Breaking News
Home / ನವದೆಹಲಿ / ₹ 100ರ ಗಡಿ ದಾಟಿದ ಪೆಟ್ರೋಲ್‌ ದರ

₹ 100ರ ಗಡಿ ದಾಟಿದ ಪೆಟ್ರೋಲ್‌ ದರ

Spread the love

ರಾಜಸ್ಥಾನದಲ್ಲಿ ₹ 100ರ ಗಡಿ ದಾಟಿದ ಪ್ರೀಮಿಯಂ ಪೆಟ್ರೋಲ್‌ ದರ

 

ನವದೆಹಲಿ: ದೇಶದಾದ್ಯಂತ ಬುಧವಾರವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಆಗಿದೆ. ಬ್ರ್ಯಾಂಡೆಡ್‌ ಅಥವಾ ಪ್ರೀಮಿಯಂ ಪೆಟ್ರೋಲ್‌ ದರವು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಬುಧವಾರ ಒಂದು ಲೀಟರ್‌ಗೆ ₹ 100ರ ಗಡಿ ದಾಟಿದೆ.

ದೆಹಲಿಯಲ್ಲಿ ಪ್ರೀಮಿಯಂ ಪೆಟ್ರೋಲ್‌ ದರ ಲೀಟರಿಗೆ ₹ 89.10 ಇದ್ದರೆ ಮುಂಬೈನಲ್ಲಿ ₹ 95.61ರಷ್ಟಾಗಿದೆ.

ಬೆಲೆ ಏರಿಕೆ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 25 ಪೈಸೆಗಳಷ್ಟು ಹೆಚ್ಚಿಸಿವೆ.

ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್‌ ದರ ₹ 86.30, ಡೀಸೆಲ್‌ ದರ ₹ 76.23ಕ್ಕೆ ಏರಿಕೆ ಆದರೆ, ಮುಂಬೈನಲ್ಲಿ ಪೆಟ್ರೋಲ್‌ ₹ 92.86 ಮತ್ತು ಡೀಸೆಲ್‌ ₹ 83.02ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 26 ಪೈಸೆ ಹೆಚ್ಚಾಗಿ ₹ 89.21ಕ್ಕೆ ಮತ್ತು ಡೀಸೆಲ್‌ ದರ 26 ಪೈಸೆ ಹೆಚ್ಚಾಗಿ ₹ 81.10ಕ್ಕೆ ತಲುಪಿದೆ


Spread the love

About Laxminews 24x7

Check Also

ಅಸನಿ ಚಂಡಮಾರುತದಿಂದಾಗಿ ವಾತಾವರಣ ಕೂಲ್ ಕೂಲ್

Spread the loveಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಟ್ ನಿಂದಾಗಿ ಬೆಂಗಳೂರಿನ ವಾತಾವರಣ ಕಂಪ್ಲೀಟ್ ಕೂಲ್ ಆಗಿದೆ. ಇಂದು ಕೂಡ ಮೋಡ ಕವಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ