ಬೆಂಗಳೂರು, -ರಾಜ್ಯದ ಎಲ್ಲ ಮೆಡಿಕಲ್ ಕಾಲೇಜ್ ಗಳಲ್ಲಿ ಲ್ಯಾಬ್ ತೆರೆಯಲು ಉದ್ದೇಶಿಸಲಾಗಿದ್ದು, ಮೇ ಅಂತ್ಯಕ್ಕೆ 60 ಲ್ಯಾಬ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಈವರೆಗೆ 23397 ಪರೀಕ್ಷೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ 59.21 ಪರೀಕ್ಷೆಯ ಪೈಕಿ ಒಬ್ಬರಿಗೆ ಸೋಂಕು ಕಂಡುಬರುತ್ತಿದೆ ಎಂದರು. ನಿನ್ನೆವರೆಗೂ ಕೇರಳ ಇತ್ತು. ಇವತ್ತು ಎರಡನೇ ಸ್ಥಾನಕ್ಕೆ ಹರಿಯಾಣ ಬಂದಿದೆ. ಸದ್ಯಕ್ಕೆ ಕೇರಳ ಮೂರನೇ ಸ್ಥಾನದಲ್ಲಿದ್ದು 57 ಪರೀಕ್ಷೆಗಳಿಗೆ ಒಂದು ಸೋಂಕು ಪ್ರಕರಣ ಪತ್ತೆಯಾಗುತ್ತಿದೆ. ರಾಜ್ಯವು ಪರೀಕ್ಷೆ ಪ್ರಮಾಣದಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ ಎಂದು ಹೇಳಿದರು
# 55 ವರ್ಷ ಮೀರಿದವರಿಗೆ ಪರೀಕ್ಷೆ :
55 ವರ್ಷ ಮೀರಿದವರು ಸಣ್ಣ ತೊಂದರೆ ಆದರೂ ಪರೀಕ್ಷೆ ಮಾಡಿಸಿಕೊಳ್ಳಿ. ಈಗಾಗಲೇ ನಮ್ಮ ಎಲ್ಲ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳ ಲಾಗುತ್ತಿದೆ. ಶೆ.7.7 ರಷ್ಟು ಹಿರಿಯ ನಾಗರಿಕರು ನಮ್ಮ ರಾಜ್ಯದಲ್ಲಿದ್ದಾರೆ. 2011 ರ ಜನಸಂಖ್ಯೆಯಂತೆ 57.91 ಲಕ್ಷ ಹಿರಿಯ ನಾಗರಿಕರು ಇದ್ದಾರೆ.
ಶೇ.87 ರಷ್ಟು ಜನರಿಗೆ ಜ್ವರ ಬರುತ್ತೆ. ಶೇ.13.9 ಜನಕ್ಕೆ ಗಂಟಲು ನೋವು ಬರುತ್ತದೆ. ಶೇ.67 ರಷ್ಟು ಜನಕ್ಕೆ ಕೆಮ್ಮು ಬರಲಿದೆ. ನೆಗಡಿ, ಕೆಮ್ಮು, ಬೇದಿ, ಸುಸ್ತು ತಲೆನೊವು ಬರಲಿದೆ. ಹಾಗಾಗಿ ಲಕ್ಷಣ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬನ್ನಿ ಎಂದು ಹೇಳಿದರು.
ಕೊರೋನಾದಿಂದ 16 ಸಾವು ಆಗಿದೆ. ಇದನ್ನು ತಪ್ಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಹೆಚ್ಚಾಗಿ 55 ರಿಂದ 80 ವಯಸ್ಸಿನ ಒಳಗಿನವರು ಸಾವಿಗೆ ಈಡಾಗಿದ್ದಾರೆ ಎಂದರು. ಕೇಂದ್ರದ ಮಾರ್ಗಸೂಚಿ ಅನ್ವಯ ನಾವು ಮಾರ್ಗಸೂಚಿ ಹೊರಡಿಸಿದ್ದೇವೆ. ಹಿರಿಯ ನಾಗರಿಕರನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದಾಗಿದೆ. 55 ವರ್ಷ ಮೀರಿದ ಜನ ಮುಂದೆಯೂ ಮನೆಯಲ್ಲೇ ಇರಬೇಕು.
ಕೊರೋನಾ ಸಮಸ್ಯೆ ಇಲ್ಲವಾಗುವವರೆಗೂ ಅವರನ್ನು ಕಿರಿಯರು ನೋಡಿಕೊಳ್ಳಬೇಕು. ಇಡೀ ಸರ್ಕಾರ ಸಮರೋಪಾಪಿಯಲ್ಲಿ ಕೆಲಸ ಮಾಡುತ್ತಿದೆ. ಅಸ್ತಮಾ, ಶ್ವಾಸಕೋಶ ತೊಂದರೆ, ಕ್ಷಯ ರೋಗ ಇರುವವರು ಎಚ್ಚರಿಕೆಯಿಂದ ಇರಬೇಕು.
ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡ ರೋಗಿಗಳು, ಲಿವರ್ ಕಾಯಿಲೆ, ಮದ್ಯವ್ಯಸನಿಗಳು, ವೈರಲ್ ಹೆಪಟೈಟಿಸ್, ಪಾರ್ಕಿನ್ಸನ್, ಸ್ಟ್ರೋಕ್, ಶುಗರ್, ಬಿಪಿ, ಕ್ಯಾನ್ಸರ್, ಎಚ್ ಐವಿ ರೋಗಿಗಳು ಬಹಳ ಎಚ್ಚರಿಕೆ ವಹಿಸಬೇಕು. ಇಂಥವರು ಕೊರೋನಾಗೆ ಸಾಫ್ಟ್ ಟಾರ್ಗೆಟ್ ಆಗಿದೆ. ಇವರಿಗೆ ಬೇಗ ಕೊರೋನಾ ಅಂಟಿಕೊಳ್ಳುವ ಸಾದ್ಯತೆ ಇದೆ ಎಂದರು.
ಹಾಹಾಗಿ 55 ವರ್ಷ ಮೇಲಿನ ಎಲ್ಲರಿಗೂ ಸಣ್ಣ ಲಕ್ಷಣ ಕಂಡುಬಂದರೂ ಪರೀಕ್ಷೆ ನಡೆಸುತ್ತೇವೆ. ಒಂದೂ ವರೆ ಲಕ್ಷ ತ್ವರಿತ ಪರೀಕ್ಷಾ ಕಿಟ್ ತರಿಸುತ್ತಿದ್ದೇವೆ. ನಮ್ಮಲ್ಲಿ ರಿಯಲ್ ಟೈಂ ಟೆಸ್ಟ್ ಮಾಡುತ್ತಿದ್ದು ಇದೇ ಸಾಕಾಗಲಿದೆ. ಆರ್ಟಿಪಿಸಿಆರ್ ನಿಂದ ಖಚಿತ ವರದಿ ಸಿಗುತ್ತಿದೆ. ಹಾಗಾಗಿ ತ್ವರಿತ ಪರೀಕ್ಷೆಗಿಂದ ಖಚಿತ ವರದಿ ಸಿಗಲಿದೆ.
ಹಿರಿಯ ನಾಗರಿಕರನ್ನು ಆರೈಕೆ ಮಾಡುವವರು ಎಚ್ಚರಿಕೆ ವಹಿಸಬೇಕು .ಅವರಿಂದ ಭೌತಿಕ ಅಂತರ ಕಾಯ್ದು ಕೊಳ್ಳಬೇಕು. ಮನೆಗೆ ಅತಿಥಿಗಳು ಬರುವುದನ್ನ ತಪ್ಪಿಸಬೇಕು. ಹಿರಿಯ ನಾಗರಿಕರು ಹೊರಗೆ ಕಾಲಿಡಬಾರದು. ಮನೆಯಲ್ಲಿ ಇದ್ದಾಗ ಹಿರಿಯ ನಾಗರೀಕರು ಕ್ರಿಯಾಶೀಲವಾಗಿರಬೇಕು ಎಂದು ಸಚಿವರು ಸಲಹೆ ಮಾಡಿದರು.
ಯೋಗ, ಧ್ಯಾನ ಮಾಡಬೇಕು, ಐದಾರು ಬಾರಿ ಕೈ ತೊಳೆದುಕೊಳ್ಳಬೇಕು.
ಕೆಮ್ಮುವಾಗ ಹ್ಯಾಂಡ್ ಕರ್ಚೀಫ್ ಬಳಕೆ ಉತ್ತಮ. ಒಳ್ಳೆಯ ಆಹಾರ ಪದ್ದತಿ ಅನುಸರಿಸಬೇಕು. ಹಣ್ಣು , ತರಕಾರಿ, ಹೆಚ್ಚು ನೀರು ತೆಗೆದುಕೊಳ್ಳಬೇಕು. ಹಿರಿಯರು ರಕ್ತದ ಆಕ್ಸಿಮೀಟರ್ ಚೆಕ್ ಮಾಡಿಕೊಳ್ಳಬೇಕು.
ಕನಿಷ್ಠ ಮೂರು ಲೀಟರ್ ನೀರು ಕುಡಿದರೆ ಉತ್ತಮ. ಮೇ 3 ರ ತನಕ ಲಾಕ್ ಡೌನ್ ಮುಂದುರಿಸಲು ತೀರ್ಮಾನ ಆಗಿದೆ. ಆರ್ಥಿಕ ನಷ್ಟಕ್ಕೂ ಮಿಗಿಲಾಗಿ ನಾಡಿನ ಜನರ ಜೀವ ಉಳಿಸಿಕೊಳ್ಳಲು ಇಂಥ ತೀರ್ಮಾನ ಆಗಿದೆ ಎಂದರು.
ಕೋವಿಡ್ ಕೆಲಸ ಮಾಡುತ್ತಿರುವ ವೈದ್ಯಕೀಯ ಕಾಲೇಜು ಸಿಬ್ಬಂದಿಗೆ ಏಳನೇ ವೇತನ ಆಯೋಗದ ಶಿಫಾರಸು ಅನ್ವಯ ಭತ್ಯೆ ನೀಡುವ ನಿರ್ಧಾರ ಆಗಿದೆ. 2804 ವೈದ್ಯರಿಗೆ ವರ್ಷಕ್ಕೆ 137 ಕೋಟಿ ರೂ ಹೆಚ್ಚುವರಿ ಭತ್ಯೆ ನೀಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರಿಗೂ ಅನ್ವಯ. ಇದಕ್ಕಾಗಿ ಮುಖ್ಯಮಂತ್ರಿ ಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಮಾಡಿರುವ ಟೆಸ್ಟ್ ನಲ್ಲಿ ಕನಿಷ್ಟ ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ನಿನ್ನೆ 2530 ಟೆಸ್ಟ್ ಮಾಡಿದೆವು, ಈ ಪೈಕಿ 5 ಪ್ರಕರಣ ಪಾಸಿಟಿವ್ ಬಂದಿದೆ. ಇದು ಆಶಾದಾಯಕ ಬೆಳವಣಿಗೆ. ಕೊರೋನಾ ಮುಚ್ಚಿಡುವ ಕೆಲಸ ಮಾಡುವವರಿಂದ ಆತಂಕ ಇದೆ.
ಪ್ರಾಥಮಿಕ ಸಂಪರ್ಕದಿಂದ 176 ಸೋಂಕು ಪ್ರಕರಣಗಳು ಕಂಡು ಬಂದಿದ್ದರೆ, ದ್ವಿತೀಯ ಸಂರ್ಕದಿಂದ 9 ಸೋಂಕು ಪತ್ತೆಯಾಗಿವೆ. ಎಲ್ಲ ಪ್ರಕರಣಗಳಲ್ಲಿ ವೈದ್ಯಕೀಯ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಇವತ್ತು ಕೇಂದ್ರ ದಿಂದ ಪಿಪಿಇ ಕಿಟ್ ಬರುತ್ತಿವೆ.
ವೈದ್ಯಕೀಯ ಸಿಬ್ಬಂದಿಯ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ ನೀಡಲಾಗುವುದು. ಈ ವೈರಸ್ ಗೆ ಔಷದಿಯ ಪ್ರಯೋಗ ನಡೆಯುತ್ತಿದೆ. ಯುಎಸ್ ಎ ನಲ್ಲಿ ಎರಡು ಮಂಗಗಳ ಗುಂಪಿನ ಮೇಲೆ ಪ್ರಯೋಗ ನಡೆದಿದೆ.