Breaking News
Home / 2021 / ಜುಲೈ / 24 (page 2)

Daily Archives: ಜುಲೈ 24, 2021

ನಮ್ಮ ಸಮುದಾಯದಲ್ಲೂ ಮೂರು ಹುಲಿಗಳಿವೆ-ಜಯಮೃತ್ಯುಂಜಯ ಶ್ರೀ

ಬೆಂಗಳೂರು: ನಾವು ಯಡಿಯೂರಪ್ಪ ಇಳಿಸೋಕೆ ಪ್ರಯತ್ನ ಮಾಡ್ತಿಲ್ಲ. ನಮ್ಮ ಸಮುದಾಯದಲ್ಲೂ ಮೂರು ಹುಲಿಗಳಿವೆ. ಆ . ಈ ಮೆಸೇಜ್ ರಾಷ್ಟ್ರೀಯ ನಾಯಕರಿಗೆ ತಲುಪಬೇಕು ಎಂದು ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀಗಳು ರಾಜ್ಯ ರಾಜಕರಣದ ಬಗ್ಗೆ ಮಾತನಾಡಿದ್ದಾರೆ. ಟಿವಿ5 ಜೊತೆ ಮಾತನಾಡಿದ ಅವರು, ನಾವು ಯಡಿಯೂರಪ್ಪನವರ ವಿರೋಧಿಗಳಲ್ಲ. ಅವರು ಇಲ್ಲಿಯವರೆಗೆ ಎಲ್ಲವನ್ನೂ ಆಳಿದ್ದಾರೆ. ಹಾಗಾಗಿ ನಮ್ಮವರಿಗೆ ಕೊಡಿ ಎನ್ನುವುದಷ್ಟೇ ನಮ್ಮ ವಾದ. ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕು. ಯಾರು ಸಚ್ಛಾರಿತ್ರವಂತರಿದ್ದಾರೆ …

Read More »

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ತುಮಕೂರು: ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಇನ್ನೊಬ್ಬ ಭಷ್ಟ ಮುಖ್ಯಮಂತ್ರಿ ಬರಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ತುಮಕೂರಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾಗಿ ಇನ್ನೊಬ್ಬ ಭ್ರಷ್ಟ ಸಿಎಂ ಬರಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ನಡುವೆಯೂ ಅಧಿಕಾರಕ್ಕಾಗಿ ಬಿಜೆಪಿ ಮುಖಂಡರು ಕಿತ್ತಾಡುತ್ತಿದ್ದಾರೆ. ಅವರು ನೆರೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಅಧಿಕಾರ …

Read More »

ಪ್ರವಾಹ ಭೀತಿಗೆ  ಗದಗದ ಮಲಪ್ರಭಾ ನದಿ ತೀರ ಪ್ರದೇಶದಲ್ಲಿರುವ  ಜನರು ಊರು ತೊರೆಯುತ್ತಿದ್ದಾರೆ.

ಗದಗ: ಪ್ರವಾಹ ಭೀತಿಗೆ  ಗದಗದ ಮಲಪ್ರಭಾ ನದಿ ತೀರ ಪ್ರದೇಶದಲ್ಲಿರುವ  ಜನರು ಊರು ತೊರೆಯುತ್ತಿದ್ದಾರೆ. ನವಿಲು ತೀರ್ಥ(ರೇಣುಕಾ) ಜಲಾಶಯದಿಂದ ಮಲಪ್ರಭಾ ನದಿಗೆ ನೀರು ರಿಲೀಸ್ ಹಿನ್ನಲೆ ಜಿಲ್ಲೆಯ ನದಿ ಪಾತ್ರ ಗ್ರಾಮಗಳಿಗೆ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜಿಲ್ಲಾಡಳಿತದಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯ ಡಂಗೂರ ಸಾರಲಾಯಿತು. ಗಂಟೆ ಗಂಟೆಗೂ …

Read More »

ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿ; ಹೊಸದಾಗಿ ಕಟ್ಟಿಕೊಂಡಿದ್ದ ಮನೆಗಳು ಸಂಪೂರ್ಣ ಜಲಾವೃತ

ಬೆಳಗಾವಿ: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದ ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಗ್ರಾಮ ನದಿ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಚಿಕ್ಕಾಲಗುಡ್ಡ ಗ್ರಾಮದಲ್ಲಿ ಹೊಸದಾಗಿ ಕಟ್ಟಿಕೊಂಡಿದ್ದ ಮನೆಗಳು ಸಂಪೂರ್ಣ ಜಲಾವೃತವಾಗಿವೆ. 2019ರಲ್ಲಿ ಬಂದ ಪ್ರವಾಹದಲ್ಲಿ ಗ್ರಾಮಸ್ಥರು ಮನೆ ಕಳೆದುಕೊಂಡಿದ್ದರು. ಹೊಸದಾಗಿ ಕಟ್ಟಿಸಿಕೊಂಡಿದ್ದ ಸುಮಾರು 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಗ್ರಾಮಸ್ಥರಿಗೆ ಮನೆಗಳನ್ನು ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಇನ್ನು ಚಿಕ್ಕಮಗಳೂರಿನಲ್ಲೂ ಮಳೆ ಮುಂದುವರಿದಿದೆ. …

Read More »

ಜೈ ಭೀಮ್​’ ಎನ್ನುತ್ತ ಕರ್ನಾಟಕದಲ್ಲೂ ಸದ್ದು ಮಾಡಲು ಸಜ್ಜಾದ ತಮಿಳು ಸ್ಟಾರ್​ ನಟ ಸೂರ್ಯ

ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ (Suriya) ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಮನಸೆಳೆಯುವ ಸಿನಿಮಾಗಳ ಮೂಲಕ ಅವರು ದೇಶಾದ್ಯಂತ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ‘ಸೂರರೈ ಪೋಟ್ರು’ (Soorarai Pottru) ಸಿನಿಮಾ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಹೆಚ್ಚು ಹತ್ತಿರ ಆಗಿದ್ದರು. ಈಗ ‘ಜೈ ಭೀಮ್​’ (Jai Bheem) ಎನ್ನುತ್ತ ಮತ್ತೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಏನಿದು ‘ಜೈ ಭೀಮ್’​? ಅವರ ಹೊಸ ಸಿನಿಮಾದ ಶೀರ್ಷಿಕೆ. ಹೌದು, ಸೂರ್ಯ …

Read More »

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಖಚಿತ; ರಾಜಕೀಯ ಉತ್ತರಾಧಿಕಾರಿ ಯಾರು ಎಂಬುದಷ್ಟೇ ಪ್ರಶ್ನೆ, ಚರ್ಚೆ!

ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತವಾಗಿದೆ. ಆದರೆ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಕುಟುಂಬದವರಿಗೆ ಮತ್ತೆ ಸಿಎಂ ಹುದ್ದೆ ಸಿಗಲ್ಲ. ಆದರೆ, ಯಡಿಯೂರಪ್ಪ ರಾಜಕೀಯ ಉತ್ತರಾಧಿಕಾರಿಗೆ ಯಾವ ಸ್ಥಾನಮಾನ ನೀಡಲಾಗುತ್ತೆ ಎಂಬುದು ಇನ್ನೂ ಸ್ಪಸ್ಪೆನ್ಸ್. ರಾಘವೇಂದ್ರಗೆ ಹೋಲಿಸಿದರೆ, ವಿಜಯೇಂದ್ರಗೆ ಹೆಚ್ಚಿನ ನಾಯಕತ್ವ ಗುಣ ಕರ್ನಾಟಕದ ಯಡಿಯೂರಪ್ಪ ಸಿಎಂ ಕುರ್ಚಿಯಲ್ಲಿ ಈಗ …

Read More »

ಮೊಟ್ಟೆ ಡೀಲ್ ಅಪೌಷ್ಠಿಕ ಮಕ್ಕಳ ಯೋಜನೆ ಅಡಿಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್​ ಪಡೆಯಲು ಮುಂದಾಗಿದ್ದ ಶಶಿಕಲಾ ಜೊಲ್ಲೆ!

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಮೊಟ್ಟೆ ಡೀಲ್​​ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವರದಿ ಕೇಳಿದ್ದಾರೆ. ಬಡವರ, ಅಪೌಷ್ಠಿಕ ಮಕ್ಕಳ ಯೋಜನೆ ಅಡಿಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್​ ಪಡೆಯಲು ಮುಂದಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ಮುಖವಾಡವನ್ನ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿತ್ತು.  ವರದಿ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್​ ಸಿಎಂ …

Read More »

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ. ಬೆಳಗಾವಿ ಪರಿಸ್ಥಿತಿ ಹೇಗಿದೆ..?

ಬೆಳಗಾವಿ: ಜಿಲ್ಲೆಯಲ್ಲಿ ಪ್ರಮುಖ ನದಿ ಹಳ್ಳಕೊಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆ ಒಟ್ಟು 5 ತಾಲೂಕುಗಳ 51 ಗ್ರಾಮಗಳು ಜಲಾವೃತವಾಗಿವೆ.. ಮನೆ ಕಳೆದುಕೊಂಡು ನಿರಾಶ್ರಿತರಾದವರಿಗಾಗಿ 26 ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದ್ದು 2,000 ಜನರಿಗೆ ಆಶ್ರಯ ನೀಡಲಾಗಿದೆ. 5,065ಜನರು, 1,011 ಜಾನುವಾರುಗಳ ರಕ್ಷಣೆ ಮಾಡಲಾಗಿದೆ..     ಬೆಳಗಾವಿ ಪರಿಸ್ಥಿತಿ ಹೇಗಿದೆ..? – ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ರಸ್ತೆ ಸೇರಿ 47 ಕಡೆ ರಸ್ತೆ ಸಂಚಾರ ಸ್ಥಗಿತ – 36 ಸೇತುವೆಗಳು ಮುಳುಗಡೆ …

Read More »

ಗೋಕಾಕ ಫಾಲ್ಸ್‌ ವೀಕ್ಷಣೆಗೆ ಜನಸಾಗರ

ಗೋಕಾಕ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಘಟಪ್ರಭೆ ತುಂಬಿ ಹರಿಯುತ್ತಿದ್ದು, ಗೋಕಾಕ ಜಲಪಾತ ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಘಟಪ್ರಭಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಘಟಪ್ರಭೆ ಧುಮ್ಮಿಕ್ಕಿ ಹರಿಯುತ್ತಿದ್ದು, ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ರವಿವಾರ ಹಾಗೂ ಶನಿವಾರ ಗೋಕಾಕ ಜಲಪಾತ ಹಾಗೂ ಜಿಲ್ಲೆಯ ಹಲವು ಪ್ರವಾಸಿ ತಾಣಗಳ ವೀಕ್ಷಣೆಗೆ ಜಿಲ್ಲಾಡಳಿತ ಬ್ರೇಕ್‌ ಹಾಕಿದ್ದು, ಇನ್ನುಳಿದ ದಿನಗಳಲ್ಲಿ ಹೆಚ್ಚಿನ …

Read More »

ಉಕ್ಕಿ ಹರಿಯುತ್ತಿರುವ ಘಟಪ್ರಭೆ : ಮತ್ತೇ ಪ್ರವಾಹ ಸಂಕಟ ಪ್ರಾರಂಭ

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಹಾಗೂ ಹಿಡಕಲ್ ಜಲಾಶಯದಿಂದಲೂ ಘಟಪ್ರಭಾ ನದಿಗೆ ನೀರು ಬಿಟ್ಟಿರುವ ಕಾರಣ ಘಟಪ್ರಭಾ ನದಿಯು ಉಕ್ಕಿಹರಿಯುತ್ತಿರುವ ಕಾರಣ ಶುಕ್ರವಾರ ಸಮೀಪದ ಢವಳೇಶ್ವರ, ನಂದಗಾಂವ, ಮಿರ್ಜಿ ಸೇರಿ ಮೂರು ಸೇತುವೆಗಳು ಜಲಾವೃತವಾಗಿವೆ. ಶುಕ್ರವಾರ ಸಂಜೆಯ ಮಾಹಿತಿಯಂತೆ ಘಟಪ್ರಭಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಶುಕ್ರವಾರ ಸಂಜೆ ಗೋಕಾಕ-ಲೋಳಸೂರ ಸೇತುವೆಯು …

Read More »