Breaking News

ಚನ್ನಮ್ಮ ನಗರ ಶಾಲೆಯಲ್ಲಿ ಚನ್ನಮ್ಮ ನಗರ ಶಾಲೆಯಲ್ಲಿ

Spread the love

ಬೆಳಗಾವಿ :  ನಿವೃತ್ತರಾದ ಶಿಕ್ಷಕ ವಸಂತ ಕಟ್ಟಿಯವರ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭವನ್ನು ರಾಣಿ ಚೆನ್ನಮ್ಮ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಟಿಳಕವಾಡಿ ಕ್ಲಸ್ಟರ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿತೈಷಿ ಹಾಗೂ ಮಾಜಿ ನಗರಸೇವಕಿ ಶೀಲಾ ದೇಶಪಾಂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈ ಶಾಲೆಯಿಂದ ಇಬ್ಬರು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲೇ ಕಟ್ಟಿ ಗುರುಗಳು ನಿವೃತ್ತರಾಗಿದ್ದಾರೆ. ವಯೋಸಹಜವಾಗಿ ನಿವೃತ್ತರಾಗುವುದು ಅನಿವಾರ್ಯ. ಆದರೆ ಆ ಸ್ಥಾನಗಳನ್ನು ಇಲಾಖೆ ಬೇಗ ಭರ್ತಿ ಮಾಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಶಿಕ್ಷಣ ಹಾಳಾಗುತ್ತದೆ ಎಂದರು.

ಜಿಲ್ಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಕೃಷ್ಣಾ ರಾಚಣ್ಣವರ, ನಗರ ಘಟಕದ ಅಧ್ಯಕ್ಷ ಬಾಬು ಸೊಗಲಣ್ಣವರ ಶಿಕ್ಷಕ ವಸಂತ ಕಟ್ಟಿಯವರ ಸುದೀರ್ಘ 30 ವರ್ಷಗಳ ಸೇವೆಯನ್ನು ಸ್ಮರಿಸುತ್ತ, ಅವರ ನಿವೃತ್ತಿ ಜೀವನ ಸುಖಮವಾಗಿರಲಿ, ದೇವರು ಅವರಿಗೆ ಇನ್ನೂ ಹೆಚ್ಚು ಸಮಾಜ ಸೇವೆ ಮಾಡುವಂತಹ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
 ಟಿಳಕವಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ  ವ್ಯಕ್ತಿ ಗಿರೀಶ ಜಗಜಂಪಿ ಮಾತನಾಡಿ, ನನಗಿಂತ ಮುನ್ನ ಸಿ ಆರ್ ಪಿ ಯಾಗಿದ್ದ ಹಿರಿಯ ಶಿಕ್ಷಕ ವಸಂತ ಕಟ್ಟಿಯವರ ಮಾರ್ಗದರ್ಶನ ನಮಗೆ ಸಿಗುತಿತ್ತು. ಇನ್ನು ಮುಂದೆ ಕೂಡ ಅವರ ಮಾರ್ಗದರ್ಶನ ನಮಗೆಲ್ಲ ಸಿಗುತ್ತಿರಲಿ. ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.

Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ