Breaking News

ಕೃಷಿ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯತ್ತ ಹೊರಟ ಹರಿಯಾಣ ರೈತರ ಮೇಲೆ ಅಶ್ರುವಾಯು ದಾಳಿ

Spread the love

ರೆವಾರಿ : ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರಟುಭಟನೆಯಲ್ಲಿ ಭಾಗಿಯಾಗಲು ಸಾಗುತ್ತಿದ್ದ ಹರ್ಯಾಣದ ರೈತರನ್ನು ರವಿವಾರ ಪೊಲೀಸರು ತಡೆದಿದ್ದಾರೆ. ಈ ವೇಳೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ ಘಟನೆಯೂ ನಡೆಯಿತು.

ರೆವಾರಿ- ಅಲ್ವಾರ್ ಗಡಿಯಲ್ಲಿ ಈ ಘರ್ಷಣೆ ನಡೆದಿದ್ದು, ಪೊಲೀಸರ ತಡೆಯನ್ನು ಮುರಿದು ಮುಂದೆ ಹೋಗಲು ಯತ್ನಿಸಿದ್ದ ರೈತರ ಮೇಲೆ ಪೊಲೀಸರು ಕೆಲವು ಸುತ್ತು ಅಶ್ರುವಾಯು ಸಿಡಿದ್ದಾರೆ. ನಂತರ ಪೊಲೀಸರು ರೈತರನ್ನು ಮಾಸನಿ ಎಂಬಲ್ಲಿನ ಮೇಲ್ಸೇತುವೆಯಲ್ಲಿ ತಡೆದಿದ್ದಾರೆ.

ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಜೊತೆ ಇಂದು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ರೈತರ ಪ್ರತಿಭಟನೆ ಇಂದು 40ನೇ ದಿನಕ್ಕೆ ಕಾಲಿಡುತ್ತಿದೆ.


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ