ಯಾದಗಿರಿ: ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ ಸದ್ದಿಲ್ಲದೆ 1 ರಿಂದ 5 ನೇ ತರಗತಿ ನಡೆಯುತ್ತಿವೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಕೆಲ ಖಾಸಗಿ ಶಾಲೆಗಳು ತರಗತಿ ಆರಂಭಿಸಿ, ಮುಗ್ಧ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿವೆ. ಯಾದಗಿರಿ ನಗರದ ಸಪ್ತಗಿರಿ, ನವನಂದಿ, ಆರ್ ವಿ ಸೇರಿದಂತೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಗಪ್ ಚುಪ್ ಆಗಿ ಕ್ಲಾಸ್ ಆರಂಭವಾಗಿವೆ.
ಕ್ಲಾಸ್ ರೂಮ್ ಗಳಲ್ಲಿ ಯಾವುದೇ ಮಕ್ಕಳ ಮಧ್ಯೆ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಕೂರಿಸಿ ಪಾಠ ಮಾಡಲಾಗುತ್ತಿದೆ. ಶಿಕ್ಷಕರೇ ಸ್ವತಃ ಮಾಸ್ಕ್ ಇಲ್ಲದೆ ತರಗತಿಯಲ್ಲಿ ಪಾಠ ಭೋದನೆ ಮಾಡುತ್ತಿದ್ದಾರೆ. ಡಿಡಿಪಿಐ ಕಚೇರಿ ಕೂಗಳತೆ ದೂರದಲ್ಲಿ ಈ ಎಲ್ಲಾ ಶಾಲೆಗಳು ಇದ್ದರೂ, ಖಾಸಗಿ ಶಾಲೆ ನಿಯಂತ್ರಿಸುವಲ್ಲಿ ಡಿಡಿಪಿಐ ಕಚೇರಿ ವಿಫಲವಾಗಿದೆ.
ಸರ್ಕಾರದ ನಿಯಮ ಗಾಳಿಗೆ ತೂರಿ ಯಾದಗಿರಿ ನಗರದ ಬಹುತೇಕ ಖಾಸಗಿ ಶಾಲೆಗಳು 1 ರಿಂದ 5 ನೇ ತರಗತಿ ಆರಂಭ ಮಾಡಿದ್ದು, ಪೋಷಕರು ಸಹ ತಮ್ಮ ಮಕ್ಕಳನ್ನು ಶಾಲೆ ಕಳುಹಿಸುತ್ತಿರುವುದು ವಿಪರ್ಯಾಸವಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಹಣ ಮಾಡುವ ಉದ್ದೇಶದದಿಂದ ಖಾಸಗಿ ಶಾಲೆಗಳು ಈ ರೀತಿಯ ವರ್ತನೆ ತೋರುತ್ತಿವೆ ಎಂಬ ಅನುಮಾನ ಮೂಡುತ್ತಿದೆ.