ರತಿಮೆ ಇರುವ ವೃತ್ತ, ಮಹಾದ್ವಾರ, ಕೋಟೆಯ ಆವರಣ ಮತ್ತು ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕಿತ್ತೂರು ಉತ್ಸವವನ್ನು 1997ರಿಂದ ಆಚರಿಸಲಾಗುತ್ತಿದೆ. 2022ರಲ್ಲಿ ಬಿಜೆಪಿ ಸರ್ಕಾರ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …

Read More »

ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುತ್ತಾರೆಂಬುದು ಊಹಾಪೋಹ ಅಷ್ಟೇ: ಲಕ್ಷ್ಮಣ್ ಸವದಿ

ಚಿಕ್ಕೋಡಿ(ಬೆಳಗಾವಿ): “ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ನೀಡುತ್ತಾರೆಂಬ ವಿಚಾರ ಊಹಾಪೋಹ ಅಷ್ಟೇ. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ” ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದೆಲ್ಲಾ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ನಾನು ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಸಿಎಂ ಮತ್ತು ಡಿಸಿಎಂ ಭೇಟಿಗೆ ಹೋಗಿದ್ದೆ. ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ” ಎಂದರು. “ಪದಾಧಿಕಾರಿಗಳ ಪುನರ್‌ರಚನೆಯನ್ನು ಕೇಂದ್ರದ ವರಿಷ್ಠರು ಹಾಗೂ …

Read More »

ಮಹಾರಾಷ್ಟದ ಗಡಿ ತಾಲೂಕು ಜತ್ತದಲ್ಲಿ ಕನ್ನಡದ ಶಾಲೆಗಳಲ್ಲಿ ಶಿಕ್ಷರ ಕೊರತೆ

ಚಿಕ್ಕೋಡಿ: ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರದ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ. ಗಡಿನಾಡು ಕನ್ನಡಿಗರ ಒತ್ತಾಯದ ಮೇರೆಗೆ ದಶಕಗಳ ಹಿಂದೆ ಕನ್ನಡ ಭಾಷೆ ಕಲಿಕೆಯ ಶಾಲೆಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಆ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವುದರಿಂದ ಕ್ರಮೇಣ ಮಕ್ಕಳು ಮರಾಠಿ ಭಾಷೆಗಳತ್ತ ಒಲವು ತೋರುತ್ತಿದ್ದಾರೆ. ಪರಿಣಾಮ, ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವಂತಹ ಕುತಂತ್ರ ನಡೆಸುತ್ತಿದೆ ಎಂದು ಜತ್ತ ತಾಲೂಕಿನ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತ್ತ ತಾಲೂಕಿನಲ್ಲಿ 82 …

Read More »

ಇಸ್ರೇಲ್​​ನಿಂದ ತಾಯ್ನಾಡಿಗೆ ಬಂದ ಬೆಳಗಾವಿ ಯುವಕ: ಯುದ್ಧದ ಭಯಾನಕತೆ ಬಿಚ್ಚಿಟ್ಟ ‘ಮಹಾವೀರ’

ಚಿಕ್ಕೋಡಿ (ಬೆಳಗಾವಿ): ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಬೆಳಗಾವಿಯ ಜಿಲ್ಲೆಯ ಯುವಕ ಸುರಕ್ಷಿತವಾಗಿ ಮರಳಿ ತಮ್ಮೂರಿಗೆ ಹಿಂತಿರುಗಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆ ಮುಂದುವರಿಸಿದ್ದು, ಅದರ ನೆರವಿನಿಂದ ಯುವಕ ತಾಯ್ನಾಡಿಗೆ ಮರಳಿದ್ದಾನೆ. ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ಮಹಾವೀರ ಹಲಕರ್ಣಿ ಎಂಬ ಯುವಕ ಭಾನುವಾರ ತಮ್ಮೂರಿಗೆ ಮರಳಿ ಬಂದಿದ್ದಾರೆ. ಇಸ್ರೇಲ್​​ ದೇಶದ ಬೀರಶೇವಾ ಪ್ರದೇಶದ ಬೆನ್ ಗೋರಿನ್ ವಿಶ್ವವಿದ್ಯಾಲಯದಲ್ಲಿ …

Read More »

ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ವಿದ್ಯುತ್​ ತಂತಿ ಸ್ಪರ್ಶಿಸಿ 26 ಎಕರೆಯಲ್ಲಿ ಬೆಳೆದಿದ್ದ ಕಬ್ಬು ನಾಶ;

ಚಿಕ್ಕೋಡಿ (ಬೆಳಗಾವಿ): ವಿದ್ಯುತ್​ ತಂತಿ ಸ್ಪರ್ಶಿಸಿ 26 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಸರ್ವೆ ನಂಬರ್​ 8 ಮತ್ತು 10ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿತು. ಹೈವೋಲ್ಟೇಜ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈತರಾದ ಪಾರೀಸ್ ವಾಳ್ವೆ ಹಾಗೂ ನಿಗಂಪ್ಪಾ ಮನಗೋಳಿ ಮಾತನಾಡಿ, “ಇನ್ನೇನು ಕೆಲವೇ ದಿನಗಳಲ್ಲಿ ಕಬ್ಬು ಕಾರ್ಖಾನೆಗೆ …

Read More »

ರೈತರ ಜಮೀನಿನಲ್ಲಿ ಕೆರೆ ನಿರ್ಮಿಸಿ 14 ವರ್ಷಗಳೇ ಕಳೆದಿವೆ. ಭೂಮಿ ಕೊಟ್ಟ ರೈತರಿಗೆ ಪರಿಹಾರ ಸಿಕ್ಕಿಲ್ಲ. ಕೆರೆಯಲ್ಲಿ ಮುಳುಗಿ ಪ್ರಾಣ ಬಿಡುವ ಎಚ್ಚರಿಕೆ!

ಬೆಳಗಾವಿ: ಊರಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು.‌ ನೀರಿನ ಬವಣೆ ನೀಗಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗ್ರಾಮದ ರೈತರ ಜಮೀನಿನಲ್ಲಿ ಕೆರೆ ನಿರ್ಮಿಸಿ 14 ವರ್ಷಗಳೇ ಕಳೆದಿವೆ. ಆದರೆ, ಈವರೆಗೂ ಭೂಮಿ ಕೊಟ್ಟ ರೈತರಿಗೆ ಪರಿಹಾರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡ ಸಂತ್ರಸ್ಥರು ಪರಿಹಾರ ಕೊಡದಿದ್ದರೆ, ಇದೇ ಕೆರೆಯಲ್ಲಿ ಮುಳುಗಿ ಜೀವ ಬಿಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಹಾಗಾದರೆ ಯಾವ ಊರು? ಏನಿವರ ವ್ಯಥೆ? ಸಚಿವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣ ವ್ಯಾಪ್ತಿಯ …

Read More »

*ಅರಭಾಂವಿಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ಮ.ನಿ.ಪ್ರ.ಸ್ವ. ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳು ಪುಣ್ಯಾರಣ್ಯ!

ಗೋಕಾಕ : ಅರಭಾವಿ ಮಠಕ್ಕೆ ಶ್ರೀ ಮ.ನಿ.ಪ್ರ.ಸ್ವ. ಶ್ರೀ ಗುರು ಬಸವಲಿಂಗ ಮಹಾಸ್ವಾಮಿಜೀ ಅವರನ್ನು ಪೀಠಾಧಿಪತಿಗಳಾಗಿ ಮಾಡಲಾಗಿದೆ. ನಿನ್ನೆ ದಿನ ತಾಲೂಕಿನ ಅರಭಾವಿ ಮಠದ ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಲಿಂಗೈಕ್ಯ ಹೊಂದಿದ್ದರು. ಆದರಿಂದ ಅರಭಾವಿ ಮಠದ ಪೀಠಕ್ಕೆ ಯಮಕನಮರಡಿ ಮತಕ್ಷೇತ್ರದ ಶ್ರೀ ಮ.ನಿ.ಪ್ರ.ಸ್ವ. ಶ್ರೀ ಗುರು ಬಸವಲಿಂಗ ಮಹಾಸ್ವಾಮಿಜೀ ಅವರನ್ನು ಪೀಠಾಧಿಪತಿಗಳಾಗಿ ಮಾಡಲಾಗಿದೆ.

Read More »