Breaking News
Home / ಜಿಲ್ಲೆ / ಬೆಳಗಾವಿ / ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ. ಬೆಳಗಾವಿ ಪರಿಸ್ಥಿತಿ ಹೇಗಿದೆ..?

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ. ಬೆಳಗಾವಿ ಪರಿಸ್ಥಿತಿ ಹೇಗಿದೆ..?

Spread the love

ಬೆಳಗಾವಿ: ಜಿಲ್ಲೆಯಲ್ಲಿ ಪ್ರಮುಖ ನದಿ ಹಳ್ಳಕೊಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆ ಒಟ್ಟು 5 ತಾಲೂಕುಗಳ 51 ಗ್ರಾಮಗಳು ಜಲಾವೃತವಾಗಿವೆ.. ಮನೆ ಕಳೆದುಕೊಂಡು ನಿರಾಶ್ರಿತರಾದವರಿಗಾಗಿ 26 ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದ್ದು 2,000 ಜನರಿಗೆ ಆಶ್ರಯ ನೀಡಲಾಗಿದೆ. 5,065ಜನರು, 1,011 ಜಾನುವಾರುಗಳ ರಕ್ಷಣೆ ಮಾಡಲಾಗಿದೆ..

 

 

ಬೆಳಗಾವಿ ಪರಿಸ್ಥಿತಿ ಹೇಗಿದೆ..?
– ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ರಸ್ತೆ ಸೇರಿ 47 ಕಡೆ ರಸ್ತೆ ಸಂಚಾರ ಸ್ಥಗಿತ
– 36 ಸೇತುವೆಗಳು ಮುಳುಗಡೆ
-ಕಳೆದ 24 ಗಂಟೆಯಲ್ಲಿ 66 ಮಿ.ಮೀ‌.ಮಳೆ
– 223 ಮನೆಗಳಿಗೆ ಭಾಗಶಃ ಹಾನಿ
-ಖಾನಾಪೂರ ತಾಲೂಕಿನಲ್ಲಿ ವಿದ್ಯುತ್ ತಗುಲಿ ಓರ್ವ ಸಾವು
-ಜೋರ್ಲಾ ಬಳಿ ಗುಡ್ಡ ಕುಸಿದು ಗೋವಾ- ಕರ್ನಾಟಕ ನಡುವಿನ ರಸ್ತೆ ಬಂದ್
-ರಾಷ್ಟ್ರೀಯ ಹೆದ್ದಾರಿ-4ರ ಮೇಲೆ ನದಿ ಹರಿದು ಮಹಾರಾಷ್ಟ್ರ- ಕರ್ನಾಟಕ ನಡುವಿನ ರಸ್ತೆ ಬಂದ್
-ಘಟಪ್ರಭಾ ನದಿಗೆ ಒಟ್ಟು 1 ಲಕ್ಷ 10 ಸಾವಿರ ಕ್ಯೂಸೆಕ್ ಒಳಹರಿವು
-ಗೋಕಾಕ್ ತಾಲೂಕಿನ ಕೊಣ್ಣೂರು ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ನೀರು
-ಕೊಣ್ಣೂರು ಪಟ್ಟಣದ ಮಾರುಕಟ್ಟೆ ಪ್ರದೇಶ ಸಂಪೂರ್ಣ ಜಲಾವೃತ
-ಗೋಕಾಕ, ಮೂಡಲಗಿ ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ
-ಗೋಕಾಕ್ ನಗರದ ಲೋಳಸೂರು ಸೇತುವೆ ಜಲಾವೃತ
-ಗೋಕಾಕ್‌ ನಗರದ ಮಟನ್ ಮಾರ್ಕೆಟ್, ಭೋಜಗರ್ ಗಲ್ಲಿ, ಉಪ್ಪಾರ ಗಲ್ಲಿಯಲ್ಲಿ ಮನೆಗಳು ಜಲಾವೃತ
-ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವೇದಗಂಗಾ ನದಿ
-ಚಿಕ್ಕೋಡಿ ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ನುಗಿದ ನೀರು
-ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ 53,357 ಕ್ಯೂಸೆಕ್ ನೀರು ಬಿಡುಗಡೆ
-ರಾಜಾಪುರ ಜಲಾಶಯದಿಂದ 2,09,250 ಕ್ಯೂಸೆಕ್ ನೀರು ಬಿಡುಗಡೆ. -ಚಿಕ್ಕೋಡಿ, ಅಥಣಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಭೀತಿ

 

 

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆ ಮುಂದುವರೆದಿದ್ದು ಊರುಬಗೆಯ ಹೊಸಳ್ಳಿರಸ್ತೆ ಜಲಾವೃತವಾಗಿದೆ. ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಆಪಾಯ ಮಟ್ಟದಲ್ಲಿ ನದಿಗಳು ಹರಿಯುತ್ತಿವೆ.

ಬಾಗಲಕೋಟೆ: ಪ್ರವಾಹ ಭೀತಿ ಹಿನ್ನೆಲೆ ಇಂದು ಬಾಗಲಕೋಟೆ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ಮಧ್ಯಾಹ್ನ 12 ಗಂಟೆಗೆ ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯ ವೀಕ್ಷಣೆ ಮಾಡಲಿದ್ದಾರೆ. 3 ಗಂಟೆಗೆ ಬಾಗಲಕೋಟೆಯಲ್ಲಿ ಪ್ರವಾಹ‌ ನಿರ್ವಹಣೆ ಬಗ್ಗೆ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ನಂತರ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲಿದ್ದಾರೆ.

 

 

ಜಿಲ್ಲೆಯಲ್ಲಿ ಅಪಾಯ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದ್ದು ಮಿರ್ಜಿ ಘಟಪ್ರಭಾ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಮೇಲೆ ಆರು ಅಡಿಯಷ್ಟು ನೀರು ಹರಿಯುತ್ತಿದ್ದು ಮಿರ್ಜಿ, ಒಂಟಗೋಡಿ, ಮಹಾಲಿಂಗಪುರ ರಸ್ತೆ ಸಂಪರ್ಕ ‌ಕಡಿತವಾಗಿದೆ. ನದಿ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಜಲಾವೃತವಾಗಿದೆ.. ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಡವಳೇಶ್ವರ ನಂದಗಾಂವ ಸೇತುವೆಗಳು, ನದಿ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಜಲಾವೃತವಾಗಿದೆ. ಯಾವುದೇ ಕ್ಷಣದಲ್ಲಿ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನ ,ದುರ್ಗಾದೇವಿ ದೇವಸ್ಥಾನ ಜಲಾವೃತವಾಗುವ ಸಾಧ್ಯತೆ ಇದೆ.

 

 

ಕಲಬುರಗಿ: ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು ಧಾರಾಕಾರ ಮಳೆಗೆ ಕಲಬುರಗಿ ಜನ ಹೈರಾಣಾಗಿದ್ದಾರೆ. ಕಾಳಗಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಹತ್ತಾರು ಮನೆಗಳು ಜಲಾವೃತವಾಗಿದ್ದು ದಿನಸಿ, ಅಗತ್ಯ ವಸ್ತುಗಳು ನೀರು ಪಾಲಾಗಿವೆ. ನೀರು ಹೊಕ್ಕುತ್ತಿದ್ದಂತೆ ಭಯದಿಂದ ನಿವಾಸಿಗಳು ಮನೆಯಿಂದ ಹೊರ ಓಡಿಬಂದಿದ್ದಾರೆ. ಗ್ರಾಮಸ್ಥರು.. ವಸ್ತುಗಳು ಹಾಳಾಗಿ ಬದುಕು ಬೀದಿಗೆ ಬಿದ್ದಿದೆ, ಪರಿಹಾರ ಕೊಡಿ ಅಂತಿದ್ದಾರೆ.

 

 

ಕಾರವಾರ: ಗಂಗಾವಳಿ ನದಿ ಪ್ರವಾಹದಿಂದ ಹೆದ್ದಾರಿ 63 ಬಂದ್ ಆದ ಹಿನ್ನಲೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ. ಯಲ್ಲಾಪುರ ತಾಲೂಕಿನ ಅರಬೈಲು ಗ್ರಾಮದ ಬಳಿ ಗುಡ್ಡ ಕುಸಿತ ಹಿನ್ನಲೆ ಅಂಕೋಲಾ ಹಾಗೂ ಹುಬ್ಬಳ್ಳಿ ನಡುವಿನ ಹೆದ್ದಾರಿಯನ್ನ ಜಿಲ್ಲಾಡಳಿತ ಬಂದ್ ಮಾಡಿದೆ.

 

 

ಯಾದಗಿರಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಮೂರು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಕೋಳೂರು ಬ್ರಿಡ್ಜ್ ಮುಳುಗಡೆ ಹಂತಕ್ಕೆ ಬಂದು ನಿಂತಿದೆ. ಈ ಹಿನ್ನಲೆ ರೈತರು ಕೃಷಿ ಉಪಕರಣಗಳನ್ನ ಸ್ಥಳಾಂತರ ಮಾಡುತ್ತಿದ್ದಾರೆ. ಬ್ರಿಡ್ಜ್ ಮೇಲೆ ನೀರು ಬಂದಲ್ಲಿ ರಾಯಚೂರು ಯಾದಗಿರಿ ಸಂಪರ್ಕ ಬಂದ್ ಆಗಲಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ