Breaking News

ಸಾಮಾಜಿಕ‌ ಅಂತರಕ್ಕೆ ಕ್ಯಾರೆ ಎನ್ನದ ಗೋಕಾಕ ಜನ: ತರಕಾರಿ‌ ಖರೀದಿಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜನಜಂಗುಳಿ

Spread the love

ಗೋಕಾಕ: ಕೊರೊನಾ ವೈರಸ್ ಬಿಕ್ಕಟಿನಿಂದ ಎಪ್ರೀಲ್-14 ರವರೆಗೆ ಭಾರತ ಲಾಕ್‍ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಿನ್ನಲೆಯಲ್ಲಿ ದಿ. 26 ರಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಸಾಮಾಜಿಕ ಅಂತರ ಒಂದೇ ಮದ್ದು ಆಗಿರುವ ಮಹಾಮಾರಿ ಕೊರೋನಾ ಸೋಂಕಿಗೆ ಜನರು ಕ್ಯಾರೆ ಎನ್ನದೇ ಬೃಹತ್ ಸಂಖ್ಯೆಯಲ್ಲಿ ಸೇರಿದ್ದಾರೆ.

ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದ್ದು. ಸಾರ್ವಜನಿಕರು ಶಿಸ್ತು ಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ನಿನ್ನೆ ಗೋಕಾಕ‌ ತಾಲೂಕಾಡಳಿತ ಹೇಳಿತ್ತು.

ಗೋಕಾಕ್ ನಗರದ ವಾಲ್ಮಿಕಿ ಕ್ರಿಡಾಂಗಣದಲ್ಲಿ ತರಕಾರಿ ಖರೀದಿಗೆ ಸೇರಿದ ಜನಜಂಗುಳಿ ದೃಶ್ಯ ಕಂಡು ತಾಲೂಕಾಡಳಿತ ದಂಗಾಗಿದೆ.


Spread the love

About Laxminews 24x7

Check Also

ಪಂಚಮಸಾಲಿ ಪೀಠಕ್ಕೆ ಜಡಿದಿದ್ದ ಬೀಗ ನಿನ್ನೆಯೇ ಓಪನ್​​: ಕಾಶಪ್ಪನವರ್, ಸ್ವಾಮೀಜಿ ಮಧ್ಯದ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್

Spread the loveಬಾಗಲಕೋಟೆ, ಜುಲೈ 16: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ (Panchamasali Peetha) ಬೀಗ ಜಡಿದಿದ್ದು, ಹೊಸ ಚರ್ಚೆ ಹುಟ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ