Home / ಜಿಲ್ಲೆ / ಬೆಳಗಾವಿ (page 223)

ಬೆಳಗಾವಿ

ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಮುಂದಾದ ಆರ್‌ಸಿಯು ವಿಧ್ಯಾರ್ಥಿಗಳು.

ಬೆಳಗಾವಿ: ಪರೀಕ್ಷೆಗಳನ್ನು ಮುಂದೂಡುವಂತೆ ಆರ್‌ಸಿಯು ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಕೊಳ್ಳಲು ಯತ್ನಿಸಿದರು ಆರ್‌ಸಿಯು ಕುಲಪತಿಗಳು ಮಾತ್ರ ನೋಡಿದರು ನೋಡದ ಹಾಗರ ತಮ್ಮ ಕ್ಯಾಬಿನ್ ಒಳಗಡೆ ಹೊಗಿ ಕುಳಿತುಕೊಂಡಿದ್ದಾರೆ.   https://www.facebook.com/107371068287820/posts/130964925928434/?sfnsn=mo ವಿದ್ಯಾರ್ಥಿಗಳ ಸಮಸ್ಯೆ ನೋಡಬೇಕಾಗಿದ್ದ ಕುಲಪತಿಗಳು ಮಾತ್ರ ಬೆಜವಾಬ್ದಾರಿ ರೀತಿಯಲ್ಲಿ ನಡೆದುಕೊಂಡಿದ್ದು, ವಿದ್ಯಾರ್ಥಿಗಳನ್ನು ಮತ್ತಷ್ಟು ಕೆಣಕಿದೆ.‌

Read More »

ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವು; 80 ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನದ ಮೇಲೂ ಕಣ್ಣು

ಬೆಳಗಾವಿ: ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ವಿಚಾರವಾಗಿ ರಾಜ್ಯದಲ್ಲಿ ಸದ್ಯ ಚರ್ಚೆ ಮತ್ತು ಗೊಂದಲ ಸೃಷ್ಟಿಯಾಗಿದೆ. ಅದರಂತೆ ಹಳೆ ಬೆಳಗಾವಿ ಹೊರ ವಲಯದಲ್ಲಿರುವ ಎಂಬತ್ತು ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಲು ತಿಳಿಸಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ದೇವಸ್ಥಾನ ತೆರವು ಮಾಡಲು ಆದೇಶ ನೀಡಲಾಗಿತ್ತು. ಆದರೆ ಆದೇಶವಿದ್ದರೂ ಹೋರಾಟ ಮಾಡಿ ಸ್ಥಳೀಯರು ಮತ್ತು ಹಿಂದೂಪರ ಕಾರ್ಯಕರ್ತರು ಉಳಿಸಿಕೊಂಡಿದ್ದರು. ಎಂಟು ವರ್ಷದ ಹಿಂದೆ …

Read More »

ಶ್ರೀಮಂತ ಪಾಟೀಲ್ ಗೆ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕು : ಲಕ್ಷ್ಮಣ ಸವದಿ

ಬೆಳಗಾವಿ : ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ಹಣದ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕೆಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ.   ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಂತ ಪಾಟೀಲ್ ರನ್ನು ಈ ಬಗ್ಗೆ ನಾನು ಭೇಟಿ ಮಾಡಿಲ್ಲ. ಅವರಿಗೆ ಯಾರು ಹಣ ಕೊಡಲು ತೆರಳಿದ್ದರು, ಯಾರು ಆಮಿಷವೊಡ್ಡಿದ್ದರೆಂದು ಪರಿಶೀಲನೆ ಆಗಬೇಕೆಂದು ಆಗ್ರಹಿಸಿದರು. ಇನ್ನು ಅಧಿಕಾರ ಶಾಶ್ವತವಲ್ಲ. ತು ಅವಕಾಶ ಕೊಟ್ಟಾಗ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರೀಮಂತ ಪಾಟೀಲ್ …

Read More »

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು: ಮರಾಠಿಗರನ್ನ ಖುಷಿ ಪಡಿಸಲ ಬಿಜೆಪಿ ಮಾಸ್ಟರ್​ ಪ್ಲ್ಯಾನ್​!

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ಸೂತ್ರ ಸಿದ್ಧಪಡಿಸಿರುವ ಬಿಜೆಪಿ, ಮರಾಠ ಸಮುದಾಯವನ್ನು ಖುಷಿ ಪಡಿಸಲು ಪ್ಲ್ಯಾನ್ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಯೋಜನೆ ರೂಪಿಸಿರುವ ಬಿಜೆಪಿ ನಾಯಕರು, ಮರಾಠಿ ಭಾಷಿಕರಿಗೇ ಮೇಯರ್ ಹುದ್ದೆ ನೀಡಲು ಚಿಂತನೆ ನಡೆಸಿದೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಭಾಷಿಕರು ಎಂಇಎಸ್ ಬದಲು ಬಿಜೆಪಿಗೆ ಜೈ ಎನ್ನುವ ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ರಾಜಕೀಯ ಮಾಡುತ್ತಿದ್ದ …

Read More »

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ

ಬೆಳಗಾವಿ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಹುಕ್ಕೇರಿ ಹಿರೇಮಠ ಪ್ರದಾನ ಮಾಡುವ ವೀರಭದ್ರೇಶ್ವರ ಪ್ರಶಸ್ತಿ ಇದಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 14ರಂದು ವೀರಭದ್ರೇಶ್ವರ ಜಯಂತಿ ಇದೆ. ವೀರಭದ್ರೇಶ್ವರ ಜಯಂತಿಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಭಾದ್ರಪದ ಮಾಸ ಮೊದಲ ಮಂಗಳವಾರ ವೀರಭದ್ರೇಶ್ವರ ಜಯಂತಿ ಮಾಡಬೇಕೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಆದರೆ …

Read More »

ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ: ಗೋವಿಂದ ಕಾರಜೋಳ

ಬೆಳಗಾವಿಯಲ್ಲಿ ಗಣೇಶೋತ್ಸವ 11 ದಿನ ಮಾಡಬೇಕೆಂದು ಯುವಕರು, ಹಿಂದು ಸಂಘಟನೆಗಳ ಒತ್ತಾಯವಿತ್ತು. ಹೀಗಾಗಿ 11 ದಿನಗಳ ಗಣೇಶೋತ್ಸವಕ್ಕೆ ಸೋಮವಾರ ಆದೇಶ ಬರಲಿದೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಹತ್ವದ ಮಾಹಿತಿ ನೀಡಿದ್ದಾರೆ. ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ನಗರ ಅನ್ನೋದು ಸಾಬೀತು ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇನ್ನು ಏನೇನು ಅಭಿವೃದ್ಧಿ ಕೆಲಸಗಳು ಆಗಬೇಕು, ಅದೆಲ್ಲವನ್ನು ನಾನು ಹಾಗೂ ದಕ್ಷಿಣ …

Read More »

ಮಹಾಲಿಂಗೇಶ್ವರ ನಗರ ಗೋಕಾಕ ನಲ್ಲಿ ಬಸವರಾಜ ಸಾಯನ್ನವರ ಅವರಿಂದ ಸರಳ ರೀತಿಯಲ್ಲಿ ಗಣೇಶ್ ಉತ್ಸವ ಆಚರಣೆ

ಗೋಕಾಕ : ಗೋಕಾಕನಲ್ಲಿ ಪ್ರತಿಯೊಂದು ವಿಶೇಷತೆ ಇದೆ ಗೋಕಾಕ ಜಲಪಾತ ಹಿಡಿದು , ಲಕ್ಷ್ಮಿ ದೇವಿ ಗುಡಿ , ಹಾಗೂ ರಾಜಕಾರಣಕ್ಕೆ ಮುಖ್ಯ ಬುಲಂದಿಯೆ ಗೋಕಾಕ , ಗೋಕಾಕ ಕರದಂಟು ಎಷ್ಟು ಫೇಮಸ್ ಇದೆಯೋ ಅದೇ ರೀತಿ ಗೋಕಾಕ ನಗರದ ಮಹಾಲಿಂಗೇಶ್ವರ ನಗರದ ಗಣಪತಿ ಉತ್ಸವ ಕೂಡ ಅಷ್ಟೇ ಜೋರಾಗಿ ವಿಜೃಂಭಣೆ ಯಿಂದ ಮಾಡುತ್ತ ಬಂದಿದ್ದಾರೆ . ಬಸವರಾಜ ಸಾಯನ್ನವರ ಅವರು.ಇವರು ಎ. ಪಿ.ಎಂ.ಸಿ.ನಿರ್ದೇಶಕರು ಕೂಡ ಹೌದು. ಈ ಬಾರಿ …

Read More »

ರಾತ್ರಿ ಹೊತ್ತಲ್ಲಿ ಎಣ್ಣೆ ಹೊಡೆದು ಟೈಟ್ ಆಗಿ ವೈದ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದ ಪಿ ಎಸ್ ಅಯ್ ಅಮೀನ್ ಭಾವಿ

ಬೆಳಗಾವಿ : ನಗರದಲ್ಲಿ ಜನರನ್ನ ರಕ್ಷಣೆ ಮಾಡಬೇಕಾದವರು ತೊಂದರೆ ಕೊಡೊ ರೀತಿ ವರ್ತನೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ ನಿನ್ನೆ ರಾತ್ರಿ ಗೋಕಾಕ ನಗರದ ಪೀ ಎಸ್ ಆಯ ಅಮೀನ್ ಭಾವಿ ಜನರನ್ನ ರಕ್ಷಣೆ ಮಾಡುವ ವೈದ್ಯರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಆಸ್ಪತ್ರೆ ಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವರ್ಗ ಮನವಿ ಮಾಡಿದೆ.   ಹೌದು ರಾತ್ರಿ ಹೊತ್ತಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ …

Read More »

ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಸಿಎಂ ಗ್ರೀನ್‌ ಸಿಗ್ನಲ್

ಬೆಳಗಾವಿ: ಗಡಿ ಜಿಲ್ಲೆಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಸಿಎಂ ಗ್ರೀನ್‌ ಸಿಗ್ನಲ್ ನೀಡಿದ್ದು, ಈ ಸಂಬಂಧ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್‌ ಪಾಟೀಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಿಎಂ ಗಣೇಶೋತ್ಸವದ ವಿಚಾರಗಳನ್ನು ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಲು ಸೂಚಿಸಿದ್ದೇನೆ ಎಂದಿದ್ದಾರೆ. ಬೆಳಗಾವಿಯಲ್ಲಿ 11 ದಿನಗಳ ಕಾಲ ಗಣೇಶೋತ್ಸವ ಮಾಡುವುದು ಪ್ರತೀತಿಯಿದೆ. ಹೀಗಾಗಿ, ಈ ಬಾರಿ ಅದಕ್ಕೆ ಅವಕಾಶ ಕೊಡಿ‌ …

Read More »

ಹೊಂದಾಣಿಕೆ ಕೊರತೆ, 8 ಸ್ಥಾನ ಕಳೆದುಕೊಂಡ ಕಾಂಗ್ರೆಸ್: ಸತೀಶ್ ಜಾರಕಿಹೊಳಿ

ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಆಂತರಿಕ ಹೊಂದಾಣಿಕೆ ಇಲ್ಲದೇ ಕೆಲವು ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೊದಲೇ ಹೈಕಮಾಂಡ್ ಗೆ ತಿಳಿಸಿದಂತೆ ನಮ್ಮ ನಿಗದಿತ 15 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 5 ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವುದಾಗಿ ಹೇಳಿದ್ದೆವು. ಹಾಗಾಗಿ ನಮ್ಮ ಗೆಲುವು ನಮಗೆ ತೃಪ್ತಿ ತಂದಿದೆ. ಆದರೆ ನಗರದ ಉತ್ತರ ಕ್ಷೇತ್ರದಲ್ಲಿ ನಮ್ಮ ಆಂತರಿಕ ಹೊಂದಾಣಿಕೆ ಕಾರಣದಿಂದಾಗಿ …

Read More »