Breaking News
Home / ಜಿಲ್ಲೆ / ಇಂದು ಬೆಂಗಳೂರಿಗೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ತಟ್ಟಲಿದೆ.

ಇಂದು ಬೆಂಗಳೂರಿಗೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ತಟ್ಟಲಿದೆ.

Spread the love

ಬೆಂಗಳೂರು: ಇಂದು ಬೆಂಗಳೂರಿಗೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ತಟ್ಟಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಆಗಮಿಸಿರುವ ಕಾರ್ಯಕರ್ತೆಯರು ಸಿಐಟಿಯು ನಾಯಕಿ ವರಲಕ್ಷ್ಮಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಲಿದ್ದಾರೆ. ಆದರೆ ಇದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ.

ಮುಂಜಾಗ್ರತೆಯಿಂದ ಸಿಐಟಿಯುನ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಮೆಜೆಸ್ಟಿಕ್‍ನ ರೈಲ್ವೇ ನಿಲ್ದಾಣಕ್ಕೆ ಬಂದಿರೋ ಕಾರ್ಯಕರ್ತೆಯರಿಗೆ ಪೊಲೀಸರು ದಿಗ್ಬಂಧನ ಹಾಕಿದ್ದಾರೆ. ಅತ್ತ ಫ್ರೀಡಂ ಪಾರ್ಕ್‍ಗೆ ಬರುತ್ತಿದ್ದ ಸಾವಿರಾರು ಕಾರ್ಯಕರ್ತೆಯರನ್ನು ಪೀಣ್ಯದ ಬಳಿಯೇ ತಡೆಯಲಾಗಿದೆ. ಖಾಸಗೀಕರಣ ಕೈ ಬಿಡಬೇಕು. ಕನಿಷ್ಟ ಕೂಲಿ ಹೆಚ್ಚಳದೊಂದಿಗೆ ನಿವೃತ್ತಿ ವೇತನ ನೀಡಬೇಕು ಎಂದು ಕಾರ್ಯಕರ್ತೆಯರು ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಪ್ರತಿಭಟನೆಗೆ ಅವಕಾಶ ನಿರಾಕರಣೆಗೆ ಕಾರಣಗಳು:
* ಈ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಸೂಚನೆ ಪಾಲಿಸದಿರುವುದು.
* ಶೇಷಾದ್ರಿ ರಸ್ತೆಯಲ್ಲಿ ಕುಳಿತಿದ್ರಿಂದ ಅಕ್ಕಪಕ್ಕದ ರಸ್ತೆಗಳು ಜಾಮ್ ಆಗಿದ್ದು.
* ಆಂಬುಲೆನ್ಸ್ ಓಡಾಟಕ್ಕು ಸಹ ತೊಂದರೆ ಆಗಿತ್ತು.
* 15,000 ಅಂಗನವಾಡಿ ಕಾರ್ಯಕರ್ತೆಯರು ಸೇರ್ತಾರೆ ಅಂತಾ ಅರ್ಜಿ ನೀಡಿರುವುದು.
* ಫ್ರೀಡಂ ಪಾರ್ಕ್ ಸಾಮರ್ಥ್ಯ ಕೇವಲ ಎರಡರಿಂದ ಮೂರು ಸಾವಿರ ಮಾತ್ರ ಇರೋದು.
* ಪ್ರತಿಭಟನೆಗೆ ಕುಳಿತು ಜಾಮ್ ಮಾಡೋದ್ರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ.
* ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರೋದು.


Spread the love

About Laxminews 24x7

Check Also

ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆದಿದ್ದ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ ಇಬ್ಬರು ಶಿಕ್ಷಕರ ಅಮಾನತು

Spread the love ನವದೆಹಲಿ: ಪರೀಕ್ಷಾರ್ಥಿಗಳಿಗೆ ಅವರ ಉತ್ತರಗಳ ಗುಣಮಟ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಉತ್ತರ ಪ್ರದೇಶದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ