Breaking News

ಜಿಲ್ಲೆ

ತಿಗಡಿ ಗ್ರಾಮದಲ್ಲಿ ಮಾರುತಿ ಜಾತ್ರಾ ಸಂಭ್ರಮ: ಭಕ್ತಿಪರವಶತೆಯಿಂದ ಜರುಗಿದ ಭವ್ಯ ರಥೋತ್ಸವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಶ್ರೀ ಮಾರುತಿ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗಿದೆ. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾರುತಿ ರಾಯನ ಕೃಪೆಗೆ ಪಾತ್ರರಾದರು. ತಿಗಡಿ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಯ ಮೊದಲ ದಿನದಂದು ದೇವಸ್ಥಾನದಲ್ಲಿ ಮಾರುತಿ ದೇವರಿಗೆ ವಿಶೇಷ ಅಭಿಷೇಕ …

Read More »

ಶ್ರೀ ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ: ಸುರೇಶ ಯಾದವ್

ಬೆಳಗಾವಿ: ರಾಮತೀರ್ಥ ನಗರ ರಹವಾಸಿಗಳಿಂದ ಕಣಬರ್ಗಿಯ ಕೆರೆ ರಸ್ತೆಯ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ಜಯಂತಿಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಬಳಿಕ, ಹನುಮಾನ ಜಯಂತಿ ಪ್ರಯುಕ್ತ ಮುತೈದೆಯರಿಂದ ತೋಟಿಲೋತ್ಸವವನ್ನು, ಕುಂಭ ಮೇಳ ಮೂಲಕ ಶ್ರೀ ಗಣೇಶ ಮಂದಿರ ಸರ್ಕಲದಿಂದ ಮೆರವಣಿಗೆ ನಡೆಸಲಾಯಿತು. ಮಂದಿರದಲ್ಲಿ ಗಣ ಹೋಮ , ನವಗ್ರಹ ಹೋಮ ಮಾಡಲಾಯಿತು. ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷರಾದ ಸುರೇಶ ಯಾದವ ಅವರು ಮಾತನಾಡಿ, ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ, …

Read More »

ಬೆಳಗಾವಿಯಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ ಮಹಾನಗರ ಪಾಲಿಕೆಯಿಂದ ಐತಿಹಾಸಿಕ ಆಚರಣೆಗೆ ಬೃಹತ್ ಪ್ಲಾನ್!

ಬೆಳಗಾವಿಯಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಕೇವಲ ಮೆರವಣಿಗೆಯಷ್ಟೇ ಅಲ್ಲದೆ, ಶೈಕ್ಷಣಿಕ ಕ್ರಾಂತಿಯ ಹೊಸ ಮೈಲಿಗಲ್ಲಿಗೆ ಈ ಬಾರಿ ಮಹಾನಗರ ಪಾಲಿಕೆ ಮುನ್ನುಡಿ ಬರೆಯುತ್ತಿದೆ. ಇಂದು ಮಹಾಪೌರರ ಅಧ್ಯಕ್ಷತೆಯಲ್ಲಿ ಡಾ. ಅಂಬೇಡ್ಕರ್ ಜಯಂತಿಗೆ ಸಂಬಂಧಿಸಿದಂತೆ ಇಂದು ಪೂರ್ವಭಾವಿ ಸಭೆ ನಡೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ …

Read More »

ಜಿಲ್ಲೆಯ ರೈತರು ಹಾಗೂ ಗ್ರಾಹಕರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನಿಟ್ಟು ಅಧಿಕ ಪ್ರಮಾಣದಲ್ಲಿ ಠೇವು ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಠೇವು ಬ್ಯಾಂಕಿಗೆ ಬಂದಿದೆ.

ಬೆಳಗಾವಿ:ಜಿಲ್ಲೆಯ ರೈತರು ಹಾಗೂ ಗ್ರಾಹಕರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನಿಟ್ಟು ಅಧಿಕ ಪ್ರಮಾಣದಲ್ಲಿ ಠೇವು ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಠೇವು ಬ್ಯಾಂಕಿಗೆ ಬಂದಿದೆ. ನಮ್ಮ ಹೊಸ ಆಡಳಿತವನ್ನು ಒಪ್ಪಿಕೊಂಡು ಗ್ರಾಹಕರು ವಿಶ್ವಾಸದಿಂದ ವ್ಯವಹಾರ ನಡೆಸುತ್ತಿದ್ದಾರೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಬ್ಯಾಂಕಿನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಪ್ರಸ್ತುತ ವರ್ಷದಲ್ಲಿ ಬ್ಯಾಂಕ್ 56.25 ಕೋಟಿ ರೂ. ಲಾಭ ಗಳಿಸಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು …

Read More »

ವಿದೇಶಿಗರ ಪಾರ್ಟಿ,ಅಕ್ರಮ ಕಲ್ಲು ಗಣಿಗಾರಿಕೆ, ಅನ್ನ ಭಾಗ್ಯ ಅಕ್ಕಿ ಮಾರಾಟ – ಮುನಿರಾಬಾದ್ ಪೊಲೀಸ್ ಠಾಣೆ PSI ಸುನೀಲ್ ತಲೆದಂಡ..!!

ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಅವರನ್ನ ಅಮಾನತು ಮಾಡಿ ಕೊಪ್ಪಳ ಎಸ್‌ಪಿ ರಾಮ್ ಅರಸಿದ್ದಿ ಆದೇಶಿಸಿದ್ದಾರೆ. ಆಡಳಿತಾತ್ಮಕ ವಿಚಾರದಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ ಅಮಾನತು ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದಲೂ ಮುನಿರಾಬಾದ್ ಠಾಣೆಯ PSI ಆಗಿ ಸುನೀಲ್ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಅನಧಿಕೃತ ಚಟುವಟಿಕೆಗಳು ನಡೆದಿದ್ವು. ವಿದೇಶಿಗರ ಪಾರ್ಟಿ,ಅಕ್ರಮ ಕಲ್ಲು ಗಣಿಗಾರಿಕೆ,ಅನ್ನ ಭಾಗ್ಯ ಅಕ್ಕಿ ಮಾರಾಟದಂತಹ ಪ್ರಕರಣಗಳು ಬೆಳಕಿಗೆ …

Read More »

ಬೈಲಹೊಂಗಲ: ಶಬ್ದ ಮಾಲಿನ್ಯಕ್ಕೆ ಕಡಿವಾಣ — ಟ್ರ್ಯಾಕ್ಟರ್‌ಗಳ ಸೌಂಡ್ ಸಿಸ್ಟಮ್ ವಶ

ಬೈಲಹೊಂಗಲ ಪಟ್ಟಣದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಟ್ರ್ಯಾಕ್ಟರ್‌ಗಳಲ್ಲಿ ಅನಧಿಕೃತವಾಗಿ ಸೌಂಡ್ ಸಿಸ್ಟಮ್ ಅಳವಡಿಸಿಕೊಂಡು ಭಾರೀ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ರಸ್ತೆ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ದವರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದ್ದಾರೆ. ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಮಾಡುತ್ತಿರುವ ಟ್ರ್ಯಾಕ್ಟರ್‌ಗಳನ್ನು ಪತ್ತೆಹಚ್ಚಿ, ಅವುಗಳಲ್ಲಿ ಅಳವಡಿಸಿದ್ದ ಸೌಂಡ್ ಸಿಸ್ಟಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಶಬ್ದ ಮಾಲಿನ್ಯದಿಂದ ಜನರಿಗೆ ಆಗುವ ತೊಂದರೆಯನ್ನು ಮನಗಂಡು ಇಂತಹ …

Read More »

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಂದ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ

ಬೆಂಗಳೂರು:- ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಜನ ಗಣತಿ 2027ರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆ ಪರಿಚಯಿಸಿದ್ದು, ಇಂದು ಬುಧವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ತಮ್ಮ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ಪೂರ್ಣಗೊಳಿಸಿದರು. 2026 ರ ಏಪ್ರಿಲ್ 1 ರಿಂದ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿಕೊಳ್ಳಬೇಕೆಂದು ಅವರು ತಿಳಿಸಿದರು. ನಮ್ಮ ಜನಗಣತಿ – ನಮ್ಮ …

Read More »

ಬಿಜೆಪಿ ಗೆದ್ದರೆ ಗ್ರಾಮಗಳ ಸಮೃದ್ಧಿ: ವೀರಣ್ಣ ಚರಂತಿಮಠ

ಬಾಗಲಕೋಟೆ: ಅಭಿವೃದ್ಧಿ ಶೂನ್ಯ ಖದಂಪುರ ಬದಲಾವಣೆ ಆಗಿದ್ದು ಬಿಜೆಪಿ ಆಡಳಿತದ ಕಾಲದಲ್ಲಿ. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಮಾಡಿ ಅಲ್ಪಸಂಖ್ಯಾತರ ತುಷ್ಠಿಕರಣದಿಂದ ಗೆದ್ದು ದುರಾಡಳಿತ ಮಾಡುತ್ತಿದ್ದು ಅದಕ್ಕೊಂದು ಕೊನೆ ಕಾಣಿಸಲು ಬಿಜೆಪಿ ಗೆಲ್ಲಿಸಿ ಎಂದು ವೀರಣ್ಣ ಚರಂತಿಮಠ ಹೇಳಿದರು ಕದಾಂಪುರ ಗ್ರಾಮದಲ್ಲಿ ಹಮ್ಮಿಕೊಂಡ ಮತಯಾಚನೆ ಸಭೆಯಲ್ಲಿ ಮಾತನಾಡಿ ಗ್ರಾಮಗಳು ನಗರಗಳಿಗೆ ಪೈಪೋಟಿ ಕೊಡುವಂತೆ ಬೆಳೆದಿದ್ದು ಬಿಜೆಪಿ ಯೋಜನೆಗಳಿಂದ. ಗ್ರಾಮವು ಆರ್.ಸಿ ಕೇಂದ್ರವಾಗಿದ್ದು ಬಿಟಿಡಿಎದಿಂದ ಹಣ ತಂದು ರಸ್ತೆ ನಿರ್ಮಾಣ ಮಾಡಲಾಗಿತ್ತು …

Read More »

ಬೆಂಬಲದಿಂದ ಬಿಜೆಪಿ ಭದ್ರಕೋಟೆಯಾದ ಬಾಗಲಕೋಟೆ

ಬಾಗಲಕೋಟೆ: ಉಪಚುನಾವಣೆಯ ಹಿನ್ನೆಲೆ ಬಿಜೆಪಿ ಪ್ರಚಾರ ರಂಗೇರಿದ್ದು ಬಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಸಂಗೋದಿ, ಶಿರಗುಪ್ಪಿ ತಾಂಡಾ, ಸಿಕ್ಕೇರಿ, ಬೇವಿನಮಟ್ಟಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಲಾಯಿತು. ಮತಯಾಚನೆಯಲ್ಲಿ ವೀರಣ್ಣ ಚರಂತಿಮಠ ಮಾತನಾಡಿ ಸರಕಾರದಲ್ಲಿ ಹಣ ಇಲ್ಲ ಈ ಸರಕಾರ ತೊಲಗುವ ವರೆಗೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಉಪಚುನಾವಣೆಯಿಂದಲೇ ಕಾಂಗ್ರೆಸ್ ಪತಣ ಶುರುವಾಗಬೇಕು. ಚುನಾವಣೆ ಬೂತ್ ಗೆದ್ದರೆ ದೇಶ …

Read More »

ಕೈಚೀಲ ಖರೀದಿ ಅಕ್ರಮ – ರೋಹಿಣಿ ಸಿಂಧೂರಿಗೆ ಸಂಕಷ್ಟ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಿದೆ. ಕೈಚೀಲ ಖರೀದಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಪೂರ್ವಾನುಮತಿ ನೀಡುವಂತೆ ಹೈಕೋರ್ಟ್  ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೈಸೂರಿನಲ್ಲಿ  ಜಿಲ್ಲಾಧಿಕಾರಿಯಾಗಿದ್ದ ವೇಳೆ ಪರಿಸರ ಸ್ನೇಹಿ ಕೈಚೀಲ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಎಫ್‌ಐಆರ್ ದಾಖಲು ಮಾಡಲು ಮನವಿ ಮಾಡಲಾಗಿತ್ತು . ಆದರೆ ಪೂರ್ವಾನುಮತಿ ನೀಡಲು ಸರ್ಕಾರ ನಿರಾಕರಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರ …

Read More »