Breaking News

ಸರ್ಕಾರದ ಮುದ್ರೆ ಬಳಸಿ ಬೆಂಗಳೂರಿನಲ್ಲಿ ಸಾವಿರಾರು ನಕಲಿ ವೋಟರ್ ಐಡಿ, ಆಧಾರ್, PAN ಕಾರ್ಡ್​ ತಯಾರಿ!

Spread the love

ಬೆಂಗಳೂರು (ಜ. 4): ಸರ್ಕಾರದ ಮುದ್ರೆ ಬಳಸಿ ನಕಲಿ AADHAR ಕಾರ್ಡ್, PAN ಕಾರ್ಡ್​, ನಕಲಿ ವೋಟರ್ ಐಡಿ ತಯಾರಿಸಿದ್ದ ಖತರ್ನಾಕ್ ಕಳ್ಳರ ತಂಡವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಾವಿರಾರು ನಕಲಿ ಐಡಿ ಕಾರ್ಡ್​ಗಳನ್ನು ಬಳಸಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿರುವ ಅನುಮಾನವೂ ವ್ಯಕ್ತವಾಗಿದೆ. ರಾಜಸ್ಥಾನದಿಂದ Bangaloreಗೆ ಬಂದಿದ್ದ ಈ ಗ್ಯಾಂಗ್ ಈಗ ಪೊಲೀಸರ ವಶದಲ್ಲಿದೆ.

ಸರ್ಕಾರದ ಮುದ್ರೆಗಳನ್ನು ಬಳಸಿ ಬೃಹತ್ ವಂಚನೆ ಮಾಡುತ್ತಿದ್ದ ಗ್ಯಾಂಗ್ ಈಗ ಪೊಲೀಸರ ವಶವಾಗಿದೆ. ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್​, ಆರ್​ಸಿ ಬುಕ್​ಗಳ ಅಸಲಿ ಕಾರ್ಡ್​ಗಳ ತಲೆ ಮೇಲೆ ಹೊಡೆದಂತೆ ನಕಲಿ ಮುದ್ರಣ ಮಾಡುತ್ತಿದ್ದ ಈ ಗ್ಯಾಂಗ್​ನವರು ಆ ಕಾರ್ಡ್​ಗಳ ಮೂಲಕ ಬ್ಯಾಂಕ್​ನಲ್ಲಿ ಸಾಲವನ್ನೂ ಪಡೆದಿದ್ದರು ಎನ್ನಲಾಗಿದೆ.ಈ ಗ್ಯಾಂಗನ್ನು ಬಂಧಿಸಿರುವ ಪೊಲೀಸರು ಹೆಸರು, ವಿಳಾಸವಿಲ್ಲದ 28,000 ಎಲೆಕ್ಷನ್ ಐಡಿ, ಹೆಸರು ವಿಳಾಸವಿಲ್ಲದ 9,000 ಆಧಾರ್ ಕಾರ್ಡ್, ಹೆಸರು ವಿಳಾಸವಿಲ್ಲದ 9,000 ಪಾನ್ ಕಾರ್ಡ್ ಹಾಗೂ 12,200 ನಕಲಿ ಆರ್​ಸಿ ಕಾರ್ಡ್ ಗಳ್ನು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ 6,240 ಹೆಸರು, ವಿಳಾಸವಿರುವ ನಕಲಿ ಎಲೆಕ್ಷನ್ ಐಡಿಗಳು ಕೂಡ ಪತ್ತೆಯಾಗಿವೆ. ಥೇಟ್ ಅಸಲಿ ಗುರುತಿನ ಚೀಟಿಗೆ ಸೆಡ್ಡು ಹೊಡೆಯಲು ನಕಲಿ ಐಡಿಗಳು ತಯಾರಿ ಮಾಡುತ್ತಿದ್ದ ಗ್ಯಾಂಗ್ ಅದರ ಮೂಲಕ ನೂರಾರು ಕೋಟಿ ರೂ. ವಂಚನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.ಇವುಗಳನ್ನು ನಕಲಿ ಅಂತ ಯಾರಿಗೂ ಹೇಳಲು ಸಾಧ್ಯವಿಲ್ಲ. ಈ ಪ್ರೂಫ್​ಗಳನ್ನು ಕೊಟ್ಟು ಎಷ್ಟು ಕೋಟಿ ಬೇಕಾದರೂ ಸಾಲ ಪಡೆಯಬಹುದು. ಈ ನಕಲಿ ಕಾರ್ಡ್​ಗಳ ಮೂಲಕ ಆರೋಪಿಗಳು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ವಂಚನೆ ಮಾಡಿದ ಅನುಮಾನ ವ್ಯಕ್ತವಾಗಿದೆ. ಸರ್ಕಾರದ ಮುದ್ರೆ ಬಳಸಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ