Breaking News
Home / 2021 / ಆಗಷ್ಟ್ (page 68)

Monthly Archives: ಆಗಷ್ಟ್ 2021

ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್‌

ಕಾರವಾರ ; ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ನಲ್ಲಿ ಜಾವೆಲಿನ್‌ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ ಅವರ ಸಾಧನೆಗೆ ಜಿಲ್ಲೆಯ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಅಥ್ಲೆಟಿಕ್‌ ಕೋಚ್‌ ಕಾಶೀನಾಥ ನಾಯ್ಕ ಅವರ ಶ್ರಮ ಅಪಾರವಾದುದು. ಕಾಶೀನಾಥ ಅವರು ಭಾರತೀಯ ಅಥ್ಲೆಟಿಕ್ಸ್ ತಂಡದ ತರಬೇತುದಾರರಾಗಿದ್ದರು. ಈ ವೇಳೆ ಎರಡು ವರ್ಷಗಳ ಕಾಲ ನೀರಜ್‍ಗೆ ತರಬೇತಿ ನೀಡಿದ್ದ ಅವರು ಜಾವೆಲಿನ್‌ ಎಸೆತದ ಉತ್ಕೃಷ್ಟ ಕೌಶಲಗಳನ್ನು ಹೇಳಿಕೊಟ್ಟಿದ್ದರು.ಭಾರತೀಯ ಸೈನ್ಯದಲ್ಲಿರುವ ನೀರಜ್ …

Read More »

ಬೇಕಾದ್ರೆ ಅರೆಸ್ಟ್ ಮಾಡಿ.. ಅಂಗಡಿ ಬಂದ್ ಮಾಡೋದಿಲ್ಲ : ರಾಜ್ಯ ಸರ್ಕಾರದ ‘ರೂಲ್ಸ್’ಗೆ ವ್ಯಾಪಾರಿಗಳ ಸೆಡ್ಡು.!

ಮೈಸೂರು : ಜಿಲ್ಲೆಯಲ್ಲಿ ಅವೈಜ್ಞಾನಿಕವಾಗಿ ಕೊರೋನಾ ವೀಕ್ ಎಂಡ್ ರೂಲ್ಸ್ ಅನ್ನು ಜಾರಿಗೊಳಿಸಲಾಗಿದೆ. ಮೈಸೂರು ಪ್ರವಾಸಿಗರ ನಗರ, ಗಡಿ ಭಾಗದಿಂದ ನಗರ ದೂರವೇ ಇದೆ. ಹೀಗಿದ್ದೂ ಕೊರೋನಾ ವೀಕೆಂಡ್ ರೂಲ್ಸ್ ಅನ್ನು ಸರ್ಕಾರ ಜಾರಿಗೊಳಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಬೇಕಾದ್ರೆ.. ನೀವು ನಮ್ಮನ್ನು ಅರೆಸ್ಟ್ ಮಾಡಿ.. ಅಂಗಡಿ ಬಂದ್ ಮಾಡೋದಿಲ್ಲ ಎಂಬುದಾಗಿ ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ವ್ಯಾಪಾರಿಗಳು ಸೆಡ್ಡು ಹೊಡೆದಿದ್ದಾರೆ.     ಇಂದು ಮೈಸೂರಿನ ಸಂಘ ಸಂಸ್ಥೆಗಳ …

Read More »

ಫ್ಲೈ ಓವರ್‌ನಿಂದ ನೆಲಕ್ಕೆ ಉರುಳಿದ ಕ್ಯಾಂಟರ್ : ಡ್ರೈವರ್ ಮತ್ತು ಕ್ಲಿನರ್ ಪ್ರಾಣಾಪಾಯದಿಂದ ಪಾರು MORNING TOP NEWS

ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಮೋಟ ಸಾಗಣೆ ಮಾಡುತ್ತ ಲಾರಿ ಪಲ್ಟಿ ಹೊಡೆದ ಘಟನೆ ಗುಡಿಬಂಡೆಯಲ್ಲಿ ನಡೆದಿದೆ. ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕಮ್ ದೂರ್ ನಿಂದ ಕೋಲಾರಕ್ಕೆ ಹೊರಟಿದ್ದ ಟೊಮೆಟೊ ಹೊತ್ತ ಐಚರ್ ಕ್ಯಾಂಟರ್ ನಿಯಂತ್ರಣ ತಪ್ಪಿ‌ ಮೇಲ್ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು 10 ಅಡಿಯಿಂದ ಸರ್ವಿಸ್ ರಸ್ತೆಯ ಕೆಳಗೆ ಬಿದ್ದಿದೆ.ಅದೃಷ್ಟವಶ್ ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ …

Read More »

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು.

ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ಕುಟುಂಬದ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು, ನವ ದಂಪತಿ ಮತ್ತು ಅತ್ತಿಗೆ ಮೂವರೂ ದುರಂತ ಅಂತ್ಯ ಕಂಡಿದ್ದಾರೆ. ಮದುವೆ ಮನೆಯಲ್ಲೀಗ ಸೂತಕ ಆವರಿಸಿದ್ದು, ಮೂವರ ಸಾವಿನ ಸುದ್ದಿ ಕೇಳಿದ ಸಂಬಂಧಿಕರು, ಗ್ರಾಮಸ್ಥರು, ‘ಅಯ್ಯೋ ದೇವರೇ, ನೀನೆಂಥಾ ಕ್ರೂರಿ?’ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸದ್ದಾಂ ರಾಜೇಸಾಬ ಸೊನ್ನದ ಜಾತಗಾರ(27) ಮತ್ತು ಇವರ ಪತ್ನಿ ಸಲೀಮಾ ಸದ್ದಾಂ(25) ಹಾಗೂ ಸದ್ದಾಂ …

Read More »

ಕೃಷಿ ಹೊಂಡಕ್ಕೆ ಎರಡು ಜೀವ ಬಲಿ; 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಬ್ಬರ ಸಾವು

ಚಿತ್ರದುರ್ಗ: ರಜೆಯಲ್ಲಿ ಮಕ್ಕಳು ನೀರಿಗಿಳಿದು ಅನಾಹುತ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಜಮೀನೊಂದರಲ್ಲಿದ್ದ ಕೃಷಿಹೊಂಡಕ್ಕೆ ಎರಡು ಜೀವಗಳು ಬಲಿಯಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಜಮೀನಿನ ಕೃಷಿಹೊಂಡಕ್ಕೆ ಬಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಆರನೇ ತರಗತಿಯ ರಘು (12), ನಾಲ್ಕನೇ ತರಗತಿ ಸಿದ್ಧೇಶ್​ (10) ಮೃತಪಟ್ಟವರು.

Read More »

ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳಿದ್ದಾರೆ ದಂಡ!

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರುಡುವುದಲ್ಲದೆ, ಶುಚಿತ್ವಕೂ ಭಂಗ ಉಂಟಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ. ನಿಗಮದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕ್ರಮ ಜೂನ್ 2020 ರಿಂದ ಜಾರಿಗೆ ತರಲಾಗಿರುತ್ತದೆ. ಜನ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯುಟಿಫುಲ್ ಬೆಂಗಳೂರು ಹಾಗೂ ಸಾರಾ ಜಹಾನ್ ಸೆ ಅಚ್ಚಾ ಫುಣೆ ತಂಡಗಳು “ಉಗುಳುವ ನಿಷೇಧದ ಅಭಿಯಾನ” ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿರುತ್ತಾರೆ. ಕೊರೋನಾ ಮಹಾಮಾರಿಯು ಪ್ರಪಂಚವನ್ನೇ …

Read More »

ಕೋವಿಡ್ ಮೂರನೇ ಅಲೆ ಆತಂಕ; ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿರ್ಧಾರ

ಬೆಂಗಳೂರು: ಕೋವಿಡ್ ಮೂರನೇ ಅಲೆ ಆತಂಕ‌ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯೋತ್ಸವನ್ನ ಈ ಬಾರಿ ಸರಳವಾಗಿ ಆಚರಿಸಲು ಬಿಬಿಎಂಪಿ ನಿರ್ಧರಿಸಿದೆ. ಅದರಂತೆ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಭೆ ಕರೆದಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗಳ ಬಗ್ಗೆ ಸಭೆ ನಡೆಯಲಿದೆ. ಸಭೆಯಲ್ಲಿ ವಲಯವಾರು ಬಿಬಿಎಂಪಿ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸೋಂಕು ಹರಡದಂತೆ ಸರಳವಾಗಿ ಯಾವ ರೀತಿ ಆಚರಿಸಬೇಕು. …

Read More »

ಎಸ್​ಎಸ್​ಎಲ್​ಸಿ ಫಲಿತಾಂಶ ಆಗಸ್ಟ್ 9 ರ ಸೋಮವಾರ ಪ್ರಕಟ

ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಎಸ್​ಎಸ್​ಎಲ್​ಸಿ ಫಲಿತಾಂಶ ಆಗಸ್ಟ್ 9 ರ ಸೋಮವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಸೋಮವಾರ ಮಧ್ಯಾಹ್ನ 3:30 ಕ್ಕೆ ಪರೀಕ್ಷೆಯ ಫಲಿತಾಂಶ ಹೊರಬೀಳಲಿದೆ. ವಿದ್ಯಾರ್ಥಿಗಳ ಮೊಬೈಲ್​ಗಳಿಗೆ ನೇರವಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶವನ್ನ ಕಳುಹಿಸಲಾಗುವುದು ಎಂದು ಹೇಳಲಾಗಿದೆ. ಅಂದು ಮಧ್ಯಾಹ್ನ 3:30ಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​​ ನೇತೃತ್ವದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಚಿವರಿಗೆ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಸಾಥ್ ನೀಡಲಿದ್ದಾರೆ.

Read More »

ರಾಜ್ಯದ ಯಾವ್ಯಾವ ಕಡೆ ಎಷ್ಟಿದೆ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು, ಆಗಸ್ಟ್‌ 07: ದೇಶದಲ್ಲಿ ಸತತ 20 ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಆಗಸ್ಟ್ 7ರಂದು ಕೂಡ ಇಂಧನ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಜುಲೈ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆಯಲ್ಲಿ ಏರಿಳಿತ ಕಂಡುಬಂದಿತ್ತು. ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲೇ 21 ಬಾರಿ ಬೆಲೆ …

Read More »

ಚಿನ್ನ ಖರೀದಿಗೆ ಒಳ್ಳೆ ಅವಕಾಶ; ಆಗಸ್ಟ್ 7ರಂದು ಭಾರೀ ಇಳಿಕೆಯಾಗಿದೆ ಬೆಲೆ

ನವದೆಹಲಿ, ಆಗಸ್ಟ್‌ 07: ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್‌ ತಿಂಗಳ ಮೊದಲ ವಾರವಿಡೀ ಚಿನ್ನದ ವಹಿವಾಟು ನಿರಂತರ ಕುಸಿತ ಕಂಡಿದ್ದು, ಆಗಸ್ಟ್‌ 7ರ ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಬ್ಬದ ಸಮಯ ಹತ್ತಿರ ಬರುತ್ತಿದ್ದು, ಚಿನ್ನ ಖರೀದಿಸಲು ಗ್ರಾಹಕರಿಗೆ ಇದು ಉತ್ತಮ ಅವಕಾಶವೂ ಆಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆ ಕೂಡ ಸತತ ಇಳಿಕೆಯಾಗಿದೆ. ಶನಿವಾರದ ಈ …

Read More »