Breaking News
Home / ಜಿಲ್ಲೆ / ಬೆಳಗಾವಿ (page 410)

ಬೆಳಗಾವಿ

ಸಂಬಳ ಕೊಟ್ಟಿಲ್ಲ ಎಂದು ಎಂದು ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾದ ಕರೋನಾ ಸೋಂಕಿತ..

ಬೆಳಗಾವಿ: ಕೊರೊನಾ ಸೋಂಕಿತನೋರ್ವ ಆಸ್ಪತ್ರೆಯ ಕಟ್ಟಡ ಏರಿ ಆತ್ಮಹತ್ಯೆ  ಬೆದರಿಕೆ ಹಾಕಿರುವ ಘಟನೆ ಗೋಕಾಕ್ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಈತನಿಗೆ ಸೋಮವಾರ ಬೆಳಿಗ್ಗೆ ಕೊರೊನಾ ಪಾಸಿಟಿವ್ ಬಂದಿದೆ.   ಬಳಿಕ ಆಸ್ಪತ್ರೆ ಕಟ್ಟಡ ಏರಿ ಕಳೆದ 6 ತಿಂಗಳಿಂದ ವೇತನ ನೀಡಿಲ್ಲ. ಸುಮಾರು 40 ಜನರು ಕೆಲಸ ನಿರ್ವಹಿಸುತ್ತಿದ್ದೆವೆ.   ಎಲ್ಲ ಕುಟುಂಬಗಳು ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿವೆ.  ಗುತ್ತಿಗೆ ಕಾರ್ಮಿಕರಿಗೆ …

Read More »

ಕನ್ನಡ ಭಾಷೆಗೆ ಅವಮಾನಿಸಿದ ಸಚಿವ ಶ್ರೀಮಂತ ಪಾಟೀಲ ಚಿವ ಸಂಪುಟದಿಂದ ಕೈಬಿಡಬೇಕ: ಕರ್ನಾಟಕ ರಕ್ಷಣಾ ವೇದಿಕೆ

ಚಿಕ್ಕೋಡಿ : ಕನ್ನಡ ಭಾಷೆಗೆ ಅವಮಾನಿಸಿದ ಸಚಿವ ಶ್ರೀಮಂತ ಪಾಟೀಲರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ಈಚೆಗೆ ನಡೆದ ಸಕ್ಕರೆ ಕಾರ್ಖಾನೆಯ ಅಡಿಗಲ್ಲು ಸಮಾರಂಭದ ವೇದಿಕೆಯಲ್ಲಿ ಮರಾಠಿ ನಾಮಫಲಕ ಹಾಕುವ ಜತೆಗೆ ಸಚಿವ ಶ್ರೀಮಂತ ಪಾಟೀಲರು ಕನ್ನಡ ಭಾಷೆ ಮರೆತು ಮರಾಠಿಯಲ್ಲಿಯೇ ಮಾತನಾಡಿದ್ದಾರೆ.  ಇದು ಕನ್ನಡಿಗರಿಗೆ ನೋವುಂಟು ಮಾಡಿದ್ದಾರೆ. ಮರಾಠಿ …

Read More »

ಈ ವರ್ಷ ಸ್ವಾತಂತ್ರ್ಯೋತ್ಸವವನ್ನು ಸರಳ ರೀತಿ ಆಚರಿಸಲಾಗುತ್ತದೆ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ  ಈ ವರ್ಷ ಸ್ವಾತಂತ್ರ್ಯೋತ್ಸವವನ್ನು ಸರಳ ರೀತಿ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸ್ವಾತಂತ್ರ್ಯ ದಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸ್ವಾತಂತ್ರೋತ್ಸವಕ್ಕೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದ್ರೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಬಾರಿ ಸರಳ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ. …

Read More »

ಮಕ್ಕಳ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ

ಬೆಳಗಾವಿ: ‘ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಆ.15ರ ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಅಂತರ ಕಾಯ್ದುಕೊಂಡು ಭಾಗವಹಿಸಬೇಕು. ಪ್ರತಿ ವರ್ಷದಂತೆ …

Read More »

ಜಿಲ್ಲಾಡಳಿತ ಮತ್ತು ಬಿಮ್ಸ್ ಎಡವಟ್ಟು: ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ?

ಬೆಳಗಾವಿ: ಜಿಲ್ಲಾಡಳಿತ ಮತ್ತು ಬಿಮ್ಸ್ ಆಸ್ಪತ್ರೆ ಎಡವಟ್ಟಿನಿಂದ ಕೊವಿಡ್ ವಿಚಾರದಲ್ಲಿ ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ ಎಂಬ ಆತಂಕ ಉಂಟಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿತ್ಯವೂ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಇನ್ನೂರು, ಮುನ್ನೂರರ ಗಡಿ ದಾಟುತ್ತಿದೆ. ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾದ್ರೂ ಮುಚ್ಚಿಡುವ ಪ್ರಯತ್ನ? ಮಾಡುತ್ತಿದೆ. ಮೃತದೇಹ ಸಾಗಿಸುವ ವಾಹನದ ಡ್ರೈವರ್ ಹೇಳುವಂತೆ ನಿತ್ಯವೂ ಹದಿನೈದರಿಂದ ಹದಿನೆಂಟು ಸೋಂಕಿತರು ಮೃತಪಡುತ್ತಿದ್ದಾರಂತೆ. ವಯಸ್ಸಾದವರು ಆಸ್ಪತ್ರೆಗೆ ದಾಖಲಾದ್ರೂ ಚಿಕಿತ್ಸೆ …

Read More »

ರಾಜ್ಯದಾದ್ಯಂತ ಎಲ್ಲ ತಾಲ್ಲೂಕು ಕಚೇರಿಗಳ ಮುಂದೆ ಇದೇ ಅಗಸ್ಟ್ 10 ರಂದು ಧರಣಿ

ಬೆಳಗಾವಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ರಾಜ್ಯದಾದ್ಯಂತ ಎಲ್ಲ ತಾಲ್ಲೂಕು ಕಚೇರಿಗಳ ಮುಂದೆ ಇದೇ ಅಗಸ್ಟ್ 10 ರಂದು  ‘ಕಾರ್ಪೊರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶವನ್ನೇ ಖಾಸಗಿ ಬಂಡವಾಳಗಾರರಿಗೆ, ಕಾರ್ಪೊರೇಟ್ ಕಂಪನಿಗಳಿಗೆ …

Read More »

ಅಂಕಲಗಿ ಗ್ರಾಮದ ೧೪ ವರ್ಷದ ಯುವಕನಿಗೆ ಹಾಗೂ ಘಟಪ್ರಭಾದ ೨೫ ವರ್ಷದ ಯುವತಿಗೆ ಸೋಂಕು ಪತ್ತೆ

ಗೋಕಾಕ: ಕಳೆದ ಕೆಲವು ದಿನಗಳಿಂದ ತನ್ನ ಆರ್ಭಟ ನಡೆಸಿದ್ದ ಕರೋನಾ ಮಹಾಮಾರಿಯು ಇಂದು ಸ್ವಲ್ಪ ತಗ್ಗಿದೆ. ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕುಸಿತ ಖಂಡಿದ್ದು, ತಾಲೂಕಿನಲ್ಲಿ ೨ ಸೋಂಕು ಮಾತ್ರ ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು. {LAXMINEWS}ಯೊಂದಿಗೆ ಮಾತನಾಡಿದ ಅವರು  ತಾಲ್ಲೂಕಿನಲಿ ಅಂಕಲಗಿ ಗ್ರಾಮದ ೧೪ ವರ್ಷದ ಯುವಕನಿಗೆ ಹಾಗೂ ಘಟಪ್ರಭಾದ ೨೫ ವರ್ಷದ ಯುವತಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಿಗೆ ಕೋವಿಡ್ …

Read More »

ಲಾಕ್‌ಡೌನ್‌ನಲ್ಲೂ 100 ಯಶಸ್ವಿ ಡಯಾಲಿಸಿಸ್‌

ಬೆಳಗಾವಿ: ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ರೋಟರಿ-ಕೆಎಲ್‌ಇ ಡಯಾಲಿಸಿಸ್ ಕೇಂದ್ರದಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲೂ 100 ಮೂತ್ರಪಿಂಡ ರೋಗಿಗಳಿಗೆ ಡಯಾಲಿಸಿಸ್‌ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಈಚೆಗೆ ವೈದ್ಯರ ತಂಡಕ್ಕೆ ಶುಭ ಹಾರೈಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಮೂತ್ರಪಿಂಡ ತಜ್ಞ ಡಾ.ವಿಜಯಕುಮಾರ ಪಾಟೀಲ, ‘ಮೂತ್ರಪಿಂಡ ಕಾಯಿಲೆ ಇರುವ ರೋಗಿಗಳಿಗೆ ಡಯಾಲಿಸಿಸ್‌ ಕಡ್ಡಾಯವಾಗಿ ಬೇಕಾಗಿರುವ ಚಿಕಿತ್ಸೆಯಾಗಿದೆ. ಕೊರೊನಾ ಸೋಂಕಿನ ಭೀತಿಯ ಸಂದರ್ಭದಲ್ಲಿ ರೋಗಿಗಳು ಹೆದರುವ ಅಗತ್ಯವಿಲ್ಲ. ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾ ಧೈರ್ಯವಾಗಿ ಆಸ್ಪತ್ರೆಗೆ …

Read More »

ಸದ್ಯ 3456 ಸೋಂಕಿತರು…..

ಬೆಳಗಾವಿ: ಕೋವಿಡ್ ಮಹಾಮಾರಿ ದಿನದಿಂದ ದಿನಕ್ಕೂ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ ಮತ್ತೆ ದ್ವಿಶತಕ ದಾಟಿದೆ. 219 ಸೋಂಕು ಪ್ರಕರಣ ದೃಢಪಟ್ಟಿವೆ. ಒಟ್ಟಾರೆ 3456 ಸೋಂಕಿತರು ಇದ್ದು, ಜತೆಗೆ ನಾಲ್ವರು ಕೋವಿಡ್ ಗೆ ಬಲಿಯಾಗಿದ್ದಾರೆ. ಕೋವಿಡ್ ಸೋಂಕಿತರ ಏರಿಕೆ ಪ್ರಮಾಣ ಹೆಚ್ಚುತ್ತಲೇ ಹೊರಟಿದ್ದು, ಕಳೆದ ಒಂದು ವಾರದಿಂದ ದಿನನಿತ್ಯ 200ರ ಗಡಿ ದಾಟುತ್ತಲೇ ಸಾಗಿದೆ. ಸಾವಿನ ಸಂಖ್ಯೆಯೂ ಇಳಿಕೆ ಆಗಿಲ್ಲ. ಹೆಚ್ಚಿನ ಸೋಂಕಿತರು ಹಳ್ಳಿಗಳಲ್ಲಿ ಪತ್ತೆಯಾಗುತ್ತಿದ್ದಾರೆ. ರಾಯಬಾಗದ 60 ವರ್ಷದ ವ್ಯಕ್ತಿ, …

Read More »

ಬೆಳಗಾವಿ: ಕೆರೆಗೆ ಜಿಗಿದು ಪ್ರಾಣಬಿಟ್ಟ ಯುವತಿ

ಬೆಳಗಾವಿ:ಕೆರೆಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗಾವಿ ತಾಲೂಕಿನ ಯಳ್ಳೂರ ಹತ್ತಿರ ಅರವಳಿಯಲ್ಲಿ ನಡೆದಿದೆ. ಇಲ್ಲಿನ ಭಾಗ್ಯನಗರದ ಸೋನಾಲಿ ಸಂಜಯ ಸುರೇಕರ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಧ್ಯಾಹ್ನ ತಮ್ಮ ತಂದೆಯ ದ್ವಿಚಕ್ರ ವಾಹನ ತೆಗೆದುಕೊಂಡು ಯಳ್ಳೂರ ಹತ್ತಿರ ಇರುವ ಅರವಳಿ ಕೆರೆಗೆ ತೆರಳಿದ್ದಾಳೆ. ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಮೊಬೈಲ್‌ ಅನ್ನು ದ್ವಿಚಕ್ರ ವಾಹನದಲ್ಲಿಟ್ಟು ಕೆರೆಗೆ ಹಾರಿದ್ದಾಳೆ. ಈ ಘಟನೆಯನ್ನು ಸ್ಥಳೀಯರು ಪ್ರತ್ಯಕ್ಷವಾಗಿ ನೋಡಿದ್ದರಿಂದ ತಕ್ಷಣ ಘಟನಾ …

Read More »