Breaking News
Home / ಜಿಲ್ಲೆ / ಬೆಳಗಾವಿ (page 387)

ಬೆಳಗಾವಿ

331 ಮಂದಿ ಗುಣಮುಖ, ಬಿಡುಗಡೆ.

ಬೆಳಗಾವಿ: ‘ಜಿಲ್ಲೆಯಲ್ಲಿ ಹೊಸದಾಗಿ 154 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ. ‘331 ಗುಣಮುಖರಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ತಾಲ್ಲೂಕಿನ ಮೂವರು ಹಾಗೂ ಬೈಲಹೊಂಲಗದ ಇಬ್ಬರು ಸೇರಿ ಐವರು ಮೃತಪಟ್ಟಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಇತ್ತು’ ಎಂದು ಮಾಹಿತಿ ನೀಡಿದೆ.

Read More »

ಅಕ್ರಮ ಸಾಗಣೆ: 996 ಲೀಟರ್ ಗೋವಾ ಮದ್ಯ ವಶ

ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 996 ಲೀಟರ್‌ ಮದ್ಯವನ್ನು ವಾಹನ ಸಮೇತ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ‘ಗುಜರಾತ್‌ನ ಜೋಠಾಣಾ ತಾಲ್ಲೂಕಿನ ಕಡವಾಜಿ ಗುಲಬಾಜಿ ಠಾಕೂರ (48) ಹಾಗೂ ರಾಜೂಜಿ ಮನಾಜಿ ಠಾಕೂರ (37) ಬಂಧಿತರು. ವಾಹನದ ಮಾಲೀಕರನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. 4ನೇ ಆರೋಪಿ, ಗುಜರಾತ್‌ನಲ್ಲಿ ಅಕ್ರಮ ಮದ್ಯ ಪಡೆದು ಮಾರುತ್ತಿರುವ ವೀರಸಿಂಗ್ ಮಾನಾಜಿ ಠಾಕೂರ ಅವರನ್ನೂ ಬಂಧಿಸಬೇಕಾಗಿದೆ. ವಶಪಡಿಸಿಕೊಂಡ ವಾಹನ ಹಾಗೂ …

Read More »

ಬೆಳಗಾವಿಯಲ್ಲಿ ಅಬ್ಬರವಿಲ್ಲದೆ ಗಣೇಶ ಮೂರ್ತಿಗಳಿಗೆ ವಿದಾಯ

ಬೆಳಗಾವಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವು ಸರಳ, ಸಾಂಪ್ರದಾಯಿಕ ಹಾಗೂ ಶ್ರ‌ದ್ಧಾ- ಭಕ್ತಿಯಿಂದ ಮಂಗಳವಾರ ನೆರವೇರಿತು. ಕೊರೊನಾ ಕಾರಣದಿಂದ ಅದ್ಧೂರಿ ಮೆರವಣಿಗೆ ಮತ್ತು ಸೌಂಡ್ ಸಿಸ್ಟಂಗಳ ಅಬ್ಬರವಿರಲಿಲ್ಲ. 300ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನವೇ ಕೆಲವು ಮಂಡಳದವರು ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದರು. ಬಹುತೇಕ ಮೂರ್ತಿಗಳಿಗೆ ಮಂಗಳವಾರ ವಿದಾಯ ಹೇಳಲಾಯಿತು. ಗಣೇಶೋತ್ಸವ ಮಂಡಳದವರು, ಸ್ಥಳೀಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು …

Read More »

ನೀರಾವರಿ ಯೋಜನೆಗಳಿಗೆ 1699 ಕೋಟಿ

ರಾಯಬಾಗ: ಮತಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ರೂ.1699 ಕೋಟಿ ಹಣ ಮಂಜೂರು ಮಾಡಿದ್ದಾರೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಸೋಮವಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಯಬಾಗ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಸತತ ಬರಗಾಲ ಅನುಭವಿಸುತ್ತಿರುವ ಗ್ರಾಮಗಳ ರೈತರ ಬೆಳೆಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯಲು ಕಾಯಂ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ …

Read More »

ಪ್ರಥಮ ದರ್ಜೆ ಕಾಲೇಜ್ 2ನೇ ಹಂತದ ಕಟ್ಟಡ ಕಾಮಗಾರಿಗೆ ಕುಲಪತಿ ಪ್ರೋ.ಎಂ ರಾಮಚಂದ್ರಗೌಡ ಸೋಮವಾರ ಚಾಲನೆ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್ 2ನೇ ಹಂತದ ಕಟ್ಟಡ ಕಾಮಗಾರಿಗೆ ಕುಲಪತಿ ಪ್ರೋ.ಎಂ ರಾಮಚಂದ್ರಗೌಡ ಸೋಮವಾರ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿ, ಸಂಗೊಳ್ಳಿ ರಾಯಣ್ಣ  ಪ್ರಥಮ ದರ್ಜೆ ಕಾಲೇಜ್ ಸುಸಜ್ಜಿತವಾದ ಮೂಲ ಸೌಕರ್ಯದೊಂದಿಗೆ  ಗ್ರಾಮೀಣ ಪ್ರತಿಭೆಗಳ ಉನ್ನತ ವ್ಯಾಸಂಗದ ಕನಸನ್ನು ನನಸು ಮಾಡುವ ಉದ್ದೇಶ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೊಂದಿದೆ. ಸುಮಾರು 9.8 ಕೋಟಿ ವೆಚ್ಚದಲ್ಲಿ  ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. …

Read More »

ಬೆಳಗಾವಿ ಜಿಲ್ಲೆಯ ಪ್ರಮುಖ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆಯ ನಡುವೆಯೂ  ಸೆ.30ರವರೆಗೆ ಬಂದ್

ಬೆಳಗಾವಿ: ಬೆಳಗಾವಿ ಜಿಲ್ಲೆಯ ಪ್ರಮುಖ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆಯ ನಡುವೆಯೂ  ಸೆ.30ರವರೆಗೆ ಬಂದ್ ಮಾಡಲಾಗಿದೆ. ಸುಪ್ರಸಿದ್ಧ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ , ಜೋಗುಳಬಾವಿ ಸತ್ಯಮ್ಮ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮುಂದುವರೆದಿದೆ.     ಈ ಮೂರು ದೇವಾಲಯಗಳಿಗೂ ಮಹಾರಾಷ್ಟ್ರಾದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಕೊರೊನಾ ಹಿನ್ನೆಲೆ ಭಕ್ತರ ಹಿತದೃಷ್ಟಿಯಿಂದ ಇನ್ನೂ ಒಂದು ತಿಂಗಳವರೆಗೂ ಈ ದೇವಾಲಯಗಳ ಬಾಗಿಲು ತೆರೆಯದಂತೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ …

Read More »

ಶ್ರೀ ಸಂತೋಷ. ರ. ಜಾರಕಿಹೊಳಿಯವರಿಂದ ಪ್ರತಿಕಾ ಮಿತ್ರರಿಗೆ ಖಡಕ್ ವಾರ್ನಿಂಗ್

ಗೋಕಾಕ ನಗರದ ಎಲ್ಲಾ ಪತ್ರಿಕಾ ಮಾಧ್ಯಮದ ಮಿತ್ರ ರನ್ನ ಶ್ರೀ ಸಂತೋಷ್ ಜಾರಕಿಹೊಳಿ ಅವರು ತಮ್ಮ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಒಂದು ಔತಣ ಕೂಟಕ್ಕೆ ಕರೆದಿದ್ದರು ಇಲ್ಲಿ ಸುಮಾರು ಜನ ಕೂಡ ಭಾಗ ವಹಿಸಿದ್ದರು, ಗೋಕಾಕ ನಗರದ ಎಲ್ಲಾ ವಾರ ಪತ್ರಿಕೆ,ದಿನ ಪತ್ರಿಕೆ ,ಹಾಗೂ ಯೂಟ್ಯೂಬ್ ಚಾನಲ್ ಗಳ ವರದಿಗಾರರು ಈ ಸಭೆಯಲ್ಲಿ ಭಾಗ ವಹಿಸಿದ್ದರು, ಸಭೆಯ ಮುಖ್ಯ ಉದ್ದೇಶ ಏನಂದ್ರೆ ಎಲ್ಲರೂ ಒಂದಾಗಿ ಇರಿ ನಿಮ್ಮ , …

Read More »

ಸಚಿವೆ ಶಶಿಕಲಾ ಜೊಲ್ಲೆಗೆ ಕೊರೊನಾ ಸೋಂಕು ದೃಢ

ಬೆಳಗಾವಿ : ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಸಚಿವೆ ಶಶಿಕಲಾ ಜೊಲ್ಲೆ, ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ 14 ದಿನ ಮನೆಯಲ್ಲಿಯೇ ಕ್ವಾರೆಂಟೇನ್ ಆಗಲಿದ್ದೇನೆ. ನನ್ನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೇನ್ ಆಗಬೇಕಾಗಿ ವಿನಂತಿ. ಸದ್ಯಕ್ಕೆ …

Read More »

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತೋಷ ಜಾರಕಿಹೊಳಿ ಸಂತಾಪ

ಗೋಕಾಕ : ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯ ಚೇರಮನರಾದ ಶ್ರೀ ಸಂತೋಷ ಜಾರಕಿಹೊಳಿ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ಮುತ್ಸದ್ಧಿಯಾಗಿದ್ದ ಮುಖರ್ಜಿ ಅವರು ಕೇಂದ್ರದಲ್ಲಿ ಹಣಕಾಸು, ರಕ್ಷಣಾ, ವಿದೇಶಾಂಗ ವ್ಯವಹಾರ, ವಾಣಿಜ್ಯ ಮತ್ತು ಉದ್ಧಿಮೆ, ಸಾರಿಗೆ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಭಾರತದ ಪ್ರಥಮ ಪ್ರಜೆಯಾಗಿ ಉತ್ತಮ ಕಾರ್ಯಭಾರ ನಿರ್ವಹಿಸಿದ್ದರು. ಇವರ ನಿಧನದಿಂದ ಇಡೀ ರಾಷ್ಟ್ರಕ್ಕೆ ನಷ್ಟವಾಗಿದೆ. …

Read More »

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

  ಗೋಕಾಕ : ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ಮುತ್ಸದ್ಧಿಯಾಗಿದ್ದ ಮುಖರ್ಜಿ ಅವರು ಕೇಂದ್ರದಲ್ಲಿ ಹಣಕಾಸು, ರಕ್ಷಣಾ, ವಿದೇಶಾಂಗ ವ್ಯವಹಾರ, ವಾಣಿಜ್ಯ ಮತ್ತು ಉದ್ಧಿಮೆ, ಸಾರಿಗೆ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಭಾರತದ ಪ್ರಥಮ ಪ್ರಜೆಯಾಗಿ ಉತ್ತಮ ಕಾರ್ಯಭಾರ ನಿರ್ವಹಿಸಿದ್ದರು. ಇವರ ನಿಧನದಿಂದ ಇಡೀ ರಾಷ್ಟ್ರಕ್ಕೆ …

Read More »