Breaking News

Daily Archives: ಫೆಬ್ರವರಿ 5, 2021

ತಮಿಳುನಾಡಿನಲ್ಲಿ ಎರಡಂಕೆ ಪಡೆಯುತ್ತೇವೆ: ಸಿ.ಟಿ.ರವಿ

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಉಸ್ತುವಾರಿ ಸಿ.ಟಿ. ರವಿ ಅವರು ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ್ದಾರೆ. – ತಮಿಳುನಾಡಿನಲ್ಲಿ ಶೂನ್ಯದಿಂದ ಪಕ್ಷ ಕಟ್ಟಲು ಹೋಗಿದ್ದೀರಿ, ಪರಿಸ್ಥಿತಿ ಹೇಗಿದೆ? ಅಲ್ಲಿ ಪಕ್ಷ ಕಟ್ಟಲು ಶ್ರಮಿಸುತ್ತಿರುವ ಕಾರ್ಯಕರ್ತರಿದ್ದಾರೆ. ರಿಸಲ್ಟ್ ಬಂದಿಲ್ಲ ಅಂತ ಶೂನ್ಯ ಎಂದು ಹೇಳಲಾಗದು. ಈ ಬಾರಿ ಎರಡಂಕೆಯ ಶಾಸಕರನ್ನು ನಾವು ವಿಧಾನಸಭೆಗೆ ಕಳುಹಿಸುವುದು ಖಚಿತ. – ಏಕಾಂಗಿಯಾಗಿ …

Read More »

ವೇತನ ಸಹಿತ ರಜಾ ದಿನ ಏರಿಕೆ, ಸ್ವಾಗತಾರ್ಹ ಹೆಜ್ಜೆ

ಕಾರ್ಮಿಕರ ವೇತನ ಸಹಿತ ರಜೆ ದಿನಗಳನ್ನು 30-45 ದಿನಗಳಿಗೆ ಹೆಚ್ಚಿಸಲು ಹಾಗೂ ಬಳಕೆಯಾಗದ ವೇತನಸಹಿತ ರಜೆ ದಿನಗಳನ್ನು ಮುಂದಿನ ವರ್ಷಕ್ಕೆ ವಿಸ್ತರಿಸಲು ಅವಕಾಶ ಕಲ್ಪಿಸುವಂಥ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಅನ್ಯ ರಾಜ್ಯಗಳಲ್ಲಿ ಕಾರ್ಮಿಕರ ರಜೆ ದಿನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದ ಉದ್ಯೋಗ ವರ್ಗಕ್ಕೂ ಅನುಕೂಲ ಕಲ್ಪಿಸುವುದು ಇದರ ಉದ್ದೇಶ, ಖಾಸಗಿ ಕಂಪೆನಿಗಳ ಮಾಲಕರೊಂದಿಗೂ ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನಕ್ಕೆ …

Read More »

ಎಲ್‌ಪಿಜಿ ದರ 25 ರೂ. ಏರಿಕೆ : ಪೆಟ್ರೋಲ್‌, ಡೀಸೆಲ್‌ ಪ್ರತೀ ಲೀ.ಗೆ 35 ಪೈಸೆ ತುಟ್ಟಿ

ಹೊಸದಿಲ್ಲಿ: ಸರಕಾರಿ ತೈಲ ಮಾರಾಟ ಸಂಸ್ಥೆ (ಒಎಂಸಿ)ಗಳು ದೇಶಾದ್ಯಂತ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 25 ರೂ. ಏರಿಸಿದ್ದು, ಗುರುವಾರದಿಂದಲೇ ಪರಿಷ್ಕೃತ ದರ ಜಾರಿಗೊಂಡಿದೆ. ದಿಲ್ಲಿಯಲ್ಲಿ ಸಿಲಿಂಡರ್‌ಗೆ (14.2 ಕೆಜಿ) 694 ರೂ. ಬದಲಾಗಿ 719 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 697 ರೂ. ಇದ್ದ ಗ್ಯಾಸ್‌ ಸಿಲಿಂಡರ್‌ ಬೆಲೆ 722 ರೂ. ತಲುಪಿದೆ. ಮುಂಬಯಿಯಲ್ಲಿ 719 ರೂ., ಚೆನ್ನೈಯಲ್ಲಿ 735 ರೂ.ವರೆಗೆ ಏರಿಕೆಯಾಗಿದೆ. ಗ್ಯಾಸ್‌ ಸಿಲಿಂಡರ್‌ಗಳ ದರ ಏರಿಕೆ …

Read More »

ಚಿನ್ನದ ಬೆಲೆಯಲ್ಲಿ ಇಳಿಕೆ

2021ರ ಬಜೆಟ್ ನ ನಂತರ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದೂ ಇಳಿದಿದ್ದು, 322 ರೂಪಾಯಿಗೆ ತಲುಪಿದೆ. ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 47,457 ರೂಪಾಯಿಯಾಗಿತ್ತು. ಇಂದು 322 ರೂಪಾಯಿ ಇಳಿಕೆಯೊಂದಿಗೆ ಬಂಗಾರದ ಬೆಲೆ 47,137 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,825 ಡಾಲರ್ …

Read More »

ಚನ್ನಮ್ಮ ನಗರ ಶಾಲೆಯಲ್ಲಿ ಚನ್ನಮ್ಮ ನಗರ ಶಾಲೆಯಲ್ಲಿ

ಬೆಳಗಾವಿ :  ನಿವೃತ್ತರಾದ ಶಿಕ್ಷಕ ವಸಂತ ಕಟ್ಟಿಯವರ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭವನ್ನು ರಾಣಿ ಚೆನ್ನಮ್ಮ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಟಿಳಕವಾಡಿ ಕ್ಲಸ್ಟರ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿತೈಷಿ ಹಾಗೂ ಮಾಜಿ ನಗರಸೇವಕಿ ಶೀಲಾ ದೇಶಪಾಂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈ ಶಾಲೆಯಿಂದ ಇಬ್ಬರು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲೇ ಕಟ್ಟಿ ಗುರುಗಳು ನಿವೃತ್ತರಾಗಿದ್ದಾರೆ. …

Read More »

ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳತ್ತ ಗಮನ ಹರಿಸುವಂತೆ ಕೈಗಾರಿಕೋದ್ಯಮಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಕರೆ

ಬೆಂಗಳೂರು: ಬೆಂಗಳೂರು ನಗರದಂತೆಯೇ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಸಾಕಷ್ಟು ವಿಶೇಷ ಅನುಕೂಲಗಳನ್ನು ಮಾಡಲಾಗಿದ್ದು, ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳತ್ತ ಗಮನ ಹರಿಸುವಂತೆ ಕೈಗಾರಿಕೋದ್ಯಮಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಕರೆ ನೀಡಿದರು. ಇಂದು ಏರೋ ಇಂಡಿಯಾ 2021 ಕಾರ್ಯಕ್ರಮ ದಲ್ಲಿ ಮಾನ್ಯ ಬೃಹತ್ ಮತ್ತು …

Read More »

ನಟ-ನಟಿಯರು ಬೀದಿಗಿಳಿದು ರೈತರನ್ನು ಬೆಂಬಲಿಸಿ: ಸಿದ್ದರಾಮಯ್ಯ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ 71ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾ ನಟ- ನಟಿಯರು ಕೂಡ ಹೋರಾಟ ನಿರತ ರೈತರನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ, ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು ವಿಶೇಷವಾಗಿ …

Read More »

ಉಪ ರಿಜಿಸ್ಟ್ರಾರ್ ಗೆ 70 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿ

ಬೆಂಗಳೂರು: ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ದಂಪತಿ, ಸಚಿವರ ಬಳಿ ಹೇಳಿ ಕೆಲಸ ಕೊಡಿಸುವುದಾಗಿ ನಂಬಿಸಿ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪ ರಿಜಿಸ್ಟ್ರಾರ್ ಗೆ 70 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಂಜುನಾಥ್ ಹಾಗೂ ಲಕ್ಷ್ಮಿಪ್ರಿಯಾ ದಂಪತಿ ವಂಚನೆ ಮಾಡಿರುವ ಆರೋಪಿಗಳು. ವಂಚನೆಗೊಳಗಾದ ಡಾ.ಪ್ರಭಾ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಜುನಾಥ್ ಹಾಗೂ ಲಕ್ಷ್ಮಿಪ್ರಿಯಾ ತಾವು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು …

Read More »

k.p.c.c. ಸಾಮಾಜಿಕ ಜಾಲತಾಣ ಮುಖ್ಯಸ್ಥರಾಗಿ ಬಿ.ಆರ್.ನಾಯ್ಡು ನೇಮಕ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಯುವ ಮುಖಂಡ ಬಿ.ಆರ್.ನಾಯ್ಡು ನೇಮಕಗೊಂಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಕರ್ನಾಟಕ ರಾಜ್ಯದ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಬಿ.ಆರ್.ನಾಯ್ಡು ಅವರಿಗೆ ವಹಿಸಿದ್ದಾರೆ. ಈ ವರೆಗೆ ನಟರಾಜ ಗೌಡ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಇದೀಗ ಇವರನ್ನು ನೇಮಕ ಮಾಡಲಾಗಿದೆ.

Read More »

ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ 1-5 ನೇ ತರಗತಿ ಆರಂಭ

ಯಾದಗಿರಿ: ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ ಸದ್ದಿಲ್ಲದೆ 1 ರಿಂದ 5 ನೇ ತರಗತಿ ನಡೆಯುತ್ತಿವೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಕೆಲ ಖಾಸಗಿ ಶಾಲೆಗಳು ತರಗತಿ ಆರಂಭಿಸಿ, ಮುಗ್ಧ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿವೆ. ಯಾದಗಿರಿ ನಗರದ ಸಪ್ತಗಿರಿ, ನವನಂದಿ, ಆರ್ ವಿ ಸೇರಿದಂತೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಗಪ್ ಚುಪ್ ಆಗಿ ಕ್ಲಾಸ್ ಆರಂಭವಾಗಿವೆ. ಕ್ಲಾಸ್ ರೂಮ್ ಗಳಲ್ಲಿ ಯಾವುದೇ ಮಕ್ಕಳ ಮಧ್ಯೆ ಸಾಮಾಜಿಕ ಅಂತರ, ಮಾಸ್ಕ್ …

Read More »