Breaking News
Home / 2021 / ಏಪ್ರಿಲ್ (page 10)

Monthly Archives: ಏಪ್ರಿಲ್ 2021

ಮೇ ೦೨ ರಂದು ಮುಂಜಾನೆ ೮ ಗಂಟೆಯಿಂದ ಬೆಳಗಾವಿR.P.D. ಮಹಾವಿದ್ಯಾಲಯದಲ್ಲಿ , ಮತ ಎಣಿಕೆ ಕೋವಿಡ್- 19 ನೆಗೆಟಿವ್ ವರದಿ ಕಡ್ಡಾಯ

ಬೆಳಗಾವಿ :  ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ ಚುನಾವಣೆ ಕುರಿತು ಮತ ಎಣಿಕೆ ಕಾರ್ಯ ಮೇ ೦೨ ರಂದು ಮುಂಜಾನೆ ೮ ಗಂಟೆಯಿಂದ ಬೆಳಗಾವಿಯ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್-೧೯ ನೆಗೆಟಿವ್ ವರದಿ ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಎಸ್.  ತಿಳಿಸಿದ್ದಾರೆ. ಮತ ಎಣಿಕೆ ದಿನದಂದು ಅಭ್ಯರ್ಥಿಗಳು/ ಅಧಿಕಾರಿಗಳು/ಸಿಬ್ಬಂದಿಗಳು ಹಾಗೂ ಮತ ಎಣಿಕೆ ಸಿಬ್ಬಂದಿ/ಮತ ಎಣಿಕೆ ಎಜೆಂಟರುಗಳಿಗೆ ಕೋವಿಡ್-೧೯ …

Read More »

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ. ಬಾಲಚಂದ್ರ ಜಾರಕಿಹೊಳಿ

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.   ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ …

Read More »

ಜೆಎಸ್‌ಎಸ್ ಆಸ್ಪತ್ರೆಯಲ್ಲಿ 500 ಹಾಸಿಗೆ ನೀಡಲು ಸುತ್ತೂರು ಶ್ರೀಗಳಲ್ಲಿ ಮನವಿ

ಮೈಸೂರು, ಏಪ್ರಿಲ್ 27: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 500 ಹಾಸಿಗೆಯನ್ನು ಮೈಸೂರು ಜಿಲ್ಲಾಡಳಿತಕ್ಕೆ ನೀಡುವಂತೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಮಂಗಳವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗೆ ಮನವಿ ಮಾಡಿದರು. ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಆಗಮಿಸಿ, ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ ಚಿಕಿತ್ಸೆಗೆ ನಿಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿರುವ …

Read More »

ಮನೆಯಲ್ಲಿ ದಿನಸಿ ಸಂಗ್ರಹಿಸಿದ ಜನರು

ರಾಯಚೂರು: ಲಾಕ್‌ಡೌನ್‌ ದಿನಗಳಲ್ಲಿ ಅಗತ್ಯ ದಿನಸಿ ಸಿಗುತ್ತವೆಯೋ ಇಲ್ಲವೋ ಅಥವಾ ದುಬಾರಿ ಆಗಬಹುದು ಎನ್ನುವ ಆತಂಕದೊಂದಿಗೆ ಜನರು ಮುಗಿಬಿದ್ದು ಸೋಮವಾರ ದಿನಸಿ ಖರೀದಿಸುತ್ತಿರುವುದು ಕಂಡುಬಂತು. ಎಪಿಎಂಸಿ ಆವರಣ, ಚಂದ್ರಮೌಳೇಶ್ವರ ವೃತ್ತ ಹಾಗೂ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ವೃತ್ತ ಮಾರ್ಗದಲ್ಲಿರುವ ಮಳಿಗೆಗಳಲ್ಲಿ ಖರೀದಿ ಭಾರಾಟೆ ಜೋರಾಗಿತ್ತು. ಚೀಲಗಳನ್ನು ಹಿಡಿದು ಸರದಿ ನಿಂತಿದ್ದರು. ಸಾಮಾನ್ಯ ದಿಗಳಲ್ಲಿ ಒಂದು ಚೀಲದಲ್ಲಿ ಸರಕು ಖರೀದಿಸುತ್ತಿದ್ದವರು ಈಗ ಬೈಕ್‌, ಆಟೋ ಹಾಗೂ ಕಾರುಗಳಲ್ಲಿ ದಿನಸಿಗಳನ್ನು ತುಂಬಿಸಿಕೊಂಡು ಒಯ್ಯುತ್ತಿದ್ದಾರೆ. …

Read More »

ʼಅಶೋಕ ಹೋಟೆಲ್ʼನ್ನ ಕೋವಿಡ್ ಸೌಲಭ್ಯವಾಗಿ ಪರಿವರ್ತಿಸುವಂತೆ ಮನವಿ ಮಾಡಿಲ್ಲ: ದೆಹಲಿ ಹೈಕೋರ್ಟ್ ಸ್ಪಷ್ಟನೆ

ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಇತರ ನ್ಯಾಯಾಂಗ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಆದ್ಯತೆಯ ಆಧಾರದ ಮೇಲೆ ತನ್ನ ಆವರಣವನ್ನ ಕೋವಿಡ್-19 ಸೌಲಭ್ಯವಾಗಿ ಪರಿವರ್ತಿಸುವಂತೆ ಅಶೋಕ ಹೋಟೇಲ್‌ʼನ್ನ ಕೇಳುವಂತೆ ದೆಹಲಿ ಸರ್ಕಾರವನ್ನ ಕೋರಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಈ ಮನವಿಯನ್ನ ಮಾಡಿದೆ ಎನ್ನುವ ತಪ್ಪು ಅಭಿಪ್ರಾಯವನ್ನ ಪ್ರಚಾರ ಮಾಡಲಾಗ್ತಿದೆ. ‘ಜನರು ಹಾಸಿಗೆ ಪಡೆಯಲು ಸಾಧ್ಯವಾಗದಿದ್ದಾಗ, ನಾವು ಪಂಚತಾರಾ ಹೋಟೆಲ್ʼನಲ್ಲಿ 100 …

Read More »

ರಾಜ್ಯದಲ್ಲಿ ಕೊರೋನಾ ತಡೆಗೆ ಕಠಿಣ ನಿಯಮವಿದ್ರೂ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಷರತ್ತು ವಿಧಿಸಿ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಅಬಕಾರಿ ಇಲಾಖೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಮದ್ಯ ಮಾರಾಟ ಮಾಡಬಹುದಾಗಿದೆ. ಸೀಲ್ಡ್ ಬಾಟಲ್ ಗಳಲ್ಲಿ ಪಾರ್ಸೆಲ್ ನೀಡಬೇಕು. ಎಂಆರ್ಪಿ ದರದಲ್ಲಿ ಮದ್ಯ ಮಾರಾಟ ಮಾಡಬೇಕು. ಗರಿಷ್ಠ ಎರಡು ಲೀಟರ್ ಬಿಯರ್ ಮಾತ್ರ ಖರೀದಿಸಬೇಕು. ಮದ್ಯ ಖರೀದಿ ವೇಳೆ ನೂಕಾಟ ಮಾಡುವಂತಿಲ್ಲ. ಮದ್ಯದಂಗಡಿಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಸೂಪರ್ ಮಾರ್ಕೇಟ್ …

Read More »

ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ

ಬೆಂಗಳೂರು, ಏಪ್ರಿಲ್ 27; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರಲಿದೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಸೇವೆಗಳ ಸರಕು ಸಾಗಣೆಗೆ ಮಾತ್ರ ವಾಹನ ಸಂಚಾರ ಇರುತ್ತದೆ. ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ.   ಬೆಂಗಳೂರು ನಗರದಿಂದ ಇತರ ಪ್ರದೇಶಗಳಿಗೆ ತೆರಳುವ …

Read More »

ಹುಟ್ಟೂರಿನಲ್ಲಿ ನೆರವೇರಿದ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ

ತುಮಕೂರು: ಕೋವಿಡ್‌ನಿಂದ ಮೃತಪಟ್ಟ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ ಕುಣಿಗಲ್ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು. ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ರಾಮು ಪಾರ್ಥೀವ ಶರೀರಕ್ಕೆ ಮಾಲಾಶ್ರೀ ಅಂತಿಮ ನಮನ ಸಲ್ಲಿಸಿದರು. ಪುತ್ರ ಆರ್ಯನ್ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪುತ್ರಿ ಅನನ್ಯ ಇದ್ದರು. ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ …

Read More »

ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ!

ಅಥಣಿ: ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಹಾಗೂ ನಿರ್ಮಾಣಗೊಂಡ ನೂತನ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವಾಗ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ಚಿಕ್ಕೋಡಿಯ ಹೆಸ್ಕಾಂ ಜಾಗೃತದಳ ಪೊಲೀಸ್‌ ಠಾಣೆಗೆ ದೂರು ಹೋಗಿದ್ದವು. ಆ ದೂರುಗಳನ್ನಾಧರಿಸಿ ಹೆಸ್ಕಾಂ ಜಾಗೃತದಳ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬಂದಿದ್ದರಿಂದ ಕೆಲವು ಅಂಶಗಳ ಮಾಹಿತಿ ಕೋರಿ ನೋಟಿಸ್‌ ನೀಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನೇರವಾಗಿ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ …

Read More »

14 ದಿನ ಲಾಕ್ ಡೌನ್ ಹಿನ್ನೆಲೆ..ಗೋಕಾಕನಲ್ಲಿ‌ ಮಧ್ಯಾಹ್ನವೇ ಅಂಗಡಿ-ಮುಂಗಟ್ಟು ಬಂದ್

ಸರಕಾರದ ಕೊರಾನಾ ಹೊಸ ಮಾರ್ಗಸೂಚಿ ಬೆನ್ನಲ್ಲೆ ಗೋಕಾಕದಲ್ಲಿ ಅಂಗಡಿ ಮುಗ್ಗಟುಗಳನ್ನು ಬಂದ್ ಮಾಡಿಸಲು ಮುಂದಾದ ಪೋಲಿಸ್ ಮತ್ತು ನಗರಸಭೆ ಅಧಿಕಾರಿಗಳು. ಹೌದು ಕೊರಾನಾ2ಅಲೆಯು ತನ್ನ ಅಟ್ಟಹಾಸವನ್ನು ದಿನದಿನಕ್ಕೂ ಸಾವು ಪಡೆಯಯತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಾರ್ವಜನಿಕರು ಕೊರಾನಾ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದು ಇನ್ನೊಂದು ಕಡೆ, ಹೇಗಾದರೂ ಮಾಡಿ ಕೊರಾನಾದಿಂದ ಸರಕಾರ ಸಾರ್ವಜನಿಕರನ್ನು ರಕ್ಷಿಸಲು ಹೊಸ ಮಾರ್ಗಸೂಚಿ ಸಂಜೆಯಿಂದ ಅನ್ವಯವಾಗಲೆಂದು ಬಿಡುಗಡೆ ಮಾಡಿತ್ತು, ಆದರೆ ಗೋಕಾಕ ನಗರದಲ್ಲಿ ಇವತ್ತು ಸಂಜೆ …

Read More »