Breaking News
Home / ಜಿಲ್ಲೆ / ಪಾದರಾಯನಪುರದ ಪುಂಡರ ‘ಲೀಡರ್’ ಜಮೀರ್ ಹೇಳಿಕೆಗಳು ಸರಿಯೇ..?

ಪಾದರಾಯನಪುರದ ಪುಂಡರ ‘ಲೀಡರ್’ ಜಮೀರ್ ಹೇಳಿಕೆಗಳು ಸರಿಯೇ..?

Spread the love

ಬೆಂಗಳೂರು, – ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಇಡೀ ದೇಶದ ಜನತೆ ಆತಂಕಕ್ಕೊಳಗಾಗಿ ಗೃಹಬಂಧನದಲ್ಲಿದೆ. ಆದರೆ, ಬೆಂಗಳೂರಿನ ಪಾದರಾಯನಪುರದ ಜನತೆಗೆ ಅದೇನಾಗಿದೆಯೋ ಏನೋ ಗೊತ್ತಿಲ್ಲ. ಮನಬಂದಂತೆ ವರ್ತಿಸುತ್ತಿದ್ದಾರೆ.

ಇಲ್ಲಿನ ಜನಪ್ರತಿನಿಧಿಯಾದ ಜಮೀರ್ ಅಹಮ್ಮದ್ ಕೂಡ ಸಮರ್ಥಿಸಿಕೊಳ್ಳಲು ಮುಂದಾಗಿ ಗೂಂಡಾ ರೀತಿಯಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್-19 ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ಸೋಂಕಿತರನ್ನು ಚಿಕಿತ್ಸೆಗೊಳಪಡಿಸುವುದು, ಶಂಕಿತರನ್ನು ಕ್ವಾರಂಟೈನ್ ಮಾಡುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ

ಜಾತಿ-ಮತ, ಧರ್ಮಗಳನ್ನು ಬದಿಗೊತ್ತಿ ಸರ್ಕಾರ ಹಗಲಿರುಳು ಈ ಕೆಲಸ ಮಾಡುತ್ತಿದೆ. ಆದರೆ, ಶಾಸಕ ಜಮೀರ್ ಅಹಮ್ಮದ್ ಅವರು ಯಾರ ಅನುಮತಿ ಪಡೆದು ಪಾಲಿಕೆ ಸಿಬ್ಬಂದಿ ಅಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸುತ್ತಾರೆ. ಆಮೇಲೆ ರಾತ್ರಿ ಕ್ವಾರಂಟೈನ್‍ಗೆ ಕರೆದೊಯ್ಯುವುದು ಬೇಡ, ಬೆಳಗ್ಗೆ ಕರೆದೊಯ್ಯೋಣ ಎಂದು ಸಿಬ್ಬಂದಿಗೆ ಹೇಳುತ್ತಾರೆ. ಇಂತಹ ಅಸಮಂಜಸ ಹೇಳಿಕೆಗಳು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಗಲಾಟೆ ಮಾಡಿರುವವರು ಅಮಾಯಕರು, ಅನಕ್ಷರಸ್ಥರು. ರಾತ್ರಿ ವೇಳೆ ಏಕಾಏಕಿ ಪಾದರಾಯನಪುರಕ್ಕೆ ಹೋಗಿ ಜನರನ್ನು ಕ್ವಾರಂಟೈನ್‍ಗೆ ಕರೆದುಕೊಂಡು ಹೋಗಿದ್ದರಿಂದ ಜನ ಆತಂಕಗೊಂಡು ಗಲಾಟೆ ಮಾಡಿದ್ದಾರೆಂದು ಗೂಂಡಾಗಳ ಪರ ವಾದ ಮಾಡಲು ಮುಂದಾಗಿರುವುದು ಎಷ್ಟು ಸರಿ?

ಆರೋಗ್ಯದ ವಿಷಯದಲ್ಲಿ ಹಗಲು-ರಾತ್ರಿ ಎಂಬುದು ಸರಿಯೇ? ವೈರಸ್ ಸಮಯ ಕೇಳಿ ಬರುತ್ತದೆಯೇ? ಹೇಳಿ ಕೇಳಿ ಇದು ತೀವ್ರ ಸಾಂಕ್ರಾಮಿಕ ರೋಗವಾಗಿದೆ. ದೇಶದ ಆರ್ಥಿಕತೆಗೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾದವರು ಸರ್ಕಾರಕ್ಕೆ ಸಹಕಾರ ನೀಡಬೇಕು. ತಮ್ಮ ಸಮುದಾಯದ ಜನರಿಗೆ ಬುದ್ಧಿ ಹೇಳಬೇಕು.

ಅದನ್ನು ಬಿಟ್ಟು ಆಕ್ರೋಶಭರಿತ ಮಾತುಗಳನ್ನಾಡುವುದು, ಮಾಧ್ಯಮದವರ ಮೇಲೆ ಗರಂ ಆಗುವುದು ಸಮಂಜಸವಲ್ಲ. ನಮ್ಮನ್ನು ಕೇಳಿ ಆ ಸ್ಥಳಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಒಂದು ನಿರ್ಧಾರ ತೆಗೆದುಕೊಂಡಾಗ ಆ ವ್ಯವಸ್ಥೆಗೆ ಎಲ್ಲರೂ ತಲೆಬಾಗಬೇಕು. ಇದು ಜಮೀರ್ ಅವರಿಗೆ ಹೊರತಾಗಿಲ್ಲ. ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು.

ಇಲ್ಲದಿದ್ದರೆ ಅವರು ಇದುವರೆಗೆ ಮಾಡಿದ ಜನಸೇವೆ ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತೆ ಆಗುತ್ತದೆ. ಪ್ರಧಾನಿ ಮೋದಿ ಅವರೇ ಖುದ್ದು ಯಾವುದೇ ಜಾತಿ, ಧರ್ಮದ ಆಧಾರವಾಗಿ ಈ ರೋಗ ಹರಡುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಈ ರೋಗವನ್ನು ಎದುರಿಸೋಣ ಎಂದು ಕರೆಕೊಟ್ಟಿದ್ದಾರೆ.

ಇಂತಹ ಸಂದರ್ಭದಲ್ಲಿ ಸಮುದಾಯದ ನಾಯಕರೆನಿಸಿಕೊಂಡವರು ಮುಂದೆ ನಿಂತು ಜಾಗೃತಿ ಮೂಡಿಸಿ ಕ್ವಾರಂಟೈನ್ ಮಾಡಿಸಿ ಅವರ ಆರೋಗ್ಯವನ್ನು ಕಾಪಾಡುವುದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಅನಗತ್ಯ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ತಮ್ಮ ಭವಿಷ್ಯಕ್ಕೆ ತಾವೇ ಕ್ವಾರಂಟೈನ್ ಮಾಡಿಕೊಂಡಂತಾಗುತ್ತದೆ. ಇನ್ನಾದರೂ ಎಚ್ಚರ ವಹಿಸಿ ತಮ್ಮ ವರ್ತನೆ ಸರಿಪಡಿಸಿಕೊಳ್ಳಿ.

ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದ ಪಾದರಾಯನಪುರ, ಬಾಪೂಜಿನಗರ ಎರಡೂ ವಾರ್ಡ್‍ಗಳನ್ನು ಸೀಲ್‍ಡೌನ್ ಮಾಡಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇಲ್ಲಿ ಬಿಬಿಎಂಪಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದರು.

ನಿನ್ನೆ ಸುಮಾರು 58 ಜನ ಶಂಕಿತರನ್ನು ಕ್ವಾರಂಟೈನ್ ಮಾಡಲು ಮುಂದಾದ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ವಾರಂಟೈನ್‍ಗೆ ಒಪ್ಪದ ಹಲವರು ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪೆÇಲೀಸರ ಮೇಲೂ ಕೂಡ ಹಲ್ಲೆಗೆ ಮುಂದಾಗಿದ್ದಾರೆ.

ಬ್ಯಾರಿಕೇಡ್‍ಗಳನ್ನು ಕಿತ್ತುಹಾಕಿ ಮನಬಂದಂತೆ ವರ್ತಿಸಿದ್ದಾರೆ. ಇವರು ಅಕ್ಷರಸ್ಥರೋ, ಅನಕ್ಷರಸ್ಥರೋ, ದುರುದ್ದೇಶಪೂರಿತವಾಗಿ ಈ ಘಟನೆ ಮಾಡಿದರೋ, ದುಷ್ಕರ್ಮಿಗಳೋ ಅದು ಬೇರೆ ವಿಷಯ. ಆದರೆ, ಈ ಭಾಗದ ಅಲ್ಪಸಂಖ್ಯಾತ ಮುಖಂಡರೂ ಆದ ಶಾಸಕ ಜಮೀರ್ ಅಹಮ್ಮದ್ ಅವರು ಘಟನೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದು ವಿಪರ್ಯಾಸವೇ ಸರಿ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ