Breaking News
Home / 2021 / ಮಾರ್ಚ್ / 14 (page 2)

Daily Archives: ಮಾರ್ಚ್ 14, 2021

ಸಾಹುಕಾರ್ ಸಿಡಿ ಕೇಸ್ – ಯುವತಿಗೆ ನೋಟಿಸ್ ಜಾರಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿಡಿ ಪ್ರಕರಣದ ಬಗ್ಗೆ ರಮೇಶ್ ಜಾರಕಿಹೊಳಿ ನಿನ್ನೆ ದೂರು ದಾಖಲಿಸಿದ ಬೆನ್ನಲ್ಲೇ ಪ್ರತ್ಯಕ್ಷವಾದ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಳು. ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ರಕ್ಷಣೆ ನೀಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಳು. …

Read More »

ನನ್ನ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿ ನಕಲಿ ಸಿಡಿ ಬಿತ್ತರಗೊಳ್ಳುವಂತೆ ನೋಡಿಕೊಂಡು ನನ್ನ ರಾಜಕೀಯ ಜೀವನ ಹಾಳು ಮಾಡಿದ್ದಾರೆ : ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾ.14- ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣದ ಸಾಚಾತನ ಪತ್ತೆಹಚ್ಚುವ ಸವಾಲು ಎಸ್‍ಐಟಿಗೆ ಎದುರಾಗಿದೆ. ನನ್ನ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿ ನಕಲಿ ಸಿಡಿ ಬಿತ್ತರಗೊಳ್ಳುವಂತೆ ನೋಡಿಕೊಂಡು ನನ್ನ ರಾಜಕೀಯ ಜೀವನ ಹಾಳು ಮಾಡಿದ್ದಾರೆ ಎನ್ನುವುದು ರಮೇಶ್ ಜಾರಕಿಹೊಳಿ ಅವರ ಆರೋಪವಾಗಿದೆ. ಇದರ ಬೆನ್ನಲ್ಲೇ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ತುಣುಕಿನಲ್ಲಿ ಆ ರೀತಿಯ ಸಿಡಿ ಯಾರು …

Read More »

ನನಗೆ SIT ಮೇಲೆ ನಂಬಿಕೆ ಇಲ್ಲ , ಅಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ..!

ವಿಜಯಪುರ : ನನಗೆ SIT ಮೇಲೆ ನಂಬಿಕೆ ಇಲ್ಲ ಎಷ್ಟು ಪಾರದರ್ಶಕತೆಯಿಂದ ನಡಿಯುತ್ತೋ ನನಗೆ ಸಂಶಯವಿದೆ ಎಂದು ಬಿಜೆಪಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ರಾಜ್ಯಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ನನಗೆ SIT ಮೇಲೆ ಸಂಶಯವಿದೆ ಯಾಕಂದ್ರೆ ಅಲ್ಲಿರುವಂತಹ ಒಬ್ಬ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ಈ ಹಿಂದೆ ಡ್ರಗ್ಸ್ …

Read More »

ಕೆಪಿಸಿಸಿ ಅಧ್ಯಕ್ಷರಿಗೆ ಸತೀಶ್ ಜಾರಕಿಹೊಳಿ ತಿರುಗೇಟು

ಬೆಂಗಳೂರು,ಮಾ.14- ಯಾರು ಯಾರನ್ನು ಸಿಲಿಕಿಸಲು ಆಗುವುದಿಲ್ಲ. ಪ್ರಕರಣ ಸಂಬಂಧ ತನಿಖೆಯಾಗಬೇಕು. ಪೊಲೀಸರೇ ಅಂತಿಮ ತೀರ್ಮಾನ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿ.ಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗುತ್ತಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಬೆಳಗಾವಿ ತಾಲ್ಲೂಕಿನ ಮಚ್ಚೆಗ್ರಾಮದಲ್ಲಿ ಸುದ್ದಿಗಾರರೊಂದಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಯಾರು ಯಾರನ್ನೂ ಸಿಲಿಕಿಸಲು ಆಗುವುದಿಲ್ಲ. ಪೊಲೀಸ್ ತನಿಖೆಯಾಗಬೇಕು. ಸತ್ಯಾಂಶ ಹೊರಬರಬೇಕು. ನಾನು ಪದೇ ಪದೇ ಹೇಳೋದು ಅದನ್ನೇ ಎಂದರು. ಸಿ.ಡಿಯಲ್ಲಿದ್ದ ಯುವತಿ ವಿಡಿಯೋ ಹೇಳಿಕೆ …

Read More »

ಸಿಡಿ ಪ್ರಕರಣದಲ್ಲಿ ಇಬ್ಬರು ವಶಕ್ಕೆ, ಎಸ್‍ಐಟಿ ತನಿಖೆ ಚುರುಕು

ಬೆಂಗಳೂರು, ಮಾ.14- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‍ಐಟಿ ಪೊಲೀಸರು ಇಂದು ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಸಿಡಿ ಪ್ರಕರಣ ಕುರಿತಂತೆ ಜಾರಕಿಹೊಳಿ ಅವರು ಪೊಲೀಸರಿಗೆ ದೂರು ನೀಡಿರುವುದು ಹಾಗೂ ಯುವತಿ ಸಾಮಾಜಿಕ ಜಾಲತಾಣದಲ್ಲಿ ತದ್ವಿರುದ್ಧ ಹೇಳಿಕೆ ನೀಡಿರುವುದರಿಂದ ತನಿಖೆಯ ವೇಗವನ್ನು ಎಸ್‍ಐಟಿ ಚುರುಕುಗೊಳಿಸಿದೆ.ಸಿಡಿಯಲ್ಲಿದ್ದಾರೆ ಎಂಬ ಯುವತಿಯ ಬಾಯ್‍ಫ್ರೆಂಡ್ ಮತ್ತು ಆತನ ಸ್ನೇಹಿತನನ್ನು ಎಸ್‍ಐಟಿ ಈಗ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ …

Read More »

“ವಿಡಿಯೋದಲ್ಲಿ ಹೇಳಿದರೆ ಸಾಲದು, ಖುದ್ದು ದೂರು ನೀಡಬೇಕು”

ಬೆಂಗಳೂರು, ಮಾ.14- ಸಾಮಾಜಿಕ ಜಾಲತಾಣಗಳ ವಿಡಿಯೋ ತುಣುಕುಗಳನ್ನಾಧರಿಸಿ ದೂರು ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾದ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಜೀವಭಯವಿದೆ, ಭದ್ರತೆ ನೀಡುವಂತೆ ಗೃಹ ಸಚಿವರಿಗೆ ಮನವಿ ಮಾಡಿಕೊಂಡ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ತಮಗಾದ ಅನ್ಯಾಯದ ವಿರುದ್ಧ ದೂರು ನೀಡಬೇಕಾದರೆ …

Read More »

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಫ್ರ್ಯೂ ಅಥವಾ ನೈಟ್ ಕಫ್ರ್ಯೂ..?

ಬೆಂಗಳೂರು,ಮಾ.14- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಫ್ರ್ಯೂ ಅಥವಾ ನೈಟ್ ಕಫ್ರ್ಯೂ ಜಾರಿಗೊಳಿಸುವ ಬಗ್ಗೆ ಈವರೆಗೂ ಯಾವುದೇ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ಕರೆದಿದ್ದಾರೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಮುಖ್ಯಮಂತ್ರಿಗಳ ಸೂಚನೆ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಸದ್ಯಕ್ಕೆ ಕಫ್ರ್ಯೂ ಅಥವಾ ನೈಟ್ ಕಫ್ರ್ಯೂ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ …

Read More »

ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಗೋಕಾಕದಲ್ಲಿ ಪ್ರತಿಭಟನೆ

ಸಿಡಿ ಪ್ರಕರಣಕ್ಕೆ ಸಂಬಂದಪಟ್ಟವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು ಗೋಕಾಕದಲ್ಲಿ ಪ್ರತಿಭಟನೆ ನಡೆಸಿದರು. ಗೋಕಾಕ ಬಸವೇಶ್ವರ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು, ಸಿಡಿ ಪ್ರಕರಣಕ್ಕೆ ಸಂಬಂದಪಟ್ಟವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನೆ ನಿರತ ಮಹಿಳೆ ಮಾತನಾಡಿ, ರಾಜಕೀಯ ಮಾಡಲಿ ಆದರೆ ಹೆಣ್ಣನ್ನು ಮುಂದೆ ಇಟ್ಟುಕೊಂಡು ಶಿಖಂಡಿ ತರಹ …

Read More »

2+3+4 ಮುಖ್ಯವಾದರೂ ಅವರ ಹಿಂದೆ ಇನ್ನು ತುಂಬಾ ಹೆಚ್ಚಿನ ಜನರಿದ್ದಾರೆ; ರಮೇಶ್ ಜಾರಕಿಹೊಳಿ

ಬೆಂಗಳೂರು: ನಮ್ಮ ವಕೀಲರು ಮಾಧ್ಯಮದ ಜೊತೆ ಮಾತನಾಡಬೇಡಿ ಅಂದಿದ್ದಾರೆ. ಆದರೆ, ನೀವೂ ಮುಂಜಾನೆಯಿಂದ ಕಾಯ್ತಿದ್ದೀರಿ. ಅದಕ್ಕೆ ಮಾತನಾಡ್ತಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ತಮ್ಮ ನಿವಾಸದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರವಾಗಿ ಅಧಿಕೃತವಾಗಿ ನಾನು ದೂರು ನೀಡಿದ್ದೇನೆ.  ಎಲ್ಲಾ ರಾಜಕೀಯದವರು ಮಾಡಿರುವ ಷಡ್ಯಂತ್ರ. ಬ್ಲಾಕ್ ಮೇಲ್ ಮಾಡಿದ್ದಾರೆ. ಅದಕ್ಕಾಗಿ ದೂರು ನೀಡಿದ್ದೇನೆ. ದಾರಿ ತಪ್ಪಿಸುವ ರೀತಿ ಮಾಡಬೇಡಿ. ಇವತ್ತು ಎಫ್ ಐಆರ್ ದಾಖಲಾಗಿದೆ ಎಂದರು. ನಾನು ಬೇಕಾದರೂ ವಿಚಾರಣೆಗೆ ಹೋಗ್ತಿನಿ. ನಾವು ನೇರವಾಗಿ ಹೆಸರು ಹೇಳಿದರೆ ಕೇಸ್ …

Read More »

ಮೊಮ್ಮಕಳ್ಳನ್ನು ಆಡಿಸುವ ವಯಸ್ಸಿನಲ್ಲಿ ಮತ್ತೊಂದು ಮದುವೆಹುಟ್ಟಿಸಿದ ಮಕ್ಕಳು ಕೊಚ್ಚಿ ಕೊಲೆ ಮಾಡಿದ ಘಟನೆ

ಬೆಳಗಾವಿ: ಮೊಮ್ಮಕಳ್ಳನ್ನು ಆಡಿಸುವ ವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿ ಆಸ್ತಿಯಲ್ಲಿ ಎರಡನೆಯ ಹೆಂಡತಿಗೆ ಪಾಲು ಕೊಡಲು ಹೊರಟಿದ್ದ ವ್ಯಕ್ತಿಯನ್ನು ತಾನೇ ಹುಟ್ಟಿಸಿದ ಮಕ್ಕಳು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ 62 ವರ್ಷದ ಯಲಪ್ಪ ಹರಕಿ ಎಂಬಾತ ಕಳೆದ 35 ವರ್ಷದ ಹಿಂದೆಯೇ ಮದುವೆ ಆಗಿ ಮೂರು ಮಕ್ಕಳ ತಂದೆ ಕೂಡಾ ಆಗಿದ್ದ,ಅದ್ಯಾಕೋ ಮೊದಲೇನೆಯ ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಇನ್ನೊಂದು …

Read More »