Breaking News
Home / ಜಿಲ್ಲೆ / ಬೆಳಗಾವಿ (page 386)

ಬೆಳಗಾವಿ

ಸಿದ್ದಪ್ಪ ಕನಮಡ್ಡಿ ಕೊಲೆ ಪ್ರಕರಣ: ₹ 30.48 ಲಕ್ಷ, ಮಾರಕಾಸ್ತ್ರ ವಶ

ಗೋಕಾಕ: ಇಲ್ಲಿ ಮೇ 6ರಂದು ನಡೆದಿದ್ದ ಯುವ ಮುಖಂಡ, ಆದಿಜಾಂಬವ ನಗರ ಬಡಾವಣೆಯ ನಿವಾಸಿ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳು ಮತ್ತು ಅವರ ಸಹಚರರ ಮನೆಗಳ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, ₹ 30.48 ಲಕ್ಷ ನಗದು, ಮಾರಕಾಸ್ತ್ರ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.     ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು. ‘ಇಲ್ಲಿನ …

Read More »

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಿದ್ದಪ್ಪ  ಓ. ಹಲಸಗಿ (53)  ನಿಧನ

ಬೆಳಗಾವಿ – ಕೊರೋನಾದಿಂದಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಿದ್ದಪ್ಪ  ಓ. ಹಲಸಗಿ (53)  ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೂ ಸೋಂಕು ತಗುಲಿರುವುದಾಗಿ ಗೊತ್ತಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕೊರೋನಾ ವ್ಯಾಪಿಸುತ್ತಿರುವ ಕುರಿತು ಪ್ರಗತಿವಾಹಿನಿ ಈ ಹಿಂದೆಯೇ ವರದಿ ಪ್ರಕಟಿಸಿತ್ತು. ಹಲವು ದಶಕಗಳ ಸುದೀರ್ಘ ಶೈಕ್ಷಣಿಕ ಜೀವನದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ …

Read More »

ಗೋಕಾಕ ನಲ್ಲಿ ಸಿದ್ದು ಕನಮಡ್ಡಿ ಕೊಲೆಗೆ ಹೊಸ ತೀರವು

ಗೋಕಾಕ : ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಿ‌ನ್ನೆ ರಾತ್ರಿ ಆರೋಪಿಗಳ ಮನೆಗಳ ಮೇಲೆ ಸರ್ಚ್ ವಾರಂಟ್ ಜೊತೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಮಾರಕಾಸ್ತ್ರ, ಮಾದಕ ವಸ್ತು ಸೇರಿದಂತೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳ …

Read More »

ನಿಸ್ವಾರ್ಥ ಭಕ್ತಿಯಿಂದ ಫಲ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ —– ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲ ನಡೆದನಾ ಸುಂಕಕಂಜಿ ಕಳವೆಯೆಲ್ಲ ಹೋಗಿ ಬರಿ ಗೋಣಿ ಉಳಿಯಿತ್ತು ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ ಮಾನವನ ಜೀವನ ತುಂಬಾ ಸೂಕ್ಷ್ಮವಾದುದು. ಆತನ ಬದುಕಿನಲ್ಲಿ ನಿಷ್ಠೆಯ ಸೇವೆ, ಪ್ರಾಮಾಣಿಕತೆ, ತ್ಯಾಗಕ್ಕೆ ಬೆಲೆ ಇದ್ದೇ ಇರುತ್ತದೆ. ಒಬ್ಬ ವ್ಯಕ್ತಿಯು ಹರಿದ ಗೋಣಿ ಚಿಲದಲ್ಲಿ ಭತ್ತವನ್ನು ತುಂಬಿಟ್ಟಿದ್ದ. ಭತ್ತವನ್ನು ಹೊಲದಿಂದ ಹಗಲಿನಲ್ಲಿ ಮನೆಗೆ ಸಾಗಿಸಿದರೆ ತೆರಿಗೆಯವರು ಸುಂಕ ವಿಧಿಸಬಹುದು …

Read More »

ಇಂಡಿಯನ್ ಎಕ್ಸ್ ಪ್ರೆಸ್: ಎನ್ ಜಿ ಓಗೆ ಆಯಂಬುಲೆನ್ಸ್ ದಾನ ನೀಡಿದ ಶಾಸಕ ಅನಿಲ್ ಬೆನಕೆ

ಬೆಳಗಾವಿ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಹೆಲ್ಪ್ ಫಾರ್ ನೀಡಿ ಎಂಬ ಎನ್ ಜಿ ಓಗೆ ಆಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಆಗಸ್ಟ್ 31 ರಂದು ಕೋವಿಡ್ ಸ್ಪೆಷಲ್ ವರ್ಕರ್, ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ವೇಳೆ ಎನ್ ಜಿ ಕಾರ್ಯಕರ್ತ ಸುರೇಂದತ್ರ ಅಂಗೋಲ್ಕರ್ ಆಯಂಬುಲೆನ್ಸ್ ಬೇಕೆಂದು ಮನವಿ ಮಾಡಿದ್ದರು. ಶಾಸಕ ಅನಿಲ್ ಬೆನಕೆ ಶಾಸಕರ ನಿಧಿಯನ್ನು …

Read More »

ಗೋಕಾಕ ತಾಲೂಕು ಆಸ್ಪತ್ರೆ ವರ್ತನೆಯ ಖಂಡಿಸಿ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುಷ್ಕರ.

ಗೋಕಾಕನಲ್ಲಿರುವ ಜನ ಪ್ರಸಿದ್ಧ ಆಸ್ಪತ್ರೆ ಅಂದರೆ ಅದು ಗೋಕಾಕ ಸರಕಾರಿ ತಾಲೂಕ ಆಸ್ಪತ್ರೆ. ಆದರೆ ಈ ಆಸ್ಪತ್ರೆಯಲ್ಲಿ ಕೆಲವು ಡಾಕ್ಟರಗಳು ಮತ್ತು ನರ್ಸಗಳಿಂದ ಅಮಾನವೀಯ ವರ್ತನೆಯಿಂದ ಕಪ್ಪು ಚುಕ್ಕಿ ಆಗಿದೆ ಎಂದರೆ ತಪ್ಪಾಗಲಾರದು. ಅದು ಹೇಗೆಂದರೆ ಕೆಲವು ದಿನಗಳಿಂದ ತಾಲೂಕ ಆಸ್ಪತ್ರೆಯಲ್ಲಿ ಬರುವಂತಹ ತುಂಬು ಗರ್ಭಿಣಿಯರು ತೋರಿಸಿಕೊಳ್ಳಲಿಕ್ಕೆ ಬಂದರೆ ಈ ಡಾಕ್ಟರಗಳು ಮತ್ತು ನರ್ಸಗಳಿಂದ ಅವರಿಗೆ ನರಕಯಾತನೆ ಆಗುವ ಹಾಗೆ ಮಾಡುತ್ತಾರೆ ಎಂದರೆ ತಪ್ಪಾಗಲಾರದು ಮತ್ತು ಆಸ್ಪತ್ರೆಗೆ ಬಂದ ತಕ್ಷಣ …

Read More »

ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ

ಬೆಳಗಾವಿ: ಕೊರೊನಾ ಬಗ್ಗೆ ಭಯ ಬೇಡ. ಆದರೆ, ಮುಂಜಾಗ್ರತೆ ವಹಿಸಬೇಕು. ಸೋಂಕು ಬಂತೆಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. – ಕೋವಿಡ್‌ನಿಂದ ಗುಣಮುಖರಾದ ರಾಮದುರ್ಗ ತಾಲ್ಲೂಕು ಕಟಕೋಳದ ಯುವಕ ಆನಂದ ಸಿದ್ನಾಳ ಅವರ ಸಲಹೆ ಇದು. ಕೋವಿಡ್ ಗೆದ್ದ ಕಥೆಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ‘ನಾನು ಚಾಲಕ. ಟ್ರಕ್ ಇದೆ. ಲಾಕ್‌ಡೌನ್‌ ಆದ ಸಮಯದಲ್ಲಿ ಕೆಲಸ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿತ್ತು. ಲಾಕ್‌ಡೌನ್‌ ತೆರವಾದ ನಂತರ ಕೆಲವು ದಿನ ಊರು ಸುತ್ತಿದೆ. ಹೋದ ಕಡೆಯಲ್ಲಿ …

Read More »

ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ. ಇದು …

Read More »

ಯುವಕರಿಗೆ ಪುಸ್ತಕ ಕೊಡಿಸಿದ ಪಿಎಸ್‌ಐ

ಕೌಜಲಗಿ: ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಎಸ್‌ಐ ಎಚ್.ಕೆ. ನೇರಳೆ ಅವರು ಗ್ರಾಮದ ಯುವಕರಿಗೆ ವೈಯಕ್ತಿಕವಾಗಿ ₹ 10ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡಿಸಿ ನೆರವಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಅವರು ನೀಡಿ ಗಮನಸೆಳೆದಿದ್ದಾರೆ. ಗ್ರಾಮದಲ್ಲಿ ಎಸ್‌ಡಿಎ, ಎಫ್‌ಡಿಎ, ಪಿಎಸ್‌ಐ, ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗಿದ್ದಾರೆ. ಈ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಯುವಕರು ತಿಳಿಸಿದರು.  

Read More »

ಕೊರೊನಾ ನಿಯಂತ್ರಣ: ಮಹಾಲಕ್ಷ್ಮಿಗೆ ಪ್ರಾರ್ಥನೆ

ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ತಾಲ್ಲೂಕಿನ ಸುಳೇಭಾವಿ ಗ್ರಾಮದಲ್ಲಿ ಮಹಾಲಕ್ಷ್ಮೀದೇವಿ ಸೇರಿ ಎಲ್ಲ ದೇವರಿಗೆ ಮಂಗಳವಾರ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಮಂಗಳವಾರ ಪ್ರಾರ್ಥಿಸಲಾಯಿತು. ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ನೇತೃತ್ವದಲ್ಲಿ ಪ್ರಮುಖರು ಮತ್ತು ಪೂಜಾರಿಗಳು ಪೂಜೆ ಸಲ್ಲಿಸಿದರು. ಕಲ್ಮೇಶ್ವರ, ವೀರಭದ್ರೇಶ್ವರ, ಯಲ್ಲಮ್ಮ ದೇವಿ, ಶಾಖಾಂಬರಿ ದೇವಿ, ಬನಶಂಕರಿ ದೇವಿ, ಮಹಾರಾಣಿ ದೇವಿ, ದುರ್ಗಾದೇವಿ, ಗಣೇಶ, ಮಾರುತಿ, ಬ್ರಹ್ಮ, ವಿಠ್ಠಲ-ರುಕ್ಮಿಣಿ ದೇವರನ್ನು ಪೂಜಿಸಿದರು. ಹಿರಿಯರಾದ ಬಸನಗೌಡ ಪಾಟೀಲ ಮಾತನಾಡಿ, ‘ಕೊರೊನಾದಿಂದಾಗಿ ಜನರ ನೆಮ್ಮದಿ …

Read More »