ಗೋಕಾಕ:ಕೊರೋನಾ ವೈರಸ್ ಹರಡುವ ಭಿತಿಗೆ ಕ್ಯಾರೆ ಎನ್ನದೆ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ ಗೋಕಾಕ್ ನಗರದ ಮಸೀದಿಯೊಂದರಲ್ಲಿ ನಡೆದಿದೆ..
https://youtu.be/Y7NWh8zD7EA
ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ.
ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಗೋಕಾಕ್ ಶಹರ ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದ್ದು ಲಾಠಿ ಏಟು ಬೀಳುತ್ತಿದ್ದಂತೆ ಓಡೊಡಿ ಮನೆ ಸೇರಿಕೊಂಡಿದ್ದಾರೆ. ಮಸೀದಿ ಮುಖಂಡರನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ.