Breaking News
Home / ಜಿಲ್ಲೆ / ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ

ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ

Spread the love

ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ
ಆಹಾರ, ಔಷಧಿ ವಿತರಣೆ ಮತ್ತು ತುರ್ತು ಸೇವೆಗೆ ಸಜ್ಜಾಗಲು ಕರೆ

ಬೆಳಗಾವಿ, ಎಪ್ರಿಲ್ 16(ಕರ್ನಾಟಕ ವಾರ್ತೆ) ಕೋವಿಡ್-೧೯ ಕುರಿತು ಜನಜಾಗೃತಿ ಮೂಡಿಸುವುದರ ಜತೆಗೆ ತುರ್ತು ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಸಜ್ಜಾಗಿರುವ “ಕರೊನಾ ಸೈನಿಕರಿಗೆ” (ಸ್ವಯಂಸೇವಕರು) ಗುರುವಾರ ನಗರದ ವಾರ್ತಾಭವನದಲ್ಲಿ ಟಿ-ಶರ್ಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ ಅವರು, ಕರೊನಾ ಸೈನಿಕರು ತಾವು ವಾಸಿಸುವ ಪ್ರದೇಶದಲ್ಲಿ ಕರೊನಾ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಆಹಾರ, ಔಷಧಿ ಸಾಮಗ್ರಿಗಳು ಅಥವಾ ತುರ್ತು ವೈದ್ಯಕೀಯ ಸೌಲಭ್ಯಗಳ ಸಮಸ್ಯೆ ಕಂಡುಬಂದರೆ ಈ ಬಗ್ಗೆ ಮಾಹಿತಿ ಕಲೆಹಾಕಿ ಅಗತ್ಯ ನೆರವು ನೀಡಬೇಕು. ಒಂದು ವೇಳೆ ತಮ್ಮ ಹಂತದಲ್ಲಿ ಸಾಧ್ಯವಾಗದಿದ್ದರೆ ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಕ್ಕೆ ತರಬೇಕು ಎಂದು ಡಾ.ಮಿಸಾಳೆ ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಗುರುನಾಥ ಕಡಬೂರ ಮಾತನಾಡಿ, ಕರೊನಾ ಸೈನಿಕರು ಪ್ರಮುಖವಾಗಿ ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಅವಶ್ಯಕತೆ ಇರುವವರಿಗೆ ಆಹಾರ, ಔಷಧಿಗಳನ್ನು ತಲುಪಿಸಲು ಮುಂದಾಗಬೇಕು ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ೨೦ ಸಾವಿರಕ್ಕೂ ಅಧಿಕ ಕರೊನಾ ಸೈನಿಕರು ಈ ರೀತಿಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಕರೊನಾಗೆ ಸಂಬಂಧಿಸಿದಂತೆ ಯಾವುದಾದರೂ ಸುಳ್ಳು ಸುದ್ದಿಗಳು ಕಂಡುಬಂದರೆ ತಕ್ಷಣ ನಮಗೆ ತಿಳಿಸಿ, ನಿಮ್ಮ ಪ್ರದೇಶದಲ್ಲಿ ಇರುವ ಸಮಸ್ಯೆಗಳನ್ನು ಆನ್ ಲೈನ್ ಮೂಲಕ ನಮಗೆ ತಿಳಿಸಿಬೇಕು. ಕೋರೊನಾ ಸೈನಿಕರು ನೀಡುವ ಮಾಹಿತಿ ಆಧರಿಸಿ ಸಂಬಂಧಪಟ್ಟವರಿಗೆ ಆ ಮಾಹಿತಿಯನ್ನು ಕಳುಹಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.‌ ಕರೊನಾ ಸೈನಿಕರು ಕೂಡ ಕೆಲಸದ ಸಂದರ್ಭದಲ್ಲಿ ತಮ್ಮ ಆರೋಗ್ಯ ಸುರಕ್ಷತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಗುರುನಾಥ ಕಡಬೂರ ಅವರು ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆಯ ಚೇರಮನ್ ಅಶೋಕ ಬದಾಮಿ, ಕರೊನಾ ಸೈನಿಕರು ತಮ್ಮ ಸುರಕ್ಷತೆಗಾಗಿ ಮೊದಲು ಕ್ರಮ ಕೈಗೊಳ್ಳಬೇಕು.
ಅವಶ್ಯಕತೆ ಇರುವರಿಗೆ ಸಹಾಯ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮಾರ್ಗದರ್ಶನ ನೀಡಿದರು.

ಕರೊನಾ ಸೈನಿಕರ ಕಾರ್ಯಚಟುವಟಿಕೆಗಳ ನೇತೃತ್ವ ವಹಿಸಿರುವ ಡಾ.ಶಿವಾನಂದ ಡುಮ್ಮಗೋಳ, ಬಸವರಾಜ ಕೊಳುಚೆ, ಶ್ರೀನಿವಾಸ್ ಎಲ್.ವಿ., ಪ್ರೊ. ಅವಧೂತ್ ಮಾನಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಗಾವಿ ನಗರ ಮತ್ತು ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಕರೊನಾ ಸೈನಿಕರಾದ ವಿನಾಯಕ ನ್ಯಾಮಗೌಡರ್, ಮಂಜುನಾಥ ಕಲ್ಲನವರ್, ಪ್ರವಿಣ ಹೀರೆಮಠ, ರಂಜಿತ್ ಜೈನ್, ಕೊಮಲ ಕೊಳ್ಳಿಮಠ, ಸಂಪತ್ ದೇಸಾಯಿ, ಚೇತನ ದಿಗಲ್, ಆಶಿಷ್ ಭಾವಿಕಟ್ಟಿ, ಮಂಜುನಾಥ ಕುಲಕರ್ಣಿ ಸೇರಿದಂತೆ ೩೦ ಕ್ಕೂ ಅಧಿಕ ಜನರು ಸಭೆಯಲ್ಲಿ ಉಪಸ್ಥಿತರಿದ್ದರು.
****


Spread the love

About Laxminews 24x7

Check Also

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಬಿಗ್ ಶಾಕ್ :ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ

Spread the loveಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಲ್ಬುರ್ಗಿ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಲಿಕಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ