Breaking News
Home / ಅಂತರಾಷ್ಟ್ರೀಯ / ಜಗತ್ತಿನಾದ್ಯಂತ ಅರ್ಧ ಕೋಟಿ ಮಂದಿಗೆ ಕೊರೋನಾ ಅಟ್ಯಾಕ್..! 3,16,732 ಮಂದಿ ಬಲಿ

ಜಗತ್ತಿನಾದ್ಯಂತ ಅರ್ಧ ಕೋಟಿ ಮಂದಿಗೆ ಕೊರೋನಾ ಅಟ್ಯಾಕ್..! 3,16,732 ಮಂದಿ ಬಲಿ

Spread the love

ವಾಷ್ಟಿಂಗ್ಟನ್/ಮ್ಯಾಡ್ರಿಡ್/ಮಾಸ್ಕೋ, ಮೇ 18-ಕಿಲ್ಲರ್ ಕೊರೊನಾ ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿದೆ. ವೈರಸ್ ವಿಷವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಪ್ರಪಂಚದಾದ್ಯಂತ ಈವರೆಗೆ 3,16,732 ಮಂದಿ ಸಾವಿಗೀಡಾಗಿದ್ದು, 48,05,228 ಸೋಂಕು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗ ಪೀಡಿತರಲ್ಲಿ 46,000ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಬೀರವಾಗಿರುವ ಆತಂಕಕಾರಿಯಾಗಿದೆ.

ವಿಶ್ವವ್ಯಾಪಿ ಸಾವಿನ ಸಂಖ್ಯೆ ಆತಂಕವಿರುವಾಗಲೇ, ಸುಮಾರು 18,60,059 ಮಂದಿ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ ಅಪಾರ ಸಾವು-ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕೊರೊನಾ ವೈರಸ್ ದಾಳಿಯಿಂದ ಎಲ್ಲ ರಾಷ್ಟ್ರಗಳು ಕಂಗೆಟ್ಟು ಅಸಹಾಯಕವಾಗಿವೆ..

ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಾಳೆ ವೇಳೆಗೆ ಸಾಂಪ್ರಾಮಿಕ ರೋಗ ಪೀಡಿತರ ಸಂಖ್ಯೆ 50 ಲಕ್ಷ ದಾಟುವ ಆತಂಕವಿದೆ. ಅಮೆರಿಕ, ರಷ್ಯಾ, ಸ್ಪೇನ್, ಇಂಗ್ಲೆಂಡ್ ಮತ್ತು ಇಟಲಿ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ.

ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಟರ್ಕಿ ಮತ್ತು ಇರಾನ್ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದೆ.

ಜಗತ್ತಿನ 250ಕ್ಕೂ ಹೆಚ್ಚು ದೇಶಗಳು ಸತತ ಐದು ತಿಂಗಳುಗಳಿಂದ ಕೊರೊನಾ ನಿಗ್ರಹಕ್ಕಾಗಿ ನಿರಂತರ ಹೋರಾಟ ಮುಂದುವರಿಸಿದ್ದರೂ ಹೆಮ್ಮಾರಿ ನಿಯಂತ್ರಣ ಸಾಧ್ಯವಾಗದಿರುವುದು ಭಾರೀ ಕಳವಳಕಾರಿಯಾಗಿದೆ.


Spread the love

About Laxminews 24x7

Check Also

Pro Kabaddi | ಕಬಡ್ಡಿ: ಯೋಧಾಸ್‌ಗೆ ಗೆಲುವು

Spread the loveಪುಣೆ : ಪ್ರದೀಪ್‌ ನರ್ವಾಲ್‌ (22 ಪಾಯಿಂಟ್ಸ್‌) ಅವರ ಮಿಂಚಿನ ಆಟದ ನೆರವಿನಿಂದ ಯು.ಪಿ.ಯೋಧಾಸ್ ತಂಡ ಪ್ರೊ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ