Breaking News
Home / ರಾಜ್ಯ / ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್‌ ವಿಧಿವಶ

ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್‌ ವಿಧಿವಶ

Spread the love

ಬೆಂಗಳೂರು: ಸ್ಯಾಂಡಲ್‌ ವುಡ್‌ ನ ಹಿರಿಯ ನಿರ್ದೇಶಕ ಶ್ರಿನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್‌ ಸೋಮವಾರ (ಫೆ.20 ರಂದು) ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 

1966 ರಲ್ಲಿ ಬಂದ ʼಸಂಧ್ಯಾರಾಗʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಿರ್ದೇಶಕರಾಗಿ ಕನ್ನಡದಲ್ಲಿ ʼಕಸ್ತೂರಿ ನಿವಾಸʼ, ʼಎರಡು ಕನಸುʼ, ʼಬಯಲು ದಾರಿʼ, ʼಜೀವನ ಚೈತ್ರʼ,ʼಗಾಳಿ ಮಾತುʼ, ʼಹೊಸ ಬೆಳಕುʼ, ʼಆಪರೇಷನ್‌ ಡೈಮಂಡ್‌ ರಾಕೆಟ್‌ʼ, ʼಜೇಡರ ಬಲೆʼ, ʼಗೋವಾದಲ್ಲಿ ಸಿಐಡಿ999ʼ, ಹೀಗೆ ಅನೇಕ ಚಿತ್ರಗಳನ್ನು ಮಾಡಿ ಸೂಪರ್‌ ಹಿಟ್‌ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಡಾ. ರಾಜ್ ಕುಮಾರ್‌ ಅವರೊಂದಿಗೆ ಬಂದ ಭಗವಾನ್‌ ಅವರ ಸಿನಿಮಾಗಳು ಆ ಕಾಲದಲ್ಲಿ ಮೋಡಿ ಮಾಡಿತ್ತು. 2019 ರಲ್ಲಿ ಸಂಚಾರಿ ವಿಜಯ್‌ ಅವರ ʼಆಡುವ ಗೊಂಬೆʼ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ನಿರ್ದೇಶಕ ದೊರೈರಾಜ್‌ ಜೊತೆಗೂಡಿ ಅನೇಕ ಚಿತ್ರಗಳಿಗೆ ಆಯಕ್ಷನ್ ಕಟ್‌ ಹೇಳಿದ್ದರು. ದೊರೈ – ಭಗವಾನ್‌ ಎಂದೇ ಇವರು ಖ್ಯಾತಿಯಾಗಿದ್ದರು.

ಬೆಂಗಳೂರಿನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ