Breaking News

ಅಕ್ರಮ ಸಾಗಣೆ: 996 ಲೀಟರ್ ಗೋವಾ ಮದ್ಯ ವಶ

Spread the love

ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 996 ಲೀಟರ್‌ ಮದ್ಯವನ್ನು ವಾಹನ ಸಮೇತ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಗುಜರಾತ್‌ನ ಜೋಠಾಣಾ ತಾಲ್ಲೂಕಿನ ಕಡವಾಜಿ ಗುಲಬಾಜಿ ಠಾಕೂರ (48) ಹಾಗೂ ರಾಜೂಜಿ ಮನಾಜಿ ಠಾಕೂರ (37) ಬಂಧಿತರು. ವಾಹನದ ಮಾಲೀಕರನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. 4ನೇ ಆರೋಪಿ, ಗುಜರಾತ್‌ನಲ್ಲಿ ಅಕ್ರಮ ಮದ್ಯ ಪಡೆದು ಮಾರುತ್ತಿರುವ ವೀರಸಿಂಗ್ ಮಾನಾಜಿ ಠಾಕೂರ ಅವರನ್ನೂ ಬಂಧಿಸಬೇಕಾಗಿದೆ. ವಶಪಡಿಸಿಕೊಂಡ ವಾಹನ ಹಾಗೂ ಮದ್ಯದ ಒಟ್ಟು ಮೌಲ್ಯ ₹ 26.31 ಲಕ್ಷ ಆಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಖಾನಾಪುರ ತಾಲ್ಲೂಕಿನ ಕಣಕುಂಬಿ ತನಿಖಾ ಠಾಣೆಯಲ್ಲಿ ತಪಾಸಣೆ ಮಾಡಿಗಾಗ, ವಾಹನದ ಹಿಂಭಾಗದಲ್ಲಿ ಪಾರ್ಟಿಷನ್ ಮಾಡಿ 567 ಲೀಟರ್‌ ಮದ್ಯ ಹಾಗೂ 429 ಲೀಟರ್‌ ಗೋವಾ ಬಿಯರ್‌ ಸಾಗಿಸುತ್ತಿದ್ದುದು ಪತ್ತೆಯಾಯಿತು’ ಎಂದು ಅಬಕಾರಿ ಉಪ ಸೂಪರಿಂಟೆಂಡೆಂಟ್ ಚನಗೌಡ ಎಸ್.

 


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ