Breaking News
Home / Laxminews 24x7 (page 50)

Laxminews 24x7

ಪಕ್ಷೇತರ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟ ವೀಣಾ ಕಾಶಪ್ಪನವರ್‌

ಬಾಗಲಕೋಟೆ, ಏಪ್ರಿಲ್‌ 01: ಲೋಕಸಭಾ ಅಭ್ಯರ್ಥಿಗಳು ಅಂತಿಮವಾಗುತ್ತಿದ್ದಂತೆ ಎಲ್ಲಾ ಪಕ್ಷಗಳಲ್ಲಿಯೂ ಅಸಮಾಧಾನ ಹೊಗೆಯಾಡುತ್ತಿದೆ. ಈ ಬಾರಿ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಅನೇಕರಿಗೆ ಟಿಕೆಟ್‌ ಕೈ ತಪ್ಪಿದ್ದು, ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇದೀಗ ಕಾಂಗ್ರೆಸ್‌ಗೂ ಬಂಡಾಯದ ಬಿಸಿ ತಟ್ಟುತ್ತಿದ್ದು, ಟಿಕೆಟ್‌ ವಂಚಿತೆ ವೀಣಾ ಕಾಶಪ್ಪನವರ್‌ ಬೆಂಬಲಿಗರ ಸಭೆ ಕರೆದಿರುವುದು ರಾಜ್ಯ ಕಾಂಗ್ರೆಸ್‌ ನಾಯಕರ ಆತಂಕಕ್ಕೆ ಕಾರಣವಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಈ ಬಾರಿ ಹೊಸ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕಿಳಿಸಿದ್ದು, …

Read More »

ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಹೊಸ `ಅಬಕಾರಿ ನೀತಿ’ ಜಾರಿ, ಇಂದಿನಿಂದ ‘ಎಣ್ಣೆ’ ಬೆಲೆಯಲ್ಲಿ ಏರಿಕೆ!

ನವದೆಹಲಿ : ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇಂದಿನಿಂದ ದೇಶಾದ್ಯಂತ ಮದ್ಯ ಬೆಲೆಯಲ್ಲಿ ಏರಿಕೆಯಾಗಿದೆ.ಏಕೆಂದರೆ ಇಂದಿನಿಂದ ಹೊಸ ಅಬಕಾರಿ ನೀತಿಯನ್ನು ಸಹ ಜಾರಿಗೆ ತರಲಾಗಿದೆ. ಇದು ಎಲ್ಲಾ ಮೂರು ರೀತಿಯ ಮದ್ಯ, ಬಿಯರ್, ದೇಶೀಯ ಮತ್ತು ಇಂಗ್ಲಿಷ್ ಬೆಲೆಗಳನ್ನು ಹೆಚ್ಚಿಸಿದೆ. ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳು ಮದ್ಯದ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಮದ್ಯ ಗುತ್ತಿಗೆದಾರರಿಗೂ ಅಧಿಸೂಚನೆ ಕಳುಹಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ ಅನ್ವಯವಾಗುತ್ತವೆ. …

Read More »

ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ

ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನದ ಬಳಿಕ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar)​ ಪಿಆರ್​ಕೆ ಪ್ರೊಡೆಕ್ಷನ್ (PRK Production) ಸಂಪೂರ್ಣ ಹೊಣೆ ಹೊತ್ತಿದ್ದಾರೆ. ​ ನಿರ್ಮಾಪಕಿಯಾಗಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲೆಂದೇ ಪುನೀತ್ ರಾಜ್​ಕುಮಾರ್ ಪಿಆರ್​ಕೆ ಪ್ರೊಡೆಕ್ಷನ್ ಶುರು ಮಾಡಿದ್ರು. ಇದೀಗ ಅಪ್ಪು ಕನಸನ್ನು ಅಶ್ವಿನಿ ನನಸು ಮಾಡ್ತಿದ್ದಾರೆ. ಒಳ್ಳೆ ಕಥೆ ಹಾಗೂ ಪ್ರತಿಭಾವಂತರನ್ನು (Talented) ಹುಡುಕಿ …

Read More »

ಹುಲಿ ಸೋಲಿಸಿದ್ದೇವೆ, ಇಲಿ ಸೋಲಿಸೋದು ಕಷ್ಟವಲ್ಲ: ಮಾಲೀಕಯ್ಯ ಗುತ್ತೇದಾರ್ ವ್ಯಂಗ್ಯ

ಕಲಬುರಗಿ: ‘2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಲ್ಲಿ ಈ ಭಾಗದ ಹುಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ ಬಿಜೆಪಿಗೆ ಈ ಬಾರಿ ಇಲಿಯಂತಿರುವ ಅಭ್ಯರ್ಥಿಯನ್ನು ಸೋಲಿಸಲು ಯಾವುದೇ ಕಷ್ಟವಿಲ್ಲ‌’ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ವಿ.ಗುತ್ತೇದಾರ್ ವ್ಯಂಗ್ಯವಾಡಿದರು.   ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ‘ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಬಹಳ ದೊಡ್ಡ ಸ್ಥಾನದಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿದ್ದಂಥವರು …

Read More »

ನಟ ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ ವಿರುದ್ಧ 1 ಕೋಟಿ ‘ಚೆಕ್ ಬೌನ್ಸ್’ ಕೇಸ್ ದಾಖಲಿಸಿದ ಅರ್ಜುನ್ ಸರ್ಜಾ

ಬೆಂಗಳೂರು : ನಟ ದರ್ಶನ್ ಮಾಜಿ ಪಿಎ ಆಗಿದ್ದ ಹಾಗೂ ಚಿತ್ರರಂಗದಲ್ಲಿ ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ಇದೀಗ ಅರ್ಜುನ್ ಸರ್ಜಾ ಒಂದು ಕೋಟಿ ರೂಪಾಯಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ನಟ ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ ಬಗ್ಗೆ ಪತ್ರಿಕಾ ಪ್ರಕಾಟಣೆ ಹೊರಡಿಸಿದ್ದು, ಕಳೆದ ಏಳು ವರ್ಷಗಳಿಂದ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು ಎನ್ನಲಾಗುತ್ತಿದೆ. ಚಿತ್ರರಂಗದಲ್ಲಿ ಮಲ್ಲಿಕಾರ್ಜುನ್ ವಿತರಕರಾಗಿ ಗುರುತಿಸಿಕೊಂಡಿದ್ದರು.ಅನೇಕ ಚಿತ್ರಗಳನ್ನು ದರ್ಶನ್ ಮಾಜಿ …

Read More »

ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮೀಜಿಗಳ 117ನೇ ಜಯಂತಿ ಇಂದು

ತುಮಕೂರು: ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮ ಏಪ್ರಿಲ್ 1ರಂದು ಸಿದ್ಧಗಂಗಾ ಮಠದಲ್ಲಿ ನಡೆಯಲಿದೆ. ಮಠದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಉದ್ಘಾಟಿಸಲಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ. ಡಾ. ಅನ್ನದಾನೇಶ್ವರ ಸ್ವಾಮೀಜಿ, …

Read More »

ಚುನಾವಣಾ ಪ್ರಚಾರ’ದ ಅಖಾಡಕ್ಕಿಳಿದ ‘ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಸಮರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಳಿದಿದ್ದಾರೆ. ಮೈಸೂರು-ಕೊಡಗು, ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲೇ ಬೇಕು ಅಂತ ಪಣ ತೊಟ್ಟಿರುವಂತ ಅವರು, ಇಂದಿನಿಂದ ಮೂರು ದಿನ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಿಗ್ಗೆ 10.15ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. 10.40ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿರುವಂತ ಅವರು ಅಲ್ಲಿಂದ ರಸ್ತೆ ಮೂಲಕ ನಂಜನಗೂಡು ತಾಲೂಕಿನ ಬಿಳಿಗೆರೆಗೆ 11 ಗಂಟೆಗೆ …

Read More »

ಸಂಕೇಶ್ವರ ಮಾರುಕಟ್ಟೆಗೆ ಮಹಾರಾಷ್ಟ್ರ ಮಾವಿನಕಾಯಿ ಲಗ್ಗೆ

ಸಂಕೇಶ್ವರ: ಸಂಕೇಶ್ವರ ಪಟ್ಟಣಕ್ಕೆ ಮಹಾರಾಷ್ಟ್ರದಿಂದ ಮಾವಿನಕಾಯಿಗಳು ಬರುತ್ತಿದ್ದು ಪಟ್ಟಣದ ತುಂಬೆಲ್ಲ ಮಾವಿನಕಾಯಿಗಳದ್ದೇ ರಾಶಿ.   ಆದರೆ ದರ ಮಾತ್ರ ಗಗನಕ್ಕೇರಿದ್ದು ದುಬಾರಿ ದರಕ್ಕೆ ಮಾವಿನಕಾಯಿಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ದೇವಗಡ ಆಪೂಸ್ ಮಾವಿನಕಾಯಿ ದರ ಒಂದು ಡಜನ್ನಿಗೆ ₹800 ರಿಂದ ₹1,000 ಗಳಿದ್ದು ರತ್ನಾಗಿರಿ ಆಪೂಸ್ ಮಾವಿನಕಾಯಿ ದರ ₹1,200 ರೂಪಾಯಿಗಳಷ್ಟಿದೆ.   ಯುಗಾದಿ ನಂತರವೇ ಮಾವಿನ ಹಣ್ಣಿನ ದರ ಇಳಿಮುಖವಾಗಲಿದೆ.

Read More »

ಮೃಣಾಲ್ ಬೆಳಗಾವಿ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡಲಿದ್ದಾನೆ; ಹೆಬ್ಬಾಳಕರ್

ಹಿರೇಬಾಗೇವಾಡಿ: ‘ಜನರ ಕಷ್ಟ ಸುಖಗಳ ಬಗ್ಗೆ ಅರಿವಿರುವ ಮೃಣಾಲ್ ಹೆಬ್ಬಾಳಕರ, ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ಕನಸು ಕಟ್ಟಿಕೊಂಡಿದ್ದಾನೆ. ಬೆಳಗಾವಿ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡಲಿದ್ದಾನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ಇಲ್ಲಿಗೆ ಸಮೀಪದ ಗಜಪತಿ, ಬಡಸ್ ಕೆ.ಎಚ್., ಕುಕಡೊಳ್ಳಿ, ಬೆಂಡಿಗೇರಿ, ನಾಗೇರಹಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಶನಿವಾರ ಮತಯಾಚಿಸಿದ ಅವರು, ‘ನೀವೆಲ್ಲ ಆಶೀರ್ವಾದ ಮಾಡಿ ಅವನನ್ನು ಸಂಸತ್‌ಗೆ ಕಳುಹಿಸಿಕೊಡಿ’ ಎಂದು …

Read More »

19 ಕೆ.ಜಿ ವಾಣಿಜ್ಯ, 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಬೆಲೆ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ ವಾಣಿಜ್ಯ ಸಿಲಿಂಡರ್‌ ಮತ್ತು 5 ಕೆ.ಜಿ ಎಫ್‌ಟಿಎಲ್ (Free Trade LPG) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ ಎಂದು ಮೂಲಗಳು ತಿಳಿಸಿವೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗೆ ₹ 30.50 ಇಳಿಕೆಯಾಗಿದ್ದು, 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್ ಬೆಲೆ ₹7.50 ಇಳಿಕೆಯಾಗಿದೆ.ಪರಿಷ್ಕೃತ ದರಗಳು ಏಪ್ರಿಲ್ 1ರಿಂದ ಅನ್ವಯವಾಗಲಿದೆ. ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್‌ ಬೆಲೆ ₹ 1764.50 ನಿಗದಿಪಡಿಸಲಾಗಿದೆ ಎಂದು ಮೂಲಗಳು …

Read More »