Breaking News
Home / ಜಿಲ್ಲೆ / ಬೆಳಗಾವಿ (page 241)

ಬೆಳಗಾವಿ

ಬೆಳಗಾವಿ: ಕುಡಚಿ-ಉಗಾರ ಸೇತುವೆಯಲ್ಲಿ ಸಂಚಾರ ಬಂದ್

ಬೆಳಗಾವಿ: ರಾಯಬಾಗ ತಾಲ್ಲೂಕಿನಾದ್ಯಂತ ಶನಿವಾರವೂ ಜಿಟಿಜಿಟಿ ಮಳೆ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದಾಗಿ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದಾಗಿ, ರಾಯಬಾಗ ತಾಲ್ಲೂಕಿನ ಕುಡಚಿ-ಉಗಾರ ಸೇತುವೆ ಮುಳುಗಡೆಯಾಗಿದ್ದು, ನೆರೆಯ ಮಹಾರಾಷ್ಟ್ರ ರಾಜ್ಯದ ಸಂಪರ್ಕ ಕಡಿತಗೊಂಡಿದೆ. ಕುಡಚಿ ಸೇತುವೆ ಮೇಲೆ ಬೆಳಿಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೈತರು, ವ್ಯಾಪಾರಿಗಳು, ಮೀರಜ್‌ ಆಸ್ಪತ್ರೆಗೆ ಹೋಗುವವರು ತೊಂದರೆ ಅನುಭವಿಸುವಂತಾಗಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಪ್ರಮುಖ …

Read More »

ಬೆಳಗಾವಿ: ಕೃಷ್ಣೆಗೆ 1.56 ಲಕ್ಷ ಕ್ಯುಸೆಕ್ ನೀರು, ಪ್ರವಾಹ ಭೀತಿ ಹೆಚ್ಚಳ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶ ಮತ್ತು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕೃಷ್ಣಾ ನದಿಗೆ 1.56 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರೊಂದಿಗೆ ತೀರದಲ್ಲಿ ಪ್ರವಾಹ ಭೀತಿಯೂ ಹೆಚ್ಚಾಗ ತೊಡಗಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯಾಗಿದೆ. ಕೊಯ್ನಾ ಜಲಾಶಯದಿಂದ ಹೊರಬಿಡಲಾದ 10ಸಾವಿರ ಕ್ಯುಸೆಕ್, ದೂಧ್‌ಗಂಗಾ ನದಿಯಿಂದ 34,320 ಕ್ಯುಸೆಕ್ ಮತ್ತುಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ …

Read More »

ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ; ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ವಾಘವಾಡೆ ಬಳಿ ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಳ್ಳದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಹಗ್ಗ ಎಸೆದು ಯುವಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಂದಗಡ ಡ್ಯಾಂಗೆ ಹರಿದು ಬರುತ್ತಿರುವ ನೀರು ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದುರ್ಗಾಡಿ ಬೆಟ್ಟ ಪ್ರದೇಶದಿಂದ ಧಾರಾಕಾರವಾಗಿ ಮಳೆ ನೀರು …

Read More »

ಮಹಾರಾಷ್ಟ್ರದಲ್ಲಿ ಭಾರಿ‌ ಮಳೆ; ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರಿ‌ ಮಳೆಯಾಗಿರುವ ಹಿನ್ನಲೆಯಲ್ಲಿ, ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಎಂಟು ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು,10 ಗಂಟೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಮಧ್ಯಾಹ್ನ ಎರಡು ಗಂಟೆಗೆ 50ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು. ಸದ್ಯ ಕೃಷ್ಣಾ ನದಿಯಲ್ಲಿ 1.34 ಲಕ್ಷ ಕ್ಯೂಸೆಕ್ ನೀರಿನ ಹರಿವು ಇದೆ. ಇಂದು ರಾತ್ರಿ …

Read More »

ಅರವಿಂದ್ ಬೆಲ್ಲದ್ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿದ ; ರಾಜ್ಯ ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಕ್ಷಣಕ್ಕೊಂದು ಸ್ವರೂಪ ಪಡೆದುಕೊಳ್ತಿದ್ದು, ಇದೀಗ ಮತ್ತೆ ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕಾಶಿ ವಿಶ್ವನಾಥನ ಭೇಟಿಗೆ ತೆರಳಿರುವ ಬೆಲ್ಲದ್, ಅಲ್ಲಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ಸದ್ಯ ಖಾಸಗಿ ಹೋಟೆಲ್​ನಲ್ಲಿ ತಂಗಿರುವ ಬೆಲ್ಲದ್​ ಅವರು ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಬೆಲ್ಲದ್ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸಿಎಂ ಸ್ಥಾನದ ಬದಲಾವಣೆ ಮಾಡಲಾಗುತ್ತದೆ ಅನ್ನೋ …

Read More »

ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಧಾರಾಕಾರ ಮಳೆ: ನಾರಾಯಣಪುರ ಜಲಾಶಯಕ್ಕೆ ಹೆಚ್ಚಿದ ಒಳಹರಿವು!

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*?? *ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: *8123967576* *Laxmi News*  

Read More »

ಬೆಳಗಾವಿ ಸಿಇಎನ್​ ಪೊಲೀಸರಿಂದ ಸೈಬರ್ ವಂಚಕರ ಬಂಧನ; 50 ಬ್ಯಾಂಕ್ ಖಾತೆ ಫ್ರೀಜ್

ಬೆಳಗಾವಿ: ಬಿಎಸ್​ಎನ್​ಎಲ್​ ನಿವೃತ್ತ ಉದ್ಯೋಗಿ ಖಾತೆಗೆ ಕನ್ನ ಹಾಕಿ 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದ ವಂಚಕರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದ ಯಲ್ಲಪ್ಪ ಜಾಧವ್‌ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ, ಚಂದ್ರಪ್ರಕಾಶ್(30), ಆಶಾದೇವಿ(25)ಯನ್ನು ಇಂದು ಜಾರ್ಖಂಡ್‌ಗೆ ತೆರಳಿ ಬೆಳಗಾವಿ ಪೊಲೀಸರು( Karnataka police) ಬಂಧಿಸಿದ್ದಾರೆ. ಕೆವೈಸಿ ಅಪ್​ಡೆಟ್ ನೆಪದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ವಾಟ್ಸಪ್ ಪಡೆದಿದ್ದ …

Read More »

ತಾವು ನೀಡಿದ್ದ ಜಾಹೀರಾತಿನಲ್ಲಿ ಸಿಎಂ ಯಡಿಯೂರಪ್ಪ ಅವರ ಫೋಟೋ ಪ್ರಕಟಿಸದ ಸಚಿವೆ ಶಶಿಕಲಾ ಜೊಲ್ಲೆ

ರಾಷ್ಟ್ರೀಯ ಆಂಗ್ಲ ಮಾಧ್ಯಮಕ್ಕೆ ತಾವು ನೀಡಿದ್ದ ಜಾಹೀರಾತಿನಲ್ಲಿ ಸಿಎಂ ಯಡಿಯೂರಪ್ಪ ಅವರ ಫೋಟೋ ಪ್ರಕಟಿಸದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಫೋಟೋ ಹಾಕದಿರುವುದು ಉದ್ದೇಶಪೂರ್ವಕ ಕೆಲಸ ಅಲ್ಲ. ಇದು ಜಾಹೀರಾತು ಏಜೆನ್ಸಿ ಕಡೆಯಿಂದ ಆಗಿರುವ ಪ್ರಮಾದ. ಇನ್ನು ಮುಂದೆ ಹೀಗೆ ಆಗದಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ. ಸಿಎಂ ಯಡಿಯೂರಪ್ಪರ ಫೋಟೋ ಮಿಸ್ ಆಗಿರುವುದಕ್ಕೆ ಗೊಂದಲ ಬೇಡ. ಜಾಹೀರಾತಿನಲ್ಲಿ …

Read More »

ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಬೆಳಗಾವಿ: ಶಿಶು ಅಭಿವೃದ್ಧಿ ಇಲಾಖೆಯ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಖಾಲಿ ಇರುವ ನಗರ ಪ್ರದೇಶಗಳಲ್ಲಿ ಅದೇ ವಾರ್ಡಿನ ಇಚ್ಛೆಯುಳ್ಳ ಅಭ್ಯರ್ಥಿಗಳು ವೆಬ್‍ಸೈಟ್ ವಿಳಾಸ: anganwadiruit.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಜು.14 ರಿಂದ ಅಗಸ್ಟ್ 14 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಜಿಲ್ಲಾ ಬಾಲ ಭವನ ಕಟ್ಟಡ, …

Read More »

ರಾಜಾಹುಲಿ ಯನ್ನಾ ಸಿ ಎಂ ಸ್ಥಾನದಿಂದ ಇಳಿಸಿ ಬೆಳಗಾವಿ ಯವರೆ ಆಗ್ತಾರಾ ಮುಂದಿನ ಸಿ ಎಂ..?

ಈಗ ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ‌.ಜುಲೈ 26 ಕ್ಕೆ ಸಿಎಂ ಬದಲಾವಣೆ ಖಚಿತ ಎಂದು ಬಿಜೆಪಿಯ ಕೆಲವು ನಾಯಕರು ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ.ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರು ? ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.ಈ ಕುರಿತು ದೃಶ್ಯಮಾದ್ಯಮಗಳಲ್ಲಿ ಕ್ಷಣಕ್ಕೊಂದು ಬ್ರೇಕಿಂಗ್ ಸುದ್ಧಿ ಪ್ರಕಟವಾಗುತ್ತಿದೆ. ಸಿಎಂ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ‌.ಆದ್ರೆ ಅವರ ಅಧಿಕಾರದ ಅವಧಿ ಜುಲೈ 26 ರರವೆಗೆ ಮಾತ್ರ ಎನ್ನುವ ಸುದ್ಧಿ ರಾಜ್ಯದ …

Read More »