Breaking News
Home / 2021 / ಜನವರಿ / 04 (page 2)

Daily Archives: ಜನವರಿ 4, 2021

ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಗೋಕಾಕ ನಿವಾಸದಲ್ಲಿ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ಸಚಿವರು ಈ ವಿಚಾರ ತಿಳಿಸಿದರು. ಗೋಕಾಕ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಗೋಕಾಕನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಚಿವ ರಮೇಶ ಜಾರಕಿಹೊಳಿ ಭೇಟಿಯಾಗಿದ್ದಾರೆ. ಭೇಟಿ ನಂತರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆ ನೀಡಿ,ಸಿದ್ಧರಾಮಯ್ಯ ಸಿಎಂ ಆಗಿದ್ದ …

Read More »

ಮೂಡಲಗಿದಲ್ಲಿ ಗೆದ್ದ- ಸೋತ ಅಭ್ಯರ್ಥಿಗಳ ನಡುವೆ ಹೊಡೆದಾಟ !

ಗೋಕಾಕ  : ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ನಂತರವೂ ಚುನಾವಣೆ ಎಫೆಕ್ಟ್ ಇನ್ನೂ ನಿಂತಿಲ್ಲ ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತುಕ್ಕಾನಕಟ್ಟಿ ಗ್ರಾಮದಲ್ಲಿ ಎರಡು ಪ್ಯಾನಲ್ನ್ ಮಹಿಳೆಯರು ನಡುವೆ ಬೆಳ್ಳಂಬೆಳಗ್ಗೆ ಮಾರಾಮಾರಿ ನಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಮಹಿಳೆಯರು ಒಬ್ಬರನ್ನೊಬ್ಬರು ಎಳೆದಾಡಿಕೊಂಡು ದೊಣ್ಣೆಯಿಂದ ಹೊಡಿದಾಟ ನಡೆಸಿದ್ದಾರೆ ಇದೆ ಸಮಯದಲ್ಲಿ ಇಬ್ಬರ ಕುಟುಂಬಸ್ಥರು ಸಹ ಪರಸ್ಪರ ಎಳೆದಾಡಿಕೊಂಡು ಹಲ್ಲೆ …

Read More »

ಲಿಫ್ಟ್‍ನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಡದ ರಕ್ಷಣಾ ಸಿಬ್ಬಂದಿ

ಶಿವಮೊಗ್ಗ, – ಲಿಫ್ಟ್‍ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೋಗುವಾಗ ಅವರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಹೋಗಲು ಗನ್‍ಮ್ಯಾನ್‍ಗಳು ಅವಕಾಶ ನೀಡದ ಪ್ರಸಂಗ ನಡೆಯಿತು. ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಹೊರಟರು. ಆಗ ಅವರು ಹತ್ತಿದ ಲಿಫ್ಟ್‍ನಲ್ಲೇ ಜಗದೀಶ್ ಶೆಟ್ಟರ್ ಹತ್ತಲು ಹೋದಾಗ ಅವರನ್ನು ಗನ್‍ಮ್ಯಾನ್‍ಗಳು ತಡೆದರು. ಆದರೆ, ಸಿಎಂ ಜತೆ ಲಿಫ್ಟ್ ಒಳಗೆ ಶಿವಮೊಗ್ಗ ಸಂಸದ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ರಾಘವೇಂದ್ರ ಬಂದರು. ರಿಲ್ಯಾಕ್ಸ್ …

Read More »

ಚೇತರಿಸಿಕೊಂಡ ಕೇಂದ್ರ ಸಚಿವ ಸದಾನಂದಗೌಡ, 24 ಗಂಟೆ ಐಸಿಯುನಲ್ಲಿ ನಿಗಾ

ಬೆಂಗಳೂರು : ತೀವ್ರ ಅನಾರೋಗ್ಯದಿಂದ ಅಸ್ತತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಆರೋಗ್ಯ ಸ್ಥಿತಿ ಸುಧಾರಣೆ ಕಂಡು ಬಂದಿದ್ದು,ಯಾವುದೇ ಆತಂಕ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ಪ್ರಸ್ತುತ ಬೆಂಗಳೂರಿನ ಅಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದಾನಂದಗೌಡ ಅವರನ್ನು 24 ಗಂಟೆಗಳ ಕಾಲ ನಿಗಾವಹಿಸಿ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.ಸದ್ಯ ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಟರ್ ಆಸ್ಪತ್ರೆ ಫಿಜಿಷಿಯನ್ ಡಾ.ಬೃಂದಾ ಮಾಹಿತಿ ನೀಡಿದ್ದಾರೆ. ಆಸ್ಟರ್ ಆಸ್ಪತ್ರೆಯಲ್ಲಿ …

Read More »

500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಶನಿ ಮಹದೇವಪ್ಪ ಇನ್ನಿಲ್ಲ..!

ಬೆಂಗಳೂರು : 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶನಿ ಮಹದೇವಪ್ಪ (90) ಇಂದು ನಿಧನರಾಗಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಶನಿ ಮಹದೇವಪ್ಪ ನಗರದ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದರೆ , ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಡಾ.ರಾಜ್ ಕುಮಾರ್ ಜೊತೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಒಟ್ಟಾರೆ ತಮ್ಮ …

Read More »

ಮಗು ಅದಲು-ಬದಲು, ದಾವಣಗೆರೆ ಜಿಲ್ಲಾ ಆಸ್ಪತ್ರೆ ಮುಂದೆ ಪ್ರತಿಭಟನೆ

ದಾವಣಗೆರೆ,ಜ,3: ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿ ಒಂದೇ ಸಮಯದಲ್ಲೇ ಹೆರಿಗೆ ಆದ ಮಗು ಅದಲು ಆದ ಘಟನೆ ನಡೆದಿದೆ. ಇದರಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮುಂದೆ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದ್ದಾರೆ. ನಾರಮ್ಮ ಮತ್ತು ಮಾರಮ್ಮ ಹೆಸರು ಕೇಳಿಸಿಕೊಳ್ಳುವಾಗ ಆದ ಎಡವಟ್ಟಿನಿಂದ ಮಗು ಅದಲು ಬದಲು ಆಗಿತ್ತು. ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕ್ ಮಾಕನಡುಕ ಗ್ರಾಮದ ಮಾರಮ್ಮ- ನಾಗರಾಜ ದಂಪತಿಗಳಿಗೆ ಹೆಣ್ಣು ಮಗು‌ ಜನಿಸಿದೆ. ಇದೇ ಸಮಯದಲ್ಲಿ ಹೊಸ ಪೇಟೆ ಮರಿಯಮ್ಮನ …

Read More »

ಭೀಮಾ ತೀರದಲ್ಲಿ ಮತ್ತೆ ತಲ್ವಾರ್ ಝಳಪಳ: ಶತ್ರು ಸಂಹಾರ ಪೂಜೆ ನೆರವೇರಿಸಿದ ಭಾಗಪ್ಪ..!

ಕಲಬುರ್ಗಿ: ಭೀಮಾ ತೀರ ಮತ್ತೊಮ್ಮೆ ಚರ್ಚೆಯಲ್ಲಿದೆ. ಪ್ರತಿ ಬಾರಿ ಬಂದೂಕಿನಿಂದ ಗುಂಡು ಹಾರಿದಾಗ ಭೀಮಾ ತೀರ ಸದ್ದಾಗುತ್ತಿತ್ತು. ಆದರೆ ಈ ಬಾರಿ ತಲ್ವಾರ್ ಝಳಪಿಸಿ, ಶತ್ರು ಸಂಹಾರ ಯಾಗ ಮಾಡಿರುವುದರಿಂದ ಸುದ್ದಿಯಲ್ಲಿದೆ. ಇಷ್ಟಕ್ಕೂ ಹೀಗೆ ತಲ್ವಾರ್ ಝಳಪಿಸಿ ಶತ್ರು ಸಂಹಾರ ಯಾಗ ಮಾಡಿದವರು ಯಾರಂತೀರಾ..? ಭೀಮಾ ತೀರದ ಹಂತಕ ಎಂದೇ ಕುಖ್ಯಾತಿಯಾಗಿದ್ದ ಚಂದಪ್ಪ ಹರಿಜನನ ಅಳಿಯ ಭಾಗಪ್ಪ ಹರಿಜನ. ಹೌದು, ಭೀಮಾತೀರದಲ್ಲಿ ಮತ್ತೆ ನಟೋರಿಯಸ್ ಹಂತಕ ಭಾಗಪ್ಪ ಹರಿಜನನ ಹವಾ …

Read More »

ಸರ್ಕಾರದ ಮುದ್ರೆ ಬಳಸಿ ಬೆಂಗಳೂರಿನಲ್ಲಿ ಸಾವಿರಾರು ನಕಲಿ ವೋಟರ್ ಐಡಿ, ಆಧಾರ್, PAN ಕಾರ್ಡ್​ ತಯಾರಿ!

ಬೆಂಗಳೂರು (ಜ. 4): ಸರ್ಕಾರದ ಮುದ್ರೆ ಬಳಸಿ ನಕಲಿ AADHAR ಕಾರ್ಡ್, PAN ಕಾರ್ಡ್​, ನಕಲಿ ವೋಟರ್ ಐಡಿ ತಯಾರಿಸಿದ್ದ ಖತರ್ನಾಕ್ ಕಳ್ಳರ ತಂಡವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಾವಿರಾರು ನಕಲಿ ಐಡಿ ಕಾರ್ಡ್​ಗಳನ್ನು ಬಳಸಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿರುವ ಅನುಮಾನವೂ ವ್ಯಕ್ತವಾಗಿದೆ. ರಾಜಸ್ಥಾನದಿಂದ Bangaloreಗೆ ಬಂದಿದ್ದ ಈ ಗ್ಯಾಂಗ್ ಈಗ ಪೊಲೀಸರ ವಶದಲ್ಲಿದೆ. ಸರ್ಕಾರದ ಮುದ್ರೆಗಳನ್ನು ಬಳಸಿ ಬೃಹತ್ ವಂಚನೆ ಮಾಡುತ್ತಿದ್ದ ಗ್ಯಾಂಗ್ ಈಗ ಪೊಲೀಸರ …

Read More »

ರಾತ್ರಿ ರಿಸೆಪ್ಷನ್​​ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ; ಛತ್ರದಲ್ಲೇ ವಧುವಿನ ಕೈಹಿಡಿದ ಮತ್ತೋರ್ವ ಯುವಕ

ಚಿಕ್ಕಮಗಳೂರು(ಜ.04): ರಾತ್ರಿ ಆರತಕ್ಷತೆಗೆ ಇದ್ದ ವರ ಬೆಳಗ್ಗೆ ಪ್ರೀತಿಸಿದ ಯುವತಿ ಬೆದರಿಕೆಗೆ ಹೆದರಿ ಮುಹೂರ್ತಕ್ಕೆ ನಾಪತ್ತೆಯಾಗಿ, ಮಧುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ ತರೀಕೆರೆ ಸಾಕ್ಷಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೆಣ್ಣಿನೊಂದಿಗೆ ಮದುವೆ ನಿಶ್ಚಯವಾಗಿತ್ತು. ಎರಡು ಕಡೆಯವರು ಒಪ್ಪಿ ಕೂಡ ಮದುವೆ ನಿಶ್ಚಯ ಮಾಡಿದ್ರು. ಅದರಂತೆ …

Read More »

ಕೃಷಿ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯತ್ತ ಹೊರಟ ಹರಿಯಾಣ ರೈತರ ಮೇಲೆ ಅಶ್ರುವಾಯು ದಾಳಿ

ರೆವಾರಿ : ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರಟುಭಟನೆಯಲ್ಲಿ ಭಾಗಿಯಾಗಲು ಸಾಗುತ್ತಿದ್ದ ಹರ್ಯಾಣದ ರೈತರನ್ನು ರವಿವಾರ ಪೊಲೀಸರು ತಡೆದಿದ್ದಾರೆ. ಈ ವೇಳೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ ಘಟನೆಯೂ ನಡೆಯಿತು. ರೆವಾರಿ- ಅಲ್ವಾರ್ ಗಡಿಯಲ್ಲಿ ಈ ಘರ್ಷಣೆ ನಡೆದಿದ್ದು, ಪೊಲೀಸರ ತಡೆಯನ್ನು ಮುರಿದು ಮುಂದೆ ಹೋಗಲು ಯತ್ನಿಸಿದ್ದ ರೈತರ ಮೇಲೆ ಪೊಲೀಸರು ಕೆಲವು ಸುತ್ತು ಅಶ್ರುವಾಯು ಸಿಡಿದ್ದಾರೆ. ನಂತರ ಪೊಲೀಸರು ರೈತರನ್ನು ಮಾಸನಿ ಎಂಬಲ್ಲಿನ ಮೇಲ್ಸೇತುವೆಯಲ್ಲಿ ತಡೆದಿದ್ದಾರೆ. …

Read More »