Home / 2021 / ಏಪ್ರಿಲ್ (page 34)

Monthly Archives: ಏಪ್ರಿಲ್ 2021

ಕೊರೊನಾ ಭಯ- ಅಪರಿಚಿತ ಮೃತದೇಹ ಮುಟ್ಟಲು ಸ್ಥಳೀಯರು ಹಿಂದೇಟು

ಹಾವೇರಿ: ಕೊರೊನಾ ಎರಡನೇ ಅಲೆಯ ಭಯ ಹೆಚ್ಚಾಗುತ್ತಿರುವ ಹಿನ್ನೆಲೆ, 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಮುಟ್ಟಲು ಸ್ಥಳೀಯರು ಹಿಂದೇಟು ಹಾಕಿದ ಘಟನೆ ನಗರದ ಜಾನುವಾರು ಮಾರುಕಟ್ಟೆಯಲ್ಲಿ ನಡೆದಿದೆ. ಮಾರುಕಟ್ಟೆಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಜನ ಹಾಗೂ ವಾಹನಗಳ ಮಾಲೀಕರು ಹಿಂದೇಟು ಹಾಕಿದರು. ಬಳಿಕ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ನೆರವಿನಿಂದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದರು. ಪೊಲೀಸರು ಆಟೋ ಚಾಲಕನ ಮನವೊಲಿಸಿ ಮೃತದೇಹವನ್ನು ಶವಾಗಾರಕ್ಕೆ …

Read More »

ಎಣ್ಣೆ ಅಂಗಡಿ ಬೇಕು, ಬೇಡ- ಪುರುಷರು, ಮಹಿಳೆಯರಿಂದ ಹೋರಾಟ

ಹಾಸನ: ಕೊರೊನಾ ಎರಡನೇ ಅಲೆಯಿಂದ ಜನ ಆಘಾತಕ್ಕೊಳಗಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಜಿಲ್ಲೆಯಲ್ಲಿ ಸಹ ಪ್ರತಿ ದಿನ ಮುನ್ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಎಣ್ಣೆ ಅಂಗಡಿಗಾಗಿ ಪುರುಷರು ಹೊರಾಟಕ್ಕಿಳಿದಿದ್ದು, ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ. ಎಣ್ಣೆ ಬೇಕು ಎಂಬ ಬ್ಯಾನರ್ ಹಿಡಿದು ಗಾಡೇನಹಳ್ಳಿ, ಹಲಸಿನಹಳ್ಳಿ ಸುತ್ತಮುತ್ತಲ ಪುರುಷರು ಡಿಸಿ ಕಚೇರಿ ಎದುರು ಹೋರಾಟಕ್ಕೆ ಕುಳಿತಿದ್ದಾರೆ. ಒಂದು ದಿನದ ಹಿಂದಷ್ಟೇ ಈ ಭಾಗದ ಒಂದಷ್ಟು ಜನ ಮಹಿಳೆಯರು …

Read More »

ಇಂದು/ನಾಳೆಯಿಂದ ರಾಜ್ಯದ ಚಿತ್ರಮಂದಿರಗಳು ಬಂದ್ -ಚಲನಚಿತ್ರ ಪ್ರದರ್ಶಕರ ಸಂಘ

ಬೆಂಗಳೂರು: ಇಂದು ಅಥವಾ ನಾಳೆಯಿಂದ‌ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ ಅಂತಾ ಕರ್ನಾಟಕ ಚಲನಚಿತ್ರ ಪ್ರದರ್ಶಕ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ತಿಳಿಸಿದ್ದಾರೆ. ಸರ್ಕಾರದ ಹೊಸ ನಿಯಮದ ಅದೇಶಕ್ಕೂ ಮೊದಲೇ ಚಿತ್ರಮಂದಿರಗಳು ಬಂದ್ ಮಾಡಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ನಿರ್ಧರಿಸಿದೆ. ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಕೆ.ವಿ ಚಂದ್ರಶೇಖರ್.. ಇಂದು ಅಥವಾ ನಾಳೆಯಿಂದ‌ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ. ಮೇ ಅಂತ್ಯದವರೆಗೂ ಚಿತ್ರಮಂದಿರಗಳನ್ನು ಮುಚ್ಚಲು …

Read More »

ಐಪಿಎಲ್ 2021 : ಲೆಕ್ಕ ಸರಿ ಮಾಡುತ್ತಾ ಯಂಗ್ ಡೆಲ್ಲಿ..?

  ಬೆಂಗಳೂರು : ಐಪಿಎಲ್ ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಕಳೆದ ಬಾರಿಯ ಫೈನಲ್ ನಲ್ಲಿ ಡೆಲ್ಲಿಗೆ ಮುಂಬೈ ಸೋಲುಣಿಸಿತ್ತು. ಇವತ್ತಿನ ಪಂದ್ಯದಲ್ಲಿ ಗೆದ್ದು ಡೆಲ್ಲಿ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ. ಹೆಡ್ ಟು ಹೆಡ್ ಐಪಿಎಲ್ ಇತಿಹಾಸದಲ್ಲಿ 28 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಮುಂಬೈ 16 ಬಾರಿ ಗೆದ್ದಿದ್ದೇ ಡೆಲ್ಲಿ 12 ಬಾರಿ ಜಯ ಸಾಧಿಸಿದೆ. ಕಳೆದ ನಾಲ್ಕು …

Read More »

ಚೆನ್ನೈ ಸೂಪರ್​ ಕಿಂಗ್ಸ್​ಗೆ ರಾಜಸ್ಥಾನ್​​ ಸವಾಲ್​; ಗೆದ್ದವರ ಹೋರಾಟದಲ್ಲಿ ಯಾರಿಗೆ ಗೆಲುವು..?

ದಿನೇ ದಿನೇ ಕಲರ್​​​​​​​​​​​​​​​​​​​​​​​​​​​​​​ಫುಲ್​ ಲೀಗ್​ನ​​ ರೋಚಕತೆ ಹೆಚ್ಚಾಗ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್​​​ ಮ್ಯಾಚ್​​ಗೆ ವಾಖೆಂಡೆ ಸಜ್ಜಾಗಿದ್ದು, ಇಂದಿನ ಕದನದಲ್ಲಿ ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​ ಕಿಂಗ್ಸ್​​ ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ಗೆದ್ದಿರುವ ಉಭಯ ತಂಡಗಳು, ಗೆಲುವಿನ ಓಟ ಮುಂದುವರಿಸುವ ಲೆಕ್ಕಚಾರದಲ್ಲಿವೆ. ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಚೆನ್ನೈ ಪಂಜಾಬ್​​ ಕಿಂಗ್ಸ್​​ ವಿರುದ್ಧ ಗೆದ್ದು ಬೀಗಿದೆ. ಇದೀಗ ರಾಜಸ್ಥಾನ್​​ ರಾಯಲ್ಸ್​​​ ವಿರುದ್ಧವೂ ಅದೇ ಗೆಲುವಿನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಪಂಜಾಬ್​ …

Read More »

ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿಯಾದ ಕಾಜಲ್

ಸ್ಯಾಂಡಲ್ ವುಡ್ ನಟ ವಿಜಯ್ ರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಂತು ವರ್ಸಸ್ ನುರ್ಸತ್ ಸಿನಿಮಾ ಬಳಿಕ ವಿನಯ್ ರಾಜ್ ಕುಮಾರ್ ಮತ್ತೆ ತೆರೆಮೇಲೆ ಬಂದಿಲ್ಲ. ಇದೀಗ ಹೊಸ ಸಿನಿಮಾ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ ಪೆಪೆ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್‌ನಲ್ಲಿ …

Read More »

ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ವಿದ್ಯುತ್‌, ಫ್ಯಾನ್ ಒದಗಿಸಿ: ಹೈಕೋರ್ಟ್‌

ಬೆಂಗಳೂರು: ರಾಜ್ಯದ ಎಲ್ಲಾ 65,911 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್‌ಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. 33,164 ಅಂಗನವಾಡಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, 26,560 ಅಂಗನವಾಡಿಗಳಿಗೆ ಫ್ಯಾನ್‌ಗಳನ್ನು ಪೂರೈಸಲಾಗಿದೆ. 44,225 ಕೇಂದ್ರಗಳಲ್ಲಿ ಶೌಚಾಲಯ ಇದೆ ಎಂದು ಸರ್ಕಾರ ಮೆಮೊ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಅಂಕಿ-ಅಂಶಗಳು ಆಘಾತಕಾರಿ ಸ್ಥಿತಿಯನ್ನು ಚಿತ್ರಿಸುತ್ತವೆ’ ಎಂದು …

Read More »

ರಸ್ತೆಯಲ್ಲಿ ಹೋಗೋ ಕುಡುಕ ಮಾತನಾಡುವ ಹಾಗೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಈಶ್ವರಪ್ಪ

ಶಿವಮೊಗ್ಗ : ವಿರೋಧ ಪಕ್ಷ ಇರೋದೇ ಟೀಕೆ ಮಾಡೋಕೆ ಅವರ ಕೆಲಸಾನೇ ಅದು. ವಿರೋಧ ಪಕ್ಷ ಅಡಳಿತ ಪಕ್ಷ ಒಳ್ಳೆಯ ಕೆಲಸ ಮಾಡಿದೇ ಎಂದು ಅಭಿನಂದಿಸಲು ಸಾಧ್ಯವೇ ‌.?? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. ನಗರದಲ್ಲಿ ಮಾತಾನಾಡಿದ ಅವರು, ವಿರೋಧ ಪಕ್ಷದ ಟೀಕೆಗಳನ್ನುಗುಣಾತ್ಮಕವಾಗಿ ಸ್ವಾಗತಿಸುತ್ತೇವೆ. ಟೀಕೆ ಸರಿ ಇದ್ದರೇ ತಿದ್ದಿಕೊಳ್ಳುತ್ತೇವೆ. ವಿರೋಧ ಪಕ್ಷದವರು ಎಲ್ಲದಕ್ಕೂ ಟೀಕೆ ಮಾಡುವುದೇ ಅವರ ಕೆಲಸ ಅಂಥ ಅಂದುಕೊಂಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಅವರ ಸಲಹೆ- …

Read More »

ಮತಗಳ ಲೆಕ್ಕದ ಜತೆ ಸೋಲು-ಗೆಲುವಿನ ಲೆಕ್ಕಾಚಾರ

ಬೆಳಗಾವಿ: ಕಳೆದ ನಾಲ್ಕು ಚುನಾವಣೆಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಮರಳಿ ತನ್ನ ವಶ ಮಾಡಿಕೊಳ್ಳಲಿದೆಯೇ? ಜಾತಿ ಲೆಕ್ಕಾಚಾರ, ಅನುಭವದ ರಾಜಕಾರಣ ಮತ್ತು ಅನುಕಂಪದ ಅಲೆಯಲ್ಲಿ ಯಾವುದಕ್ಕೆ ಮತದಾರ ಮಣೆ ಹಾಕಿದ್ದಾನೆ? ಅನುಭವ ಮತ್ತು ಅನುಕಂಪದ ನಡುವೆ ಯಾವುದು ಮಂಕಾಗಲಿದೆ? – ಇದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದೂ ವಿಶೇಷವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳ ಜೋರಾಗಿ ನಡೆದಿರುವ ಲೆಕ್ಕಾಚಾರ. ಕೊರೊನಾ ಎರಡನೇ ಅಲೆಯ ಭೀತಿಯ …

Read More »

ರಂಜಾನ್‌ವರೆಗೆ ತೊಂದರೆ ಕೊಡಬೇಡಿ: ಜಮೀರ್ ಅಹ್ಮದ್ ಮನವಿ

ಬೆಂಗಳೂರು, ಏಪ್ರಿಲ್ 19: “ಸರಕಾರದ ಏನು ಮಾರ್ಗಸೂಚಿಯಿದೆಯೋ ಅದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಆದರೆ, ದಯವಿಟ್ಟು ರಂಜಾನ್ ಹಬ್ಬದವರೆಗೆ ನಮಗೆ ತೊಂದರೆ ಕೊಡಬೇಡಿ ಎಂದು ಸಭೆಯಲ್ಲಿ ಮನವಿ ಮಾಡಿದ್ದೇನೆ”ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು. “ಜಾಮಿಯಾ ಮೈದಾನದಲ್ಲಿ ಇಪ್ಪತ್ತು ಸಾವಿರ ಜನ ನಮಾಜ್ ಮಾಡಬಹುದು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬರೀ ಐದು ಸಾವಿರ ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನೈಟ್ ಕರ್ಫ್ಯೂನಿಂದಾಗಿ ರಾತ್ರಿ 10.30ಗೆ ಮಾಡಬೇಕಾಗಿರುವ ನಮಾಜ್ …

Read More »