Breaking News
Home / 2021 / ಜನವರಿ / 28 (page 4)

Daily Archives: ಜನವರಿ 28, 2021

ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್​ನಲ್ಲಿ ಚಿಂತನೆ

ನವದೆಹಲಿ: ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ವಾರ್ಷಿಕ 80 ಸಾವಿರ ರೂ. ರೂಪಾಯಿಯವರೆಗೂ ವಿನಾಯಕ ನೀಡುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ. ಸ್ಟ್ಯಾಂಡರ್ಡ್ ಡಿಡೆಕ್ಷನ್ ಮಿತಿ ಹೆಚ್ಚಳ ಮಾಡಲು ಕಳೆದ ಬಜೆಟ್ನಲ್ಲಿ ಜಾರಿಗೆ ತರಲಾಗಿದ್ದ ತೆರಿಗೆ ವ್ಯವಸ್ಥೆಗಳನ್ನು ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ. …

Read More »

ಒಂದು ದೇಶ; ಒಂದು ಚುನಾವಣೆ ಚರ್ಚೆ

ಬೆಂಗಳೂರು: ರಾಜ್ಯ ವಿಧಾನ ಮಂಡಲ ಅಧಿವೇಶನ ಗುರುವಾರ ಆರಂಭವಾಗಲಿದೆ. ಮೊದಲ ದಿನ ರಾಜ್ಯಪಾಲ ವಜುಭಾç ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದರೆ, ಕೊನೆಯ 2 ದಿನ “ಒಂದು ದೇಶ; ಒಂದು ಚುನಾವಣೆ’ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಧಾನ ಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಹೇಳಿದ್ದಾರೆ. ಮೊದಲ ದಿನ ರಾಜ್ಯಪಾಲರ ಭಾಷಣದ ಅನಂತರ ಸಂತಾಪ ಸೂಚನೆ ನಡೆಯಲಿದೆ. ಉಳಿದ ಆರು ದಿನ ಪ್ರಶ್ನೋತ್ತರ ಹಾಗೂ ವಿವಿಧ …

Read More »

ಮಾಜಿ ಸಚಿವ, ಜೆಡಿಎಸ್ ಶಾಸಕ ಎಂ.ಸಿ ಮನಗುಳಿ ನಿಧನ

ಬೆಂಗಳೂರು: ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಂ.ಸಿ ಮನಗುಳಿ ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮನಗುಳಿ ಅವರನ್ನು ಕಳೆದ ಶನಿವಾರ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮಲ್ಲಪ್ಪ‌ ಚೆನ್ನವೀರಪ್ಪ ಮನಗೂಳಿ ಅವರು ಸತತ ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಎರಡು ಬಾರಿ ಶಾಸಕರಾಗಿದ್ದರು. 1994ರಲ್ಲಿ ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದರು. ಮತ್ತೆ ಕಳೆದ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ …

Read More »

ಸಿನೆಮಾ ಪ್ರಿಯರಿಗೊಂದು ಸಿಹಿ ಸುದ್ದಿ.

ಹೊಸದಿಲ್ಲಿ/ಬೆಂಗಳೂರು: ಸಿನೆಮಾ ಪ್ರಿಯರಿಗೊಂದು ಸಿಹಿ ಸುದ್ದಿ. ಸಿನೆಮಾ ಹಾಲ್‌ಗಳಲ್ಲಿ ಶೇ. 50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು ಎಂಬ ನಿಯಮವನ್ನು ತೆಗೆದುಹಾಕಿರುವ ಕೇಂದ್ರ ಸರಕಾರ ಹೆಚ್ಚಿನ ಪ್ರೇಕ್ಷಕರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಈ ಸಂಬಂಧ ಬುಧವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಿನೆಮಾ ಮಂದಿರ ಮತ್ತು ಈಜುಕೊಳಗಳ ಸಂಬಂಧ ಮಹತ್ವದ ಬದಲಾವಣೆ ಮಾಡಲಾಗಿದೆ. ಆದರೆ ಎಷ್ಟು ಮಂದಿಗೆ ಅವಕಾಶ ಕೊಡಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ …

Read More »

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಕೇಂದ್ರ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ರೈತರ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ತೆಂಗು ಬೆಳೆಯುವ ರೈತರಿಗೆ ಎಂಎಸ್ ಪಿ ಕೊಡುಗೆ ನೀಡಲಾಗಿದೆ ಅಂತ ತಿಳಿದು ಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮಾಧ್ಯಮಗಳಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಕೊಬ್ಬರಿ ಬೆಳೆಗಾರರ ಪರವಾಗಿ ಕೇಂದ್ರ …

Read More »

2, 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಒತ್ತು: ಜಗದೀಶ ಶೆಟ್ಟರ್

ದಾವಣಗೆರೆ: ‘ಬೆಂಗಳೂರು ಕೈಗಾರಿಕೆಗಳಿಂದ ತುಂಬಿ ಹೋಗಿದೆ. ಒಂದೇ ಕಡೆ ಎಲ್ಲ ಉದ್ಯಮಗಳು ಕೇಂದ್ರೀಕೃತಗೊಳ್ಳಬಾರದು. ಎಲ್ಲ ಜಿಲ್ಲೆಗಳೂ ಅಭಿವೃದ್ಧಿ ಹೊಂದುವಂತೆ ಆಗಬೇಕು ಎಂದು ನಿರ್ಧರಿಸಿದ್ದೇವೆ. ಅದಕ್ಕಾಗಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲಾಗುವುದು’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಕೈಗಾರಿಕೋದ್ಯಮಿಗಳ ಜತೆ ಬುಧವಾರ ಸಭೆ ನಡೆಸಿದ ಅವರು, ‘ಬೆಂಗಳೂರು-ಮುಂಬೈ ಹೆದ್ದಾರಿಯನ್ನು ಕೈಗಾರಿಕಾ ಕಾರಿಡಾರ್‌ ಎಂದು ಗುರುತಿಸಲಾಗಿದೆ. ಈ ಹೆದ್ದಾರಿ ಹಾದುಹೋಗುವ …

Read More »

₹ 100ರ ಗಡಿ ದಾಟಿದ ಪೆಟ್ರೋಲ್‌ ದರ

ರಾಜಸ್ಥಾನದಲ್ಲಿ ₹ 100ರ ಗಡಿ ದಾಟಿದ ಪ್ರೀಮಿಯಂ ಪೆಟ್ರೋಲ್‌ ದರ   ನವದೆಹಲಿ: ದೇಶದಾದ್ಯಂತ ಬುಧವಾರವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಆಗಿದೆ. ಬ್ರ್ಯಾಂಡೆಡ್‌ ಅಥವಾ ಪ್ರೀಮಿಯಂ ಪೆಟ್ರೋಲ್‌ ದರವು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಬುಧವಾರ ಒಂದು ಲೀಟರ್‌ಗೆ ₹ 100ರ ಗಡಿ ದಾಟಿದೆ. ದೆಹಲಿಯಲ್ಲಿ ಪ್ರೀಮಿಯಂ ಪೆಟ್ರೋಲ್‌ ದರ ಲೀಟರಿಗೆ ₹ 89.10 ಇದ್ದರೆ ಮುಂಬೈನಲ್ಲಿ ₹ 95.61ರಷ್ಟಾಗಿದೆ. ಬೆಲೆ ಏರಿಕೆ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೆಹಲಿಯಲ್ಲಿ …

Read More »

ಮಾವನ ಮೇಲಿನ ಸಿಟ್ಟಿಗೆ ಜಗತ್ತು ನೋಡದ ಮಗುವಿನ ಜೊತೆ ಮಸಣ ಸೇರಿದ್ದಾಳೆ.

ಮೈಸೂರು; ಆಕೆ ಕಳೆದ ಐದು ತಿಂಗಳ ಹಿಂದೆ ಪೊಲೀಸ್ ಹುದ್ದೆಯಲ್ಲಿದ್ದವರನ್ನು ಮದುವೆಯಾಗಿದ್ದಳು. ಜೀವನ ಪೂರ್ತಿ ಕೆಲಸದ ಭದ್ರತೆ ಇರುತ್ತೆ, ಮನೆ ಮಂದಿ ಜೊತೆ ನೆಮ್ಮದಿಯಿಂದ ಇರಬಹುದು ಎಂದು ಊಹಿಸಿಕೊಂಡಿದ್ದ ಆಕೆ ಗಂಡನ ಜೊತೆ ಸುಖವಾಗಿಯೇ ಇದ್ದಳು. ಆಕೆ‌ ಮೂರು ತಿಂಗಳ ಗರ್ಭಿಣಿ ಸಹ ಆಗಿ ಇನ್ನೆನು ಪುಟ್ಟ ಮಗುವಿಗೆ ಜನ್ಮ ನೀಡುವವಳಿದ್ದಳು. ಆದರೆ ಆಕೆಗೆ ತಾನು ಬಯಸಿದ ಒಂದು ಸುಖ ಸಿಗಲೇ ಇಲ್ಲದಂತಾಗಿತ್ತು. ತನ್ನ ಹೆತ್ತವರನ್ನ ಬಿಟ್ಟ, ಗಂಡನ ಮನೆಗೆ …

Read More »

ಬೆಳಗಾವಿ ಲೋಕಸಭಾ ಸ್ಥಾನಕ್ಕೆ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.: ಸತೀಶ್​ ಜಾರಕಿಹೊಳಿ

ಯಾದಗಿರಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ರಾಜ್ಯದಲ್ಲಿ ಯಾವುದೇ ಜನಪರ ಕಾಳಜಿ ತೊರಿ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ‌. ಸಿಎಂ ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಚಿವರ ಓಲೈಕೆ ಮಾಡಲು ಖಾತೆ ಬದಲಾವಣೆ ಸರ್ಕಸ್​ ನಡೆಸುತ್ತಿದ್ದಾರೆ. ಅವರಿಗೆ ಜನರ ಬಗ್ಗೆಯಾಗಲಿ, ಸರ್ಕಾರದ ಬಗ್ಗೆಯಾಗಲಿ ಕಾಳಜಿ ಇಲ್ಲ. ಅವರ ಕಾಳಜಿ ಏನಿದ್ದರೂ ಸಚಿವರ ಬಗ್ಗೆ. ಬಿಎಸ್​ ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಹಿರಿಯ ನಾಯಕ ಸತೀಶ್​ …

Read More »

ಬೆಳಗಾವಿ ಮರಾಠಿಗರದ್ದಲ್ಲ. ಅದು ವೀರ ಕನ್ನಡಿಗರದ್ದು..!H.D.K.

ಬೆಂಗಳೂರು: ಬೆಳಗಾವಿ ಮರಾಠಿಗರದ್ದಲ್ಲ. ಅದು ವೀರ ಕನ್ನಡಿಗರದ್ದು ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಉದ್ಧವ್​ ಠಾಕ್ರೆ ಆಗ್ರಹಿಸಿದ್ದರು. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇನ್ನು ಸುಪ್ರೀಂಕೋರ್ಟ್​ನಲ್ಲಿರುವಾಗಲೇ ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಿಸಿ, ಬೆಳಗಾಂ ಹೆಸರು ಬದಲಾಯಿಸಲಾಗಿದೆ. ಇದು ನ್ಯಾಯಾಂಗ ನಿಂದನೆ. ನಮ್ಮ ಪ್ರದೇಶವನ್ನು ಗೆಲ್ಲುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು …

Read More »