Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ (page 89)

ಗೋಕಾಕ

ಸಾತಪುತೆ ಔಷಧಿ ಅಂಗಡಿಯಲ್ಲಿ ಕೊರೋನಾ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೇರಿಸುವ ಕೆಲಸ

ಸಾತಪುತೆ ಔಷಧಿ ಅಂಗಡಿಯಲ್ಲಿ ಕೊರೋನಾ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೇರಿಸುವ ಕೆಲಸ

Read More »

ಅಂಗಡಿಕಾರರು ಅನಗತ್ಯವಾಗಿ ಹೆಚ್ಚಿನ ದರ ಪಡೆದರೆ ಲೈಸೆನ್ಸನ್ನು ರದ್ದು : ಪ್ರಕಾಶ ಹೋಳೆಪ್ಪಗೋಳ

ಗೋಕಾಕ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ದಿನಸಿ ಹಾಗೂ ಅಗತ್ಯ ವಸ್ತುಗಳ ಬಗ್ಗೆ ಕೆಲವು ಅಂಗಡಿಗಳಲ್ಲಿ ತಾತ್ಕಾಲಿಕ ಕೊರತೆ ಸೃಷ್ಟಿಸುತ್ತಿರುವ ಬಗ್ಗೆ ಮತ್ತು ಅನಗತ್ಯವಾಗಿ ಹೆಚ್ಚಿನ ದರಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ತರಹ ಪರಿಸ್ಥಿತಿಯ ಲಾಭ ಪಡೆದು ಗ್ರಾಹಕರನ್ನು ವಂಚಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ಅಂಗಡಿಕಾರರು ಯಾವುದೇ ರೀತಿ ತಾತ್ಕಾಲಿಕ ಕೊರತೆ ಸೃಷ್ಟಿಸುವುದಾಗಲಿ ಅಥವಾ ಅನಗತ್ಯವಾಗಿ …

Read More »

ಜನರ ಮುಂದೆ ಏಕಾಏಕಿ ಇಂತಹ ಸ್ಥಿತಿ ಬಂದಿದೆ ಒಂದು ಸಲ ಬಿಟ್ಟು ಮೂರು ಬಾರಿ ತಿಳಿ ಹೇಳಿ:ಗೋಕಾಕ ಪೊಲೀಸರಿಗೆ ಸತೀಶ ಜಾರಕಿಹೊಳಿ‌ ಸಲಹೆ

ಗೋಕಾಕ: ಒಂದು ಸಲ‌ ಬಿಟ್ಟು ಮೂರು ಬಾರಿ ತಿಳಿಸಿ ಹೇಳಿ. ಹೊಡೆಯುವದರಲ್ಲಿ ಏನೂ ಅರ್ಥವಿಲ್ಲ ಅದರಿಂದ ಪರಿಹಾರವೂ ಇಲ್ಲ. ಜನರಿಗೆ ತಿಳುವಳಿಕೆ ಹೇಳುವುದು ಮೊದಲು ಅಗತ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಂದು‌‌ ನಗರದಲ್ಲಿ ಮಾತನಾಡಿ ಜನರು ಕೂಡ ಪದೇ ಪದೇ ನಿಯಮಗಳನ್ನು ‌ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಿ, ಬಡೆಯುವಂತ ಅವಕಶ್ಯಕತೆಯಿಲ್ಲ. ಜನರು ನೀರು ಮತ್ತು ದಿನನಿತ್ಯದ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಏಕಾಏಕಿ ಬಂದ ಇಂತಹ ಸ್ಥಿತಿ ಇದೇ ಮೊದಲ …

Read More »

ಕೊರೋನಾ ವೈರಸ್ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಸಚಿವ ರಮೇಶ ಜಾರಕಿಹೊಳಿ ಸೂಚನೆ

ಗೋಕಾಕ :ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಕೊರೋನಾ ಮುಂಜಾಗೃತ ಕ್ರಮಗಳ ಕುರಿತು ತಾಲೂಕಾ ಅಧಿಕಾರಿಗಳ ಸಭೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆಕಸ್ಮಿಕವಾಗಿ ದೇಶಾದ್ಯಂತ ಭೀಕರ ಕೊರೋನಾ ವೈರಸ ಅಪ್ಪಳಿಸಿ ಜನರ ಜೀವನವನ್ನೇ ಅಸ್ತವ್ಯಸ್ತ ಗೋಳಿಸಿದೆ ಜನತೆ ಅನಾವಶ್ಯಕವಾಗಿ ಹೊರ ಬರದಂತೆ ಮನೆಯಲ್ಲಿಯೇ ಇದ್ದು ವೈರಸ ಹರಡದಂತೆ ಸಹಕರಿಸಬೇಕು ಅಧಿಕಾರಿಗಳು …

Read More »

ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವಶ್ಯಕ‌ತೆಗೆ ಹೊರ ಬಂದರೆ ಅವರನ್ನು ತೊಂದರೆ ಕೊಡಬೇಡಿ: ಸತೀಶ ಜಾರಕಿಹೊಳಿ

ಗೋಕಾಕ: ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವಶ್ಯಕ‌ತೆಗೆ ಹೊರ ಬಂದರೆ ಅವರನ್ನು ತೊಂದರೆ ಕೊಡಬೇಡಿ ಎಂದು ಗೋಕಾಕ‌‌ ಪೊಲೀಸ್ ಅಧಿಕಾರಿಗಳಿಗೆ ಕೆಪಿಸಿಸಿ ‌ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ‌ ನೀಡಿದರು. ಸ್ಥಳಿಯರ ದೂರುಗಳಿಗೆ ಸ್ಪಂದಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ದೂರವಾಣಿ‌‌ ಮುಖಾಂತರ ಮಾತನಾಡಿ ಉಪಯುಕ್ತ ಸಾಮಾನುಗಳ ಅಂಗಡಿ ತೆರೆಯುವಂತೆ ಮತ್ತು ನೀರು, ಕಿರಾಣಿ, ಹಾಲು ಮೆಡಿಕಲ್ ಸ್ಟೋರ್ ಗಳಿಗೆ ಸಾಮಾನು ತರಲು ಹೋಗುವ ಜನರನ್ನು ಹೊಡೆಯಬೇಡಿ , ಆನವಶ್ಯಕವಾಗಿ ತಿರುಗಾಡುವವರಿಗೆ ಮಾತ್ರ ಕ್ಲಾಸ್ …

Read More »

ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್

ಗೋಕಾಕ:ಕೊರೋನಾ‌ ವೈರಸ್ ಹರಡುವ ಭಿತಿಗೆ ಕ್ಯಾರೆ ಎನ್ನದೆ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ ಗೋಕಾಕ್ ನಗರದ ಮಸೀದಿಯೊಂದರಲ್ಲಿ ನಡೆದಿದೆ..   ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ. ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು ಲಾಠಿ …

Read More »

ನಿಮ್ಮ ಜೀವ ಉಳಿಸಿಕೊಳ್ಳಲು ಏಪ್ರೀಲ್ 14ರ ವರೆಗೆ ಮನೆಯಿಂದ ಆಚೆ ಬರಬೇಡಿ.:ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ನಿಮ್ಮ ಜೀವ ಉಳಿಸಿಕೊಳ್ಳಲು ಏಪ್ರೀಲ್ 14ರ ವರೆಗೆ ಮನೆಯಿಂದ ಆಚೆ ಬರಬೇಡಿ. ಮನೆಯಲ್ಲಿಯೇ ಉಳಿದುಕೊಂಡು ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಹಾಮಾರಿ ಕೊರೋನಾ ಸೋಂಕಿನಿಂದ ದೇಶವನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿವೆ. ಅವುಗಳನ್ನು …

Read More »

ಸಾಮಾಜಿಕ‌ ಅಂತರಕ್ಕೆ ಕ್ಯಾರೆ ಎನ್ನದ ಗೋಕಾಕ ಜನ: ತರಕಾರಿ‌ ಖರೀದಿಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜನಜಂಗುಳಿ

ಗೋಕಾಕ: ಕೊರೊನಾ ವೈರಸ್ ಬಿಕ್ಕಟಿನಿಂದ ಎಪ್ರೀಲ್-14 ರವರೆಗೆ ಭಾರತ ಲಾಕ್‍ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಿನ್ನಲೆಯಲ್ಲಿ ದಿ. 26 ರಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಸಾಮಾಜಿಕ ಅಂತರ ಒಂದೇ ಮದ್ದು ಆಗಿರುವ ಮಹಾಮಾರಿ ಕೊರೋನಾ ಸೋಂಕಿಗೆ ಜನರು ಕ್ಯಾರೆ ಎನ್ನದೇ ಬೃಹತ್ ಸಂಖ್ಯೆಯಲ್ಲಿ ಸೇರಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಎಂಬ …

Read More »

ಗೋಕಾಕ: ಅಗತ್ಯ ವಸ್ತುಗಳ ಪೂರೈಕೆಗೆ ಕರ್ಪ್ಯೂ ಸಡಲಿಕೆ- ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ

ಗೋಕಾಕ: ಕೊರೊನಾ ವೈರಸ್ ಬಿಕ್ಕಟಿನಿಂದ ಎಪ್ರೀಲ್-14 ರವರೆಗೆ ಭಾರತ ಲಾಕ್‍ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಿನ್ನಲೆಯಲ್ಲಿ ದಿ. 26 ರಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದ್ದು. ಸಾರ್ವಜನಿಕರು ಶಿಸ್ತು ಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು …

Read More »

ಕೊರೋನಾಗೆ ಸವಾಲ್ ಹಾಕಿದ ಜನರು

ಶಿಂದಿಕುರಬೇಟ :ಶಿಂದಿಕುರಬೇಟ್ ಗ್ರಾಮದಲ್ಲಿ ಕಿರಾಣಿ ಅಂಗಡಿ ಮುಂಭಾಗದಲ್ಲಿ ಗುಂಪಿನಲ್ಲಿ ಬಂದರೆ ಕೊರೋನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಬರುತ್ತೆ ಅಂತ ಪೊಲೀಸ್ ಸಹಾಯದಿಂದ ಸರದಿ ಸಾಲಿನಲ್ಲಿ ನಿಂತು ಸಾಮಗ್ರಿಗಳನ್ನು ತಗೆದುಕೊಂಡು ಹೋಗುತ್ತಿದ್ದಾರೆ ಕೊರೋನಾ ವೈರಸ್ಗೆ ನಮ್ಮ ಜನ ಸವಾಲ್ ಹಾಕಿದ್ದಾರೆ

Read More »