Breaking News

ಜಿಲ್ಲೆ

ಸ್ಮಶಾನ ಇಲ್ಲದ ಗ್ರಾಮಗಳಿಗೆ ಖಾಸಗಿ ಜಮೀನು ಖರೀದಿ: ಮೂರು ಪಟ್ಟು ದರ ನೀಡಲು ಸರಕಾರ ಸಿದ್ಧ : ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು : ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂ ಮಂಜೂರಿಗೆ ಸರಕಾರಿ ಜಮೀನು ಇಲ್ಲದಿದ್ದರೆ, ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹಣ ನೀಡಿ ಖಾಸಗಿ ಜಮೀನು ಖರೀದಿಗೆ ಸರಕಾರ ಸಿದ್ದ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಪ್ರಭು ಚೌವ್ಹಾಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, 70 ವರ್ಷಗಳಿಂದ ಎಲ್ಲ ಸರಕಾರಗಳು ಇರುವ ಭೂಮಿಯನ್ನೆಲ್ಲಾ ರೈತರಿಗೆ ಹಾಗೂ ವಿವಿಧ …

Read More »

ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಯಾವಾಗ?: ಇಲ್ಲಿದೆ ಸದನದಲ್ಲಿ ಸಚಿವರು ಕೊಟ್ಟ ಉತ್ತರ!

ಬೆಂಗಳೂರು: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯದ ಹಂತದಲ್ಲಿರುವ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ರಾಜ್ಯದ ಒಟ್ಟು 5,685 ಗ್ರಾಮ ಪಂಚಾಯಿತಿಗಳ ಅವಧಿಯು ಜನವರಿ, ಫೆಬ್ರವರಿ ಮತ್ತು ಮಾರ್ಚ್ 2026ರ ಒಳಗೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2026-31ರ ಸಾಲಿನ ಸಾರ್ವತ್ರಿಕ …

Read More »

ಶಾಲೆ ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್‌ ಅಭಾವದ ಬಿಸಿ – ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಅಭಾವ  ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಪರಿಣಾಮ ಬೀರಿದೆ. ಗ್ಯಾಸ್ ಇಲ್ಲದೇ ಮೂಡಿಗೆರೆ  ತಾಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ (School) ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ. ಸಿಲಿಂಡರ್‌ ಸರಬರಾಜಾಗದೇ ಇದ್ದಿದ್ದರಿಂದ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲಿ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಲೆಯ ಸಿಬ್ಬಂದಿ, ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆಯಲ್ಲೇ ಅಡುಗೆ …

Read More »

ಜಗಳ ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ; ಗಂಡ – ಹೆಂಡತಿ ಜಗಳದಲಿ ಅಮಾಯಕ ಬಲಿ

ಚಿತ್ರದುರ್ಗ: ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅಂತೆಯೇ ಗಂಡ – ಹೆಂಡತಿಯ ಜಗಳ ( ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆಯಾದ ಪರಿಣಾಮ ವ್ಯಕ್ತಿಯೋರ್ವ ಬಲಿಯಾದ ಪ್ರಕರಣ ಚಿತ್ರದುರ್ಗದ  ಬುದ್ಧ ವೃತ್ತದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಸ್ಟೇಡಿಯಂ ರಸ್ತೆಯಲ್ಲಿನ ಬುದ್ಧ ವೃತ್ತದಲ್ಲಿ ಸಾಧಿಕ್‌ವುಲ್ಲಾ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದ. ಈ ವೇಳೆ ದಂಪತಿ ಜಗಳ ಬಿಡಿಸಲು ಮುಂದಾದ ತಾಜ್‌ಪೀರ್ (42) ಮೇಲೆ ಸಾಧಿಕ್‌ವುಲ್ಲಾ ಮಚ್ಚಿನಿಂದ ಹಲ್ಲೆ …

Read More »

ಸೌಹಾರ್ದತೆಯ ಸಂಕೇತ: ಇಫ್ತಾರ್ ಕೂಟದಲ್ಲಿ ಭಾಗಿ!

​ಯರಗಟ್ಟಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಆಯೋಜಿಸಿದ್ದ ಪವಿತ್ರ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಸೌಹಾರ್ದತೆಯ ಕ್ಷಣಗಳನ್ನು ಹಂಚಿಕೊಳ್ಳಲಾಯಿತು. ​ಈ ಪವಿತ್ರ ರಂಜಾನ್ ಮಾಸವು ಎಲ್ಲರ ಬಾಳಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಸಮಾಜದಲ್ಲಿ ಸಹೋದರತ್ವದ ಭಾವನೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾ, ಸಮಸ್ತ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ​ಈ ಸಂದರ್ಭದಲ್ಲಿ ಸಮುದಾಯದ ಪ್ರಮುಖರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.

Read More »

ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ: ಹಿರಿಯ ಮುಖಂಡರ ಸೇರ್ಪಡೆ 

​ಮುನವಳ್ಳಿ ಭಾಗದ ಹಿರಿಯ ರಾಜಕಾರಣಿಗಳು, ಪುರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ದುಂಡಪ್ಪ ಬುರ್ಜಿ ಅವರು ಇಂದು ಬಿಜೆಪಿ ತೊರೆದು ಅಧಿಕೃತವಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ​ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಜನಸೇವೆಯ ಮನೋಭಾವವು ಮುನವಳ್ಳಿ ಭಾಗದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿಯನ್ನು ನೀಡಲಿದೆ. ಶ್ರೀ ದುಂಡಪ್ಪ ಬುರ್ಜಿ ಅವರಿಗೆ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾ, ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ನಾವೆಲ್ಲರೂ …

Read More »

ಇಷ್ಟು ವರ್ಷ ಶಾಮನೂರರನ್ನು ಗೆಲ್ಲಿಸಿದ್ವಿ, ಈಗ ನಮಗೆ ಟಿಕೆಟ್ ಕೊಡಿ – ಮುಸ್ಲಿಂ ಮುಖಂಡರ ಒತ್ತಾಯ

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರನ್ನು ಇಷ್ಟು ವರ್ಷ ಗೆಲ್ಲಿಸಿಕೊಂಡು ಬಂದಿದ್ದೇವೆ. ಈ ಉಪಚುನಾವಣೆಯಲ್ಲಿ  ದಾವಣಗೆರೆ ದಕ್ಷಿಣ  ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ. ಇದರ ನಡುವೆ ಕೆಲವು ಮುಸ್ಲಿಂ ಮುಖಂಡರು ಸಮರ್ಥ್ ಶಾಮನೂರು ಅವರಿಗೆ ಟಿಕೇಟ್ ನೀಡುವಂತೆ ಸಿಎಂ ಹಾಗೂ ಡಿಸಿಎಂಗೆ ಒತ್ತಾಯಿಸಿದ್ದಾರೆ. ಸಮರ್ಥ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದ ಮುಸ್ಲಿಂ ಮುಖಂಡರ ವಿರುದ್ಧ ಅದೇ ಸಮುದಾಯದ ಯುವಕರು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಎಸ್.ಎಸ್ …

Read More »

ಬೆಳಗಾವಿಯಲ್ಲಿ ಸಾರಿಗೆ ಬಸ್ ಅಪಘಾತ: 11 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಬೆಳಗಾವಿ :ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹನ್ನೊಂದು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಖಾನಾಪುರ ತಾಲೂಕಿನ ನಂದಗಡದ ಸರಕಾರಿ ಆಸ್ಪತ್ರೆ ಎದುರುಗಡೆ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹನ್ನೊಂದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾನಾಪುರ ಘಟಕಕ್ಕೆ ಸೇರಿದ ಕೆಎ-೨೨ ಎಫ್-೨೧೦೩ ಸಂಖ್ಯೆಯ ಬಸ್ಸು ಖಾನಾಪುರದಿಂದ ಬೀಡಿಗೆ ತೆರಳುತ್ತಿತ್ತು. ನಂದಗಡದ ಸರಕಾರಿ ಆಸ್ಪತ್ರೆ ಎದುರುಗಡೆ ಬರುತ್ತಿದ್ದಾಗ, ಏಕಾಏಕಿ ರಸ್ತೆಗೆ ಅಡ್ಡ …

Read More »

ಗೊಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ-ತಾಂತ್ರಿಕ ಉತ್ಸವ

ಬೆಳಗಾವಿ: ಬೆಳಗಾವಿಯ KLS Gogte Institute of Technology ನಲ್ಲಿ ಮಾರ್ಚ್ 11 ರಿಂದ 14ರವರೆಗೆ ನಡೆದ AURA 2K26 ಸಾಂಸ್ಕೃತಿಕ ಹಾಗೂ ತಾಂತ್ರಿಕ ಉತ್ಸವ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ನವೀನತೆಗೆ ವೇದಿಕೆಯಾಗಿ ಭರ್ಜರಿಯಾಗಿ ನೆರವೇರಿತು. ನಾಲ್ಕು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಂಡಭಾವ, ನಾಯಕತ್ವ ಹಾಗೂ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಿದವು. ಉತ್ಸವದ ಅಂಗವಾಗಿ ನೃತ್ಯ, ನಾಟಕ, ಸಂಗೀತ, …

Read More »

ಮಾರ್ಕೆಟ್ ಠಾಣೆ ಪೊಲೀಸರಿಂದ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ

ಬೆಳಗಾವಿ: ಬೆಳಗಾವಿಯ ಶೆಟ್ಟಿ ಗಲ್ಲಿಯಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸ ಓಡಾಡುತ್ತಿದ್ದ ವ್ಯಕ್ತಿ ವಿರುದ್ಧ ಮಾರ್ಕೆಟ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸುಜಲ್ ಕೃಷ್ಣಾನಾಥ ಪಾಟೀಲ (19) ಬಂಧಿತ ಆರೋಪಿ. ಆರೋಪಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಮಾದಕ ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದೆ. ಮಾರ್ಕೆಟ್ ಪೊಲೀಸ್ ಪಿಎಸ್ಐ ವಿಠಲ ಹಾವನ್ನವರ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವನ ವಿರುದ್ಧ ಮಾರ್ಕೆಟ್ ಪೋಲೀಸ್ ಠಾಣೆ ಪ್ರಕರಣ ಸಂಖ್ಯೆ.51/2026 ಕಲಂ.27(b) …

Read More »