Breaking News
Home / ಜಿಲ್ಲೆ / ಬೆಂಗಳೂರು ಗ್ರಾಮಾಂತರ (page 42)

ಬೆಂಗಳೂರು ಗ್ರಾಮಾಂತರ

ನಾಳೆಯೊಳಗೆ ಶೇ.99ರಷ್ಟು ಸಂಪುಟ ವಿಸ್ತರಣೆ ಕ್ಲಿಯರ್(ಇತ್ಯರ್ಥ) ಆಗಲಿದೆ.

ಮೂಲಗಳ ಪ್ರಕಾರ ಭಾನುವಾರ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮಯ ನಿಗದಿಪಡಿಸಿದ್ದು ಅಂದು 12 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಗೆದ್ದಿರುವ 11 ಮಂದಿ ಶಾಸಕರ ಪೈಕಿ 9 ಮಂದಿ ಹಾಗೂ ಮೂಲ ಬಿಜೆಪಿಯಿಂದ ಮೂವರು ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವವಿದೆ. ಯಡಿಯೂರಪ್ಪ ನಾಳೆ ಬೆಂಗಳೂರಿಗೆ ಹಿಂತಿರುಗಲಿದ್ದು, ಭಾನುವಾರ ವಿಸ್ತರಣೆಗೆ ಸಮಯವನ್ನು ನಿಗದಿಪಡಿಸುವ ಸಾಧ್ಯತೆ ಇದೆ   ಬೆಂಗಳೂರು,ಜ.30- ಒಂದು ವೇಳೆ ದೆಹಲಿ ವರಿಷ್ಠರು ಅನುಮತಿ …

Read More »

ಇನ್ನು ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವಂತೆ ಸಂಪುಟಕ್ಕೆ ಸೇರ್ಪಡೆಯಾಗುವ ಆಕಾಂಕ್ಷಿಗಳು ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ

ಬೆಂಗಳೂರು,ಜ.30-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು ಎಂಬ ಗಾದೆಯಂತೆ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯುವ ನಿಟ್ಟಿನಲ್ಲಿ ವರಿಷ್ಠರ ಜೊತೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಲು ಮುಂದಾಗಿರುವಂತೆ ಸಚಿವ ಸ್ಥಾನ ಕೈ ತಪ್ಪಲಿರುವವರು ಹಾಗೂ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಪಕ್ಷ ನಿಷ್ಠರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಮಂತ್ರಿ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು …

Read More »

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸಿಐಡಿ ವಿಭಾಗದ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್‍ಸೂದ್..”

ಬೆಂಗಳೂರು,ಜ.29-ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸಿಐಡಿ ವಿಭಾಗದ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್‍ಸೂದ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ಎನ್.ರಾಜು ಅವರು ಶುಕ್ರವಾರ ಸೇವೆಯಿಂದ ನಿವೃತ್ತರಾಗಲಿದ್ದು, ತೆರವಾಗುವ ಈ ಸ್ಥಾನಕ್ಕೆ ಸಿಐಡಿ ವಿಭಾಗದ ಡಿಐಜಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲು ಸರ್ಕಾರ ಒಲವು ತೋರಿದೆ.   ಕೊನೆ ಕ್ಷಣದಲ್ಲಿ ಯಾವುದೇ ಅಚ್ಚರಿಯ ಬೆಳವಣಿಗೆ ನಡೆಯದಿದ್ದರೆ ಪ್ರವೀಣ್‍ಸೂದ್ ಅವರು ರಾಜ್ಯ ಪೊಲೀಸ್ ಇಲಾಖೆಯ ನೂತನ ಮುಖ್ಯಸ್ಥರಾಗಿ …

Read More »

ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿಶಿವಾಜಿನಗರ ಇಂದು ಸಂಪೂರ್ಣ ಸ್ತಬ್ಧ……

ಬೆಂಗಳೂರು, ಜ.21- ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರವಾದ ಶಿವಾಜಿನಗರ ಇಂದು ಸಂಪೂರ್ಣ ಸ್ತಬ್ಧವಾಗಿತ್ತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳು, ಫುಟ್‍ಪಾತ್ ವ್ಯಾಪಾರಿಗಳು ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್‍ಗೆ ಬೆಂಬಲ ನೀಡಿದ್ದರು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕಂಟೋನ್ಮೆಂಟ್‍ನ 9 ಮಾರುಕಟ್ಟೆಗಳು ಬಂದ್‍ನಿಂದ ಬಿಕೋ ಎನ್ನುತ್ತಿದ್ದವು. ನಾಲಾ ವೆಜಿಟೆಬಲ್ ಮಾರ್ಕೆಟ್, ಈವಿನಿಂಗ್ ಬಜಾರ್, ಗುಜರಿ ಮಾರುಕಟ್ಟೆ, ಬಂಡಿಮೋಟಾ ಮಾರ್ಕೆಟ್, ಸ್ಟೀಫನ್ ಸ್ಟೋರ್, ಸೆಂಟ್ರಲ್ ಸ್ಟ್ರೀಟ್ …

Read More »

ಜನ ಸಂಪರ್ಕ ಸಭೆ 20-01-2020 ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ರವಿ ಡಿ ಚೆನ್ನಣ್ಣನವರ್,

ಜನ ಸಂಪರ್ಕ ಸಭೆ 20-01-2020 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ರವಿ ಡಿ ಚೆನ್ನಣ್ಣನವರ್, ಐ.ಪಿ.ಎಸ್, ರವರು ಇಂದು ನಂದಗುಡಿಯಲ್ಲಿ ಜನ ಸಂಪರ್ಕ ಸಭೆ ನಡೆಸಿದರು ಸಾರ್ವಜನಿಕರು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ಟ್ರಾಫಿಕ್ ಸಮಸ್ಯೆ ಮತ್ತು ಗಾಂಜಾ ಹಾವಳಿ ಬಗ್ಗೆ ದೂರಿದರು ಸ್ಥಳದಲ್ಲೇ ಉಪಸ್ಥಿತರಿದ್ದ ಪಿ.ಎಸ್.ಐ ಮತ್ತು ಸಿ.ಪಿ.ಐ ರವರಿಂದ ಸಮಸ್ಯೆಯ ಪರಿಹಾರದ ಬಗ್ಗೆ ಸಾರ್ವಜನಿಕರಿಗೆ ಭರವಸೆ ನೀಡಿದರು, ಹಾಗೆಯೇ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾದ …

Read More »

ಸಿದ್ದರಾಮಯ್ಯಗೆ ಎಚ್.ಕೆ.ಪಾಟೀಲ್ ಟಾಂಗ್, ಸಿಎಲ್‍ಪಿ-ವಿಪಕ್ಷ ನಾಯಕ ಸ್ಥಾನ ಬೇರ್ಪಡಿಸಲು ಸಲಹೆ

ಬೆಂಗಳೂರು, ಜ.21- ಶಾಸಕಾಂಗ ಪಕ್ಷದ ಹಾಗೂ ವಿರೋಧ ಪಕ್ಷದ ನಾಯಕ ಈ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕೆಂದು ಹೇಳುವ ಮೂಲಕ ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಯುಪಿಎ ಅವಧಿಯಿಂದಲೂ ಸಂಸತ್‍ನಲ್ಲಿ ವಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿವೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎರಡು ಹುದ್ದೆಗಳನ್ನು ಬೇರ್ಪಡಿಸಲಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಎರಡು ಹುದ್ದೆಗಳು …

Read More »

9 ನೂತನ ಶಾಸಕರಿಗೆ ಸಚಿವ ಸ್ಥಾನದ ಪಟ್ಟಿ ರೆಡಿ, ಖಾತೆ ಹಂಚಿಕೆ ಬಾಕಿ..!

ಬೆಂಗಳೂರು,ಜ.20- ಅಮಿತ್ ಷಾ ಸಿದ್ಧಪಡಿಸಿ ದ್ದಾರೆ ಎನ್ನಲಾದ ಸಚಿವರ ಪಟ್ಟಿ ಅಂತಿಮಗೊಂಡರೆ ಉಪಚುನಾವಣೆಯಲ್ಲಿ ಗೆದ್ದ 7 ಶಾಸಕರ ಜೊತೆಗೆ 2018ರ ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷದ ಇಬ್ಬರು ಶಾಸಕರು ಯಡಿಯೂರಪ್ಪ ನವರ ಸಂಪುಟ ಸೇರ್ಪಡೆಯಾಗುವುದು ಖಚಿತವಾಗಿದ್ದು, ಅವರಿಗೆ ಯಾವ ಖಾತೆ ನೀಡಬೇಕೆಂಬು ದನ್ನೂ ಕೂಡ ಷಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ 11 ಮಂದಿ ನೂತನ ಶಾಸಕರು ಯಾವಾಗ ಸಚಿವ ಸಂಪುಟ ವಿಸ್ತರಣೆಯಾಗಿ ತಮಗೆ ಸಚಿವ ಹುದ್ದೆ ನೀಡುತ್ತಾರೊ ಎಂದು ಕಾಯುತ್ತಿದ್ದಾರೆ. …

Read More »

ಕೆಪಿಎಸ್‍ಸಿಯ ಹೈಟೆಕ್ ಭ್ರಷ್ಟಾಚಾರದ ವಿರುದ್ಧ ನ್ಯಾಯಾಂಗ ತನಿಖೆ………..

ಬೆಂಗಳೂರು, ಜ.20- ಗೆಜೆಟೆಡ್ ಪ್ರೊಬೇಷನರಿ ಹುದ್ದೆ -2015ಕ್ಕೆ ನಡೆಸಲಾದ ಮುಖ್ಯ ಪರೀಕ್ಷೆಯ ಮೌಲ್ಯ ಮಾಪನ ಸೇರಿದಂತೆ ಕೆಪಿಎಸ್‍ಸಿಯ ಹೈಟೆಕ್ ಭ್ರಷ್ಟಾಚಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವ ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಸರ್ಕಾರ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಕೆಪಿಎಸ್‍ಸಿ ಲೂಟಿಕೋರರ ಸಂಘವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಹಲವಾರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿರುದ್ಧ ಕಾನೂನು ಹೋರಾಟವನ್ನು …

Read More »

ಉಪಚುನಾ ವಣೆಯಲ್ಲಿ ಗೆದ್ದವರ ಪರಿಸ್ಥಿತಿ ಅಂತರಪಿಶಾ ಚಿಗಳಂತಾಗಿದೆ

ಬೆಂಗಳೂರು,ಜ.20- ಉಪಚುನಾ ವಣೆಯಲ್ಲಿ ಗೆದ್ದವರ ಪರಿಸ್ಥಿತಿ ಅಂತರಪಿಶಾ ಚಿಗಳಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವಾಕಾಂಕ್ಷಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಭೇಟಿಗೂ ಅವಕಾಶ ಕೊಡಲಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆ ಯಾದರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಫೋಟವಾಗುತ್ತದೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ಕೊಡೊಲ್ಲ. ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಂದಿನ …

Read More »

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟಾಣಿ ಅಭಿಮಾನಿಯೊಬ್ಬರ ಆಸೆಯನ್ನು ನಟ ದರ್ಶನ್ ಈಡೇರಿಸಿದ್ದಾರೆ.

ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟಾಣಿ ಅಭಿಮಾನಿಯೊಬ್ಬರ ಆಸೆಯನ್ನು ನಟ ದರ್ಶನ್ ಈಡೇರಿಸಿದ್ದಾರೆ. ಪುಟಾಣಿಯ ಹೆಸರು ರತನ್​. ಚಿತ್ರನಟ ದರ್ಶನ್ ಅವರನ್ನು ನೋಡಬೇಕು ಎಂಬುದು ರತನ್ ಆಸೆಯಾಗಿತ್ತು. ಇದನ್ನು ಅರಿತ ದರ್ಶನ್, ಆ ಪುಟಾಣಿಯನ್ನು ಮನೆಗೆ ಕರೆಯಿಸಿಕೊಂಡು ಮಾತನಾಡಿಸಿದ್ದಾರೆ. ಆತನ ಜತೆಗೆ ಫೊಟೋ ತೆಗೆಯಿಸಿಕೊಂಡು ಶೀಘ್ರ ಗುಣಮುಖರಾಗುವಂತೆ ಹಾರೈಸಿ ಕಳುಹಿಸಿದ್ದಾರೆ. ಈ ಫೋಟೋಗಳನ್ನು ಅವರು ಡಿ ಕಂಪನಿ ಆಫೀಸಿಷಿಯಲ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ

Read More »