Breaking News

ಚಿಕ್ಕೋಡಿ:ಅಂಬುಲೆನ್ಸ್‌ನಲ್ಲಿ ಪ್ರಯಾಣ ಬೆಳೆಸಿದ್ದ ನಕಲಿ ರೋಗಿಗಳ ಬಂಧನ

Spread the love

ಚಿಕ್ಕೋಡಿ: ಭಾರತ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಸಂಚಾರ ಸ್ಥಗಿತ ಹಿನ್ನೆಲೆಯನ್ನೆ ಮಾಸ್ಟರ್ ಪ್ಲಾನ್ ಮಾಡಿ ರೋಗಿಗಳ ಸೋಗಿನಲ್ಲಿ ಅಂಬುಲೆನ್ಸ್ ಏರಿದವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಈ ಘಟನೆ ಮಹರಾಷ್ಟ್ರದ ಕೊಲ್ಹಾಪುರ ನಗರದ ಹೊರವಲಯದಲ್ಲಿ ನಡೆದಿದೆ. ಖಾಸಗಿ ಅಂಬುಲೆನ್ಸ್ ಚಾಲಕನಿಗೆ ಹಣದ ಆಮಿಷ ತೋರಿಸಿ ಕರ್ನಾಟಕದತ್ತ ಬರುತ್ತಿದ್ದ 8 ಜನ ಯುವಕರನ್ನ ಕೊಲ್ಹಾಪುರ ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಾಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ಕರ ಕೀಣೆ ಟೋಲ್ ನಾಕಾ ಬಳಿ ಅಂಬುಲೆನ್ಸ್ ಪರಿಶೀಲಿಸಿದಾಗ ರೋಗಿಯ ಬದಲು ಯುವಕರು ಇರುವುದು ಪತ್ತೆಯಾಗಿದೆ. ಅಲ್ಲದೆ ಬ್ಯಾಂಡೇಜ್ ಸುತ್ತಿಕೊಂಡು ನಕಲಿ ರೋಗಿಗಳಾಗಿ ಈ ಯುವಕರು ಪುಣೆಯಿಂದ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದರು.

ಈ ಕುರಿತು ಕೊಲ್ಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ