Breaking News
Home / ಜಿಲ್ಲೆ /  ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಫೈಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ

 ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಫೈಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ

Spread the love

ಯಾದಗಿರಿ: ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಫೈಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಮನೂರಿನಲ್ಲಿ ನಡೆದಿದೆ.

ಪೊಲೀಸರ ದಾಳಿ ವೇಳೆ 13 ಮಂದಿ ಜೂಜುಕೋರರು ಮತ್ತು ಪಂದ್ಯಕ್ಕಿಟ್ಟಿದ್ದ 4 ಹುಂಜ, 4 ಕತ್ತಿ, 12 ಬೈಕ್ ಸೇರಿದಂತೆ 1.13ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಯಂಕೂಬ್ ಬಿರಾದಾರ್ ಎಂಬಾತ ಈ ಜೂಜಾಟವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜೂಜು ನೋಡಲು ಮತ್ತು ಆಡಲು ಬರುವವರಿಂದ ಸುಮಾರು 500 ಯಿಂದ 1000ರವರೆಗೆ ಬೆಟ್ಟಿಂಗ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಹುಂಜಗಳನ್ನು ಸಾಕಿ ಅವುಗಳಿಗೆ ಕುಸ್ತಿಯ ತರಬೇತಿಯನ್ನು ನೀಡಲಾಗಿರುತ್ತದೆ. ಕೋಳಿ ಪಂದ್ಯಾಟದ ವೇಳೆ ಕಾಲಿಗೆ ಚಾಕುವನ್ನು ಕಟ್ಟಿ ಎರಡು ಕೋಳಿಗಳನ್ನು ಪರಸ್ಪರ ಹೊಡೆದಾಡಲು ಪ್ರೇರೇಪಿಸಲಾಗುತ್ತದೆ. ಹೀಗೆ ಕೋಳಿಗಳ ನಡುವೆ ಒಮ್ಮೆ ಫೈಟ್ ಶುರುವಾಯಿತೆಂದರೆ ಒಂದು ಕೋಳಿ ಸಾಯುವವರೆಗೆ ಮತ್ತೊಂದು ವಿರಮಿಸುವುದಿಲ್ಲ. ಯಾವ ಕೋಳಿ ಗೆಲ್ಲುತ್ತದೆ ಎಂದು ಜೂಜುಕೋರರು ಬೆಟ್ ಕಟ್ಟುತ್ತಾರೆ

 


Spread the love

About Laxminews 24x7

Check Also

ಸಂತೋಷ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ರೈನಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ