Breaking News
Home / Uncategorized / ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಸರಕಾರ ಬದ್ಧ : ಸಚಿವ ಗೋವಿಂದ ಕಾರಜೋಳ 66 ನೇ ಕರ್ನಾಟಕ ರಾಜ್ಯೋತ್ಸವ : ಕನ್ನಡ ಹೋರಾಟಗಾರರು, ಪತ್ರಕರ್ತರಿಗೆ ಸನ್ಮಾನ

ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಸರಕಾರ ಬದ್ಧ : ಸಚಿವ ಗೋವಿಂದ ಕಾರಜೋಳ 66 ನೇ ಕರ್ನಾಟಕ ರಾಜ್ಯೋತ್ಸವ : ಕನ್ನಡ ಹೋರಾಟಗಾರರು, ಪತ್ರಕರ್ತರಿಗೆ ಸನ್ಮಾನ

Spread the love

ಬೆಳಗಾವಿ : ಕೋವಿಡ್ ಹಿನ್ನೆಲೆಯಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

 

ಜಿಲ್ಲಾಡಳಿತ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ (ನ.೧) ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.

 

ಜಿಲ್ಲಾ ಉಸ್ತುವಾರಿ ಸಚಿವರೂ ಅಗಿರುವ ಜಲಸಂಪನ್ಮೂಲ (ಬೃಹತ್ ಮತ್ತು ಮಧ್ಯಮ) ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು‌ ರಾಷ್ಟ್ರಧ್ವಜಾರೊಃಣ ನೆರವೇರಿಸಿದರು.

 

ತಾಯಿ ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೋವಿಡ್ ನಂತರ ಎದುರಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ಮಧ್ಯೆಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರು, ರೈತರು, ಕೂಲಿಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಸುಂದರ ಬದುಕು ಕಟ್ಟಿಕೊಡುವ ದೃಢಸಂಕಲ್ಪ ಮಾಡಿದೆ ಎಂದು ಹೇಳಿದರು.

 

ಕನ್ನಡ ಹೋರಾಟಗಾರರು-ಪತ್ರಕರ್ತರಿಗೆ ಸನ್ಮಾನ: ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಕನ್ನಡ ಹೋರಾಟಗಾರರು-ಪತ್ರಕರ್ತರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

 

ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಪದ್ಮರಾಜ ವೈಜನ್ನವರ, ತಿಪ್ಪೇಸ್ವಾಮಿ, ಗಣೇಶ ರೋಖಡೆ, ಬಾಳು ಉದಗಟ್ಟಿ ಹಾಗೂ ಶಿವನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

 

ಪತ್ರಕರ್ತರಾದ ಹಿರಿಯ ವರದಿಗಾರರಾದ ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ, ಕುಂತಿನಾಥ ಕಲಮನಿ, ರಾಜಶೇಖರ ಪಾಟೀಲ, ವಿಲಾಸ್ ಜೋಶಿ, ಸುನೀತಾ ದೇಸಾಯಿ ಹಾಗೂ ಮಹಾಂತೇಶ ಗದ್ದಿಹಳ್ಳಿಶೆಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸನ್ಮಾನಿಸಿ, ಗೌರವಿಸಿದರು.

 

 

 

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಯಾದವೇಂದ್ರ ಪೂಜಾರಿ(ಸಂಗೀತ), ಹೊಳೆಪ್ಪ ನೇಸರಗಿ(ಶೌರ್ಯ), ಬ್ರಹ್ಮಾನಂದ ಬಸರಗಿ(ಚಿತ್ರಕಲೆ), ಫಿರೋಜ್ ಗುಲಾಬ್ ಚಾಹುಸ್(ಪರಿಸರ), ಮಲಪ್ರಭಾ ಜಾಧವ್ (ಕ್ರೀಡೆ), ಚೆನ್ನಬಸಯ್ಯ ಕಠಾಪುರಿಮಠ(ಸಮಾಜ ಸೇವೆ), ಡಾ.ರಾಮಕೃಷ್ಣ ಮರಾಠೆ(ಸಾಹಿತ್ಯ), ಶಿವಲಿಂಗ ಕರವಿನಕೊಪ್ಪ(ಬಯಲಾಟ), ಆಶಾ ಕಡಪಟ್ಟಿ(ಸಾಹಿತಿ), ಸುನೀಲ್ ನೇಗಿನಹಾಳ(ಸಮಾಜ ಸೇವೆ), ಕಿರಣ ಮಾಳನ್ನವರ(ಸಾಮಾಜಿಕ ಜಾಲತಾಣ) ಹಾಗೂ ನಾಗರಾಜ ಮುರಗೋಡ(ಸಾಹಿತ್ಯ) ಅವರನ್ನು ಸನ್ಮಾನಿಸಲಾಯಿತು.

 

ಸಂಸದರಾದ ಮಂಗಲ ಅಂಗಡಿ, ಶಾಸಕರಾದ‌ ಅನಿಲ್ ಬೆನಕೆ, ಅಭಯ್ ಪಾಟೀಲ, ಬುಡಾ‌ ಅಧ್ಯಕ್ಷ ಸಂಜಯ ಬೆಳಗಾಂವಕರ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಉತ್ತರ ವಕಯ ಐಜಿಪಿ ಎನ್.ಸತೀಶಕುಮಾರ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಸಿಇಒ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.

 

ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

Spread the love ಶಿರಸಿ: ಶಾಸಕ ಭೀಮಣ್ಣ ನಾಯ್ಕ ಹಾಗೂ ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ಸದಸ್ಯ ಖಾದರ ಆನವಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ