Breaking News

ಮೃಣಾಲ್ ಬೆಳಗಾವಿ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡಲಿದ್ದಾನೆ; ಹೆಬ್ಬಾಳಕರ್

Spread the love

ಹಿರೇಬಾಗೇವಾಡಿ: ‘ಜನರ ಕಷ್ಟ ಸುಖಗಳ ಬಗ್ಗೆ ಅರಿವಿರುವ ಮೃಣಾಲ್ ಹೆಬ್ಬಾಳಕರ, ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ಕನಸು ಕಟ್ಟಿಕೊಂಡಿದ್ದಾನೆ. ಬೆಳಗಾವಿ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡಲಿದ್ದಾನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಸಂಸತ್‌ನಲ್ಲಿ ಮೃಣಾಲ್ ಬೆಳಗಾವಿಯ ಧ್ವನಿಯಾಗಲಿದ್ದಾನೆ: ಸಚಿವೆ ಲಕ್ಷ್ಮಿ

ಇಲ್ಲಿಗೆ ಸಮೀಪದ ಗಜಪತಿ, ಬಡಸ್ ಕೆ.ಎಚ್., ಕುಕಡೊಳ್ಳಿ, ಬೆಂಡಿಗೇರಿ, ನಾಗೇರಹಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಶನಿವಾರ ಮತಯಾಚಿಸಿದ ಅವರು, ‘ನೀವೆಲ್ಲ ಆಶೀರ್ವಾದ ಮಾಡಿ ಅವನನ್ನು ಸಂಸತ್‌ಗೆ ಕಳುಹಿಸಿಕೊಡಿ’ ಎಂದು ವಿನಂತಿಸಿಕೊಂಡರು.

ಮನೆಮಗಬೇಕೋ, ಹೊರಗಿನವರೋ?: ಹುಬ್ಬಳ್ಳಿ-ಧಾರವಾಡ ಜನರಿಂದ ತಿರಸ್ಕಾರಕ್ಕೊಳಗಾಗಿ, ಹಾವೇರಿಯಿಂದ ಟಿಕೆಟ್ ಸಿಗದೆ ಇದೀಗ ಬೆಳಗಾವಿಗೆ ವಲಸೆ ಬಂದಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಬೇಕೋ, ನಿಮ್ಮ ಮನೆ ಮಗ ಮೃಣಾಲ್ ಬೇಕೋ ಎಂದು ನೀವೇ ನಿರ್ಧರಿಸಿ ಎಂದು ಸಚಿವರು ಹೇಳಿದರು.

ಮೃಣಾಲ್ ಹೆಬ್ಬಾಳಕರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಸ್ಥಳೀಯ ಮುಖಂಡರು ಇದ್ದರು


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ