Breaking News
Home / Uncategorized / ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್​ನಲ್ಲಿ ಚಿಂತನೆ

ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್​ನಲ್ಲಿ ಚಿಂತನೆ

Spread the love

ನವದೆಹಲಿ: ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ವಾರ್ಷಿಕ 80 ಸಾವಿರ ರೂ. ರೂಪಾಯಿಯವರೆಗೂ ವಿನಾಯಕ ನೀಡುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ.

ಸ್ಟ್ಯಾಂಡರ್ಡ್ ಡಿಡೆಕ್ಷನ್ ಮಿತಿ ಹೆಚ್ಚಳ ಮಾಡಲು ಕಳೆದ ಬಜೆಟ್ನಲ್ಲಿ ಜಾರಿಗೆ ತರಲಾಗಿದ್ದ ತೆರಿಗೆ ವ್ಯವಸ್ಥೆಗಳನ್ನು ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ.

ಪ್ರಸ್ತುತ 2.50 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ಇರುವವರಿಗೆ ತೆರಿಗೆ ಇಲ್ಲ. 2.50 ಲಕ್ಷ ರೂ.ನಿಂದ 5 ಲಕ್ಷದವರೆಗೆ ಶೇಕಡ 5 ರಷ್ಟು ತೆರಿಗೆ ಇದೆ. 5 ಲಕ್ಷ ರೂ.ನಿಂದ 7.50 ಲಕ್ಷದವರೆಗೆ ಶೇಕಡ 10 ರಷ್ಟು, 7.50 ಲಕ್ಷ ರೂ.ನಿಂದ 10 ಲಕ್ಷದವರೆಗೆ ಶೇಕಡ 15 ರಷ್ಟು., 10 ಲಕ್ಷದಿಂದ 12.50 ಲಕ್ಷದವರೆಗೆ ಶೇಕಡ 20 ರಷ್ಟು ತೆರಿಗೆ ಇದೆ.


Spread the love

About Laxminews 24x7

Check Also

ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

Spread the love ಬೆಳಗಾವಿ: ‘ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಆಗಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದು ಎಐಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ