Breaking News
Home / ರಾಜಕೀಯ / ಮೈಸೂರು ಅರಮನೆ ವಿದ್ಯುದ್ದೀಪ ಅಳವಡಿಸುವ ಕಾರ್ಯ ಶುರು

ಮೈಸೂರು ಅರಮನೆ ವಿದ್ಯುದ್ದೀಪ ಅಳವಡಿಸುವ ಕಾರ್ಯ ಶುರು

Spread the love

ಮೈಸೂರು :ಈ ಬಾರಿಯ ದಸರಾ ಕಾರ್ಯಕ್ರಮಗಳು ಅರಮನೆ ಆವರಣಗಷ್ಟೆ ಸೀಮಿತವಾಗಿರುವುದರಿಂದ ಅರಮನೆ ಸೇರಿದಂತೆ ಸುತ್ತಮುತ್ತ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಅರಮನೆಗೆ ಸುಣ್ಣ ಬಣ್ಣ ಬಳಿಯುವ ಮತ್ತು ಝಗಮಗಿಸಲು ವಿದ್ಯುತ್ ಬಲ್ಪ್ ಗಳನ್ನು ಅಳವಡಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ಸಾಗುತ್ತಿದೆ.

ಮೈಸೂರು ಅರಮನೆ ರಂಗು ತುಂಬುವುದೇ ವಿದ್ಯುತ್ ದೀಪಗಳು ಹಾಗಾಗಿ ದಸರಾ ಬರುತ್ತಿದ್ದಂತೆಯೇ ಅರಮನೆಗೆ ಅಳವಡಿಸಲಾಗಿರುವ ವಿದ್ಯುದ್ದೀಪಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತದೆ ಅದರಂತೆ ಈ ಬಾರಿಯೂ ನಡೆಯತ್ತಿದೆ.

ಅರಮನೆ ದೀಪಾಲಂಕಾರ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಆರಂಭವಾಗಿದ್ದು, ಅರಮನೆ ಆಡಳಿತ ಮಂಡಳಿ ಕೆಟ್ಟಿರುವ ಬಲ್ಪ್ ಗಳನ್ನು ಬದಲಿಸುತ್ತಿದೆ. ಈಗಾಗಲೇ ಅರಮನೆ ಹಾಗೂ ಕಾಂಪೌಂಡ್ ಗೆ ಒಂದು ಲಕ್ಷ ಬಲ್ಪ್ ಅಳವಡಿಸಿದ್ದು, ಪ್ರತೀ ವರ್ಷವೂ ಕೆಟ್ಟ ಬಲ್ಬ್ ಗಳನ್ನು ಬದಲಿಸಲಾಗುತ್ತದೆ. ಎತ್ತರದಲ್ಲಿರುವ ಬಲ್ಬ್ ಗಳನ್ನು ಕ್ರೇನ್ ಹಾಗೂ ಡ್ರೋಣ್ ಸಹಾಯದಿಂದ ಅಳವಡಿಸಲಾಗುತ್ತಿದೆ. ಜಯ ಮಾರ್ತಾಂಡ ಗೇಟ್ ಸೇರಿದಂತೆ 80 ಅಡಿ ಎತ್ತರದಲ್ಲಿರುವ ಬಲ್ಪ್ ಗಳನ್ನು ಬದಲಾಯಿಸಲು ಕ್ರೇನ್ ಬಳಸಲಾಗುತ್ತದೆ.

ಇನ್ನು ಅರಮನೆ ದೀಪಾಲಂಕಾರದ ಬಗೆಗಿನ ಇತಿಹಾಸವನ್ನು ನೋಡಿದರೆ 1942ರ ಆಸುಪಾಸಿನಲ್ಲಿ ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು ಎಂದು ಹೇಳಲಾಗಿದೆ. ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್‌ಗಳನ್ನು ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ 30 ವ್ಯಾಟ್ ಬಲ್ಬ್ ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್‌ಗೆ ಇಳಿಸಲಾಯಿತು. ಪ್ರಸ್ತುತ 15 ವ್ಯಾಟ್ಬಲ್ಬ್ ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಪೂರೈಕೆ ಜವಾಬ್ದಾರಿಯನ್ನು ಚೆಸ್ಕಾಂ ವಹಿಸಿಕೊಂಡಿದ್ದು, ದೀಪಾಲಂಕಾರದ ವ್ಯವಸ್ಥೆಗಾಗಿ ಹೆಚ್ಚುಸಾಮರ್ಥ್ಯದ ಮೂರು ಟ್ರಾನ್ಸ್‌ಫಾಮರ್ರ್ಂ‌ಗಳನ್ನು ಅಳವಡಿಸಲಾಗಿದೆ. ಪ್ರತಿ ತಿಂಗಳು 8ರಿಂದ 10 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತದೆ. ತಿಂಗಳಿಗೆ ಸರಾಸರಿ 88 ಸಾವಿರ ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ದಸರಾ ಸಂದರ್ಭದಲ್ಲಿ 1.2 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ ಎನ್ನಲಾಗಿದೆ. ಈ ದೀಪಾಲಂಕಾರಗಳನ್ನು ನೋಡಿಕೊಳ್ಳಲೆಂದೇ ಅರಮನೆಯ ಪವರ್ ಹೌಸ್‌ನಲ್ಲಿ ಪ್ರತ್ಯೇಕ ಸಿಬ್ಬಂದಿಯಿದ್ದಾರೆ. ಇನ್ನು ವಿದ್ಯುದ್ದೀಪಗಳನ್ನು ಉರಿಸಲು ಅರಮನೆ ಹಾಗೂ ಗೇಟ್‌ಗಳಿಗೆ ಪ್ರತ್ಯೇಕ ಮೂರು ಸ್ವಿಚ್ ಅಳವಡಿಸಲಾಗಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಇಲ್ಲಿರುವ ಮೂವರು ಸಿಬ್ಬಂದಿಗಳು ಸ್ವಿಚ್ ಆನ್ ಮಾಡುತ್ತಾರೆ. ಆಗ ಒಮ್ಮೆಲೆ ಅರಮನೆ ದೀಪದ ಬೆಳಕಿನಲ್ಲಿ ಮಿನುಗುತ್ತದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ