Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Spread the love

ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಇನ್‍ನ್ಯೂಸ್ ಪ್ರಧಾನ ಸಂಪಾದಕರಾದ ರಾಜಶೇಖರ್ ಪಾಟೀಲ್, ಸಂಯುಕ್ತ ಕರ್ನಾಟಕ ಪತ್ರಿಕೆ ಹಿರಿಯ ವರದಿಗಾರ ವಿಲಾಸ್ ಜೋಶಿ ಅವರನ್ನು ಸತ್ಕರಿಸಿದರು.

ಇನ್ನು ಸಂಗೀತ ಕ್ಷೇತ್ರದಿಂದ ಕೆಎಲ್‍ಇ ಕ್ಯಾಂಪಸ್‍ನ ಯಾದವೇಂದ್ರ ಪೂಜಾರಿ, ಶೌರ್ಯ ಗೋಕಾಕ್ ತಾಲೂಕಿನ ಅಂಕಲಗಿಯ ರೈಲ್ವೇ ಹೋಮ್ ಗಾರ್ಡ ಹೊಳೆಪ್ಪ ನೇಸರಗಿ, ಸಾಹಿತ್ಯ ಕ್ಷೇತ್ರದಿಂದ ಡಾ.ರಾಮಕೃಷ್ಣ ಮರಾಠೆ, ಆಶಾ ಕಡಪಟ್ಟಿ, ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ರಾಜೇಂದ್ರ ಮುರಗೋಡ, ಚಿತ್ರಕಲೆ ಕ್ಷೇತ್ರದಿಂದ ಅಥಣಿ ತಾಲೂಕಿನ ಕಕಮರಿ ಗ್ರಾಮದ ಬ್ರಹ್ಮಾನಂದ ಬಸರಗಿ, ಪರಿಸರ ಕ್ಷೇತ್ರದಿಂದ ನಿಪ್ಪಾಣಿಯ ಪಿರೋಜ್ ಗುಲಾಬ್ ಚಾಹುಸ್, ಕ್ರೀಡಾ ಕ್ಷೇತ್ರದಿಂದ ಮಲಪ್ರಭಾ ಜಾಧವ್, ಸಮಾಜಸೇವೆ ಕ್ಷೇತ್ರದಿಂದ ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಚೆನ್ನಬಸಯ್ಯ ಕಠಾರಿಪುರಮಠ, ಡಾ.ಸುನೀಲ್ ನೇಗಿನಹಾಳ, ಬಯಲಾಟ ಕ್ಷೇತ್ರದಿಂದ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಶಿವಲಿಂಗಪ್ಪ ಕರವಿನಕೊಪ್ಪ, ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಪದ್ಮರಾಜ್ ವೈಜನ್ನವರ, ತಿಪ್ಪೆಸ್ವಾಮಿ, ಗಣೇಶ ರೋಖಡೆ, ಗುರಗೌಡ ಪಾಟೀಲ್, ಬಾಳು ಉದಗಟ್ಟಿ, ಶಿವನಗೌಡ ಪಾಟೀಲ್. ಪತ್ರಿಕೋದ್ಯಮ ಕ್ಷೇತ್ರದಿಂದ ಕೇಶವ ಆದಿ, ಶ್ರೀಶೈಲ್ ಮಠದ, ಶ್ರೀಕಾಂತ ಕುಬಕಡ್ಡಿ, ಕುಂತಿನಾಥ ಕಲಮನಿ, ಮಹಾಂತೇಶ ಗದ್ದಿಹಳ್ಳಿಶೆಟ್ಟಿ, ಸುನೀತಾ ದೇಸಾಯಿ. ಸಾಮಾಜಿಕ ಜಾಲತಾಣದಲ್ಲಿ ಕಿರಣ ಮಾಳನ್ನವರ ಅವರಿಗೆ ನೆನಪಿನ ಕಾಣಿಕೆ, ಪ್ರಮಾಣ ಪತ್ರ ಶಾಲು ಹೊದಿಸಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್, ಡಿಸಿ ಮಹಾಂತೇಶ ಹಿರೇಮಠ, ಐಜಿಪಿ ಸತೀಶ್‍ಕುಮಾರ್, ಜಿ.ಪಂ.ಸಿಇಓ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಬುಡಾ ಅಧ್ಯಕ್ಷ ಸಂಜಯ್ ಬೆಳಗಾಂವಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ