Breaking News

ಮತದಾನ ಮಾಡಿದವ್ರಿಗೆ ಫ್ರೀ ಮಸಾಲೆ ದೋಸೆ ,

Spread the love

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಶುಕ್ರವಾರ 13 ರಾಜ್ಯಗಳ 88 ಸ್ಥಾನಗಳಿಗೆ ಮತದಾನ ಬಿರುಸಿನದ ಸಾಗಿದೆ. ಎರಡನೇ ಹಂತದಲ್ಲಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವೂ ಸೇರಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.ಕೇರಳದ ಎಲ್ಲಾ 20 ಸ್ಥಾನಗಳ ಹೊರತಾಗಿ, ಕರ್ನಾಟಕದ 28 ಸ್ಥಾನಗಳಲ್ಲಿ 14, ರಾಜಸ್ಥಾನದ 13 ಸ್ಥಾನಗಳು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ ಎಂಟು ಸ್ಥಾನಗಳು, ಮಧ್ಯಪ್ರದೇಶದ ಆರು ಸ್ಥಾನಗಳು, ಅಸ್ಸಾಂ ಮತ್ತು ಬಿಹಾರದ ತಲಾ ಐದು ಸ್ಥಾನಗಳು, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳ ಮತದಾನ ಶುಕ್ರವಾರ ತಲಾ ಮೂರು ಸ್ಥಾನಗಳು ಮತ್ತು ಮಣಿಪುರ, ತ್ರಿಪುರಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಾಗಿದ್ದು ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ಬಿರುಸಿನಿಂದ ಸಾಗಿದೆ.


Spread the love

About Laxminews 24x7

Check Also

Tatkalನಲ್ಲಿ ಬುಕ್ಕಿಂಗ್ ಮಾಡಿದ ಕೂಡಲೇ ಕನ್ಫರ್ಮ್​ ಆಗುತ್ತೆ ಸೀಟ್, ಕೆಲವರಿಗಷ್ಟೇ ಗೊತ್ತು ಈ ಟಿಪ್ಸ್​!

Spread the love ನವದೆಹಲಿ(ಸೆ.18): ರೈಲ್ವೆಯನ್ನು ಭಾರತದ ಜೀವನಾಡಿ ಎಂದು ಕರೆಯಲಾಗುತ್ತದೆ. ಪ್ರತಿದಿನ ಕೋಟಿಗಟ್ಟಲೆ ಜನರನ್ನು ತಮ್ಮ ನಿಗದಿತ ಪ್ರದೇಶಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ