Breaking News
Home / 2021 / ಜನವರಿ / 26 (page 3)

Daily Archives: ಜನವರಿ 26, 2021

ಘಟಪ್ರಭಾದಲ್ಲಿ ಮುಂದಿನ ಬಾರಿ ರಾಷ್ಟ್ರೀಯ ನಾಯಕರಿಂದ ಧ್ವಜಾರೋಹಣ: ಸತೀಶ ಜಾರಕಿಹೊಳಿ

ಘಟಪ್ರಭಾ: ಪಟ್ಟಣದ ಡಾ.ಎನ್.ಎಸ್. ಹರ್ಡೀಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಮುಂದಿನ ಬಾರಿ ಗಣರಾಜ್ಯೋತ್ಸವಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸಿ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಮಂಗಳವಾರ ಧ್ವಜಾರೋಹಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾದಳ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ದಿನಗಳು ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. “ಸ್ವಾತಂತ್ರ್ಯ ಹೋರಾಟದಲ್ಲಿ ಹರ್ಡೀಕರ್ ಅವರ ನೇತೃತ್ವದಲ್ಲಿ ಸೇವಾದಳದ …

Read More »

ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಕೈ ಬಿಡಬೇಕು ಎಂದ :H.D.K.

ಬೆಂಗಳೂರು; ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ರೈತರು ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವ ದಿನದಂದು ದೇಶವ್ಯಾಪಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ದರಾಗಿದ್ದಾರೆ. ಇದೇ ವಿಷಯವಾಗಿ ಇಂದು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ …

Read More »

ರೆಸಾರ್ಟ್ ವಾಸ್ತವ್ಯ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ‌ಹೇಳಿದ್ದೇನು

ಬೆಳಗಾವಿ-ರೆಸಾರ್ಟ್ ವಾಸ್ತವ್ಯ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ‌ ಸ್ಪಷ್ಟನೆ ನೀಡಿದ್ದು,ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು,ನನ್ನ ಪ್ರವಾಸದ ಮಾಹಿತಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು,ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಹೇಳಿದ್ದಾರೆ. ಗಣರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸಚಿವ ರಮೇಶ್ ಜಾರಕಿಹೊಳಿ‌ ಸುದ್ದಿಗೋಷ್ಠಿ ನಡೆಸಿದ ಅವರು,ಆದರೆ ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿ ಬಂದವು,ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.ಮಾರ್ಚ್ ನಂತರ …

Read More »

ಕೆಂಪುಕೋಟೆಯ ಸಮೀಪ ತಲುಪಿದ ರೈತರ ಟ್ರ್ಯಾಕ್ಟರ್‌ ರ‍್ಯಾಲಿ

ಹೊಸದಿಲ್ಲಿ,ಜ.26: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ನಿಟ್ಟಿನಲ್ಲಿ ರೈತರು ಗಣರಾಜ್ಯೋತ್ಸವ ದಿನವಾದ ಇಂದು ರಾಷ್ಟ್ರ ರಾಜಧಾನಿ ದಿಲ್ಲಿಗೆ ಟ್ರ್ಯಾಕ್ಟರ್‌ ರ‍್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿಯು ಕೈ ಮೀರುವ ಹಂತದಲ್ಲಿದ್ದು, ಪೊಲೀಸರು ನಿರಂತರ ಅಶ್ರುವಾಯು ಸಿಡಿಸುತ್ತಿದ್ದಾರೆ ಹಾಗೂ ಲಾಠಿ ಚಾರ್ಜ್‌ ಮಾಡುತ್ತಿದ್ದಾರೆ. ಈ ನಡುವೆ ರೈತರು ಭಾರತೀಯ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಬಳಿ ಜಮಾವಣೆಗೊಂಡು ತಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದಾರೆ ಎಂದುವರದಿ ಮಾಡಿದೆ. ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಬಳಿ ಇದೀಗ …

Read More »

ಕೈಮುಗಿದು ಪ್ರಾರ್ಥಿಸುತ್ತೇವೆ ಕೃಷಿ ಕಾಯ್ದೆಗೆ ಅವಕಾಶ ಕೊಡಿ: ಗೋವಿಂದ ಕಾರಜೋಳ

ಬಾಗಲಕೋಟೆ: ಕೇಂದ್ರದ ಕೃಷಿ ಕಾಯ್ದೆಗೆ ರಾಜಕೀಯ ಪ್ರೇರಿತ ಹೋರಾಟ ಸಲ್ಲ. ಕೈ ಮುಗಿದು ಪ್ರಾರ್ಥನೆ ಮಾಡುತ್ತೇವೆ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಿ ಎಂದು ರೈತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಯಿಂದ ರೈತರಿಗೆ ತೊಂದರೆ ಆದಲ್ಲಿ ಮುಂದೆ ತಿದ್ದುಪಡಿ ಮಾಡಬಹುದು. ಸಾರ್ವಜನಿಕ ಹಿತಕ್ಕಾಗಿ ಹಲವು ಬಾರಿ ದೇಶದ ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ದೇವೆ ಇನ್ನು ಕಾಯ್ದೆ ತಿದ್ದುಪಡಿ ಸಾಧ್ಯವಿಲ್ಲವೇ ಎಂದು …

Read More »

ತೀವ್ರಗೊಂಡ ರೈತರ ಪ್ರತಿಭಟನೆ : ಪೊಲೀಸರಿಂದ ರೈತರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

ನವದೆಹಲಿ: ತೀವ್ರಗೊಂಡ ರೈತರ ಪ್ರತಿಭಟನೆಯನ್ನು ತಡೆಯಲು ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕೃಷಿ ಕಾನೂನು ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬ್ಯಾರಿಕೇಡ್‍ಗಳನ್ನು ಉಲ್ಲಂಘಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಅಶ್ರುವಾಯು ಹಾರಿಸಲಾಗಿದೆ. ಉತ್ತರ ದೆಹಲಿಯಲ್ಲಿ ಅನ್ನದಾತರ ಕಿಚ್ಚು ತೀವ್ರಗೊಂಡಿಗೆ. ಕಲ್ಲು ತೂರಾಟವಾಗುತ್ತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವ ಪೊಲೀಸರ ವಿರುದ್ಧವಾಗಿ ರೈತರು ತಿರುಗಿ ಬಿದ್ದಿದ್ದಾರೆ. ರೈತರ …

Read More »

ಸೇನೆಯ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ

ನವದೆಹಲಿ, ಜನವರಿ 26: 140 ವಾಯು ರಕ್ಷಣಾ ರೆಜಿಮೆಂಟ್ ನ ಸುಧಾರಿತ ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕ್ಯಾಪ್ಟನ್ ಪ್ರೀತಿ ಚೌಧರಿ ಮುನ್ನಡೆಸಿದ್ದಾರೆ. ಇಂದು ಪಥಸಂಚಲನದಲ್ಲಿ ಭಾಗವಹಿಸಿದ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ ಆಗಿದ್ದಾರೆ. ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆ ಆಧುನಿಕ ರಾಡಾರ್ ಮತ್ತು ಡಿಜಿಟಲ್ ಅಗ್ನಿ ನಿಯಂತ್ರಣ ಕಂಪ್ಯೂಟರ್ ನ್ನು ಹೊಂದಿದೆ. ಇಂದು ಮಹಿಳೆಯರು ಕೂಡ ದೇಶದ ಮಿಲಿಟರಿಯ ಮೂರೂ ಪಡೆಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು …

Read More »

ಕೊರೊನಾ ಅವಧಿಯಲ್ಲಿ ಭಾರತದ 100 ಬಿಲಿಯನೇರ್‌ಗಳ ಆದಾಯ ಏರಿಕೆ

ನವದೆಹಲಿ : ವಿಶ್ವಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸಿ ಜಾಗತಿಕ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟು ಮಾಡಿದೆ. ಈ ಮಹಾಮಾರಿ ಪ್ರಭಾವ ನಮ್ಮ ದೇಶದ ಆರ್ಥಿಕತೆ ಮೇಲೂ ಆಗಿದೆ. ಆದರೆ, ನಮ್ಮ ಶತಕೋಟಿ ಶ್ರೀಮಂತರ ಆರ್ಥಿಕ ಸ್ಥಿತಿ ಮೇಲೆ ಮಾತ್ರ ಕಿಂಚಿತ್ತು ಪರಿಣಾಮ ಆಗಿಲ್ಲ ಎಂಬುದು ಆಶ್ಚಯಕರ ಸಂಗತಿ! ಕೋವಿಡ್-19 ಸಾಂಕ್ರಾಮಿಕ ರೋಗ ವಿಶ್ವಕ್ಕೆ ಅಪ್ಪಳಿಸಿದ ಪರಿಣಾಮ ಪ್ರಪಂಚಾವೇ ಲಾಕ್‍ಡೌನ್ ಆಗಿತ್ತು. ಜÁಗತಿಕ ಆರ್ಥಿಕ ಸ್ಥಿತಿ ಸ್ತಬ್ಧವಾಗಿತ್ತು. ಬೃಹತ್ …

Read More »

ಕೊರೊನಾ ಆತಂಕ ನಡುವೆಯೂ 72ನೇ ಗಣರಾಜ್ಯೋತ್ಸವ ಸಂಭ್ರಮ

ನವದೆಹಲಿ,ಜ.26- ಕೊರೊನಾ ಹಾಗೂ ಇತರೆ ಆತಂಕಗಳ ನಡುವೆಯೂ ನಡೆದ 72ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಕಿಂಚಿತ್ತೂ ಕೊರತೆಗಳು ಕಂಡುಬರಲಿಲ್ಲ. ಎಂದಿನಂತೆ ಸೇನೆ ತನ್ನ ಶಕ್ತಿ ಸಾಮಥ್ರ್ಯಗಳನ್ನು ಸಮರ್ಥಿಸಿದರೆ, ವಿವಿಧ ರಾಜ್ಯಗಳ ವೈವಿದ್ಯಮಯ ಸಂಸ್ಕøತಿ ಕಲೆಗಳು ಜಗತ್ತಿನ ಮುಂದೆ ಅನಾವರಣಗೊಂಡವು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ಇರುವ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಸಂಪ್ರದಾಯದಂತೆ 21 ಗನ್ ಸೆಲ್ಯೂಟ್‍ಗಳ ನಡುವೆ ರಾಷ್ಟ್ರ …

Read More »

ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ : ರೈತ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ..!

ನವದೆಹಲಿ,ಜ.26- ಎಪ್ಪತ್ತೆರಡನೆ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡುವೆ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರೆ, ದೇಶದ ನಾನಾ ಭಾಗಗಳಲ್ಲಿ ಬೃಹತ್ ರೈತ ಹೋರಾಟಗಳು ನಡೆದವು. ರಾಷ್ಟ್ರ ರಾಜಧಾನಿ ನವದೆಹಲಿ, ಎಲ್ಲಾ ರಾಜ್ಯಗಳ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಥಸಂಚಲನ ನಡೆಯಿತು. ಅದೇ ಸಂದರ್ಭದಲ್ಲಿ ರೈತರು ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತ ಹೋರಾಟಗಳನ್ನು ನಡೆಸಿದರು. ಸೇನೆ ಮತ್ತು ಸಶಸ್ತ್ರ ಪಡೆಗಳ ಪರೇಡ್‍ಗೆ ಪರ್ಯಾಯವಾಗಿ ಟ್ರ್ಯಾಕ್ಟರ್ ರ‍್ಯಾಲಿಗಳು ನಡೆದವು. ದೆಹಲಿಯ …

Read More »