Breaking News
Home / Uncategorized / ಹಾಸ್ಟೇಲಗಳಲ್ಲಿದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಮತ್ತು ಕೋವಿಡ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಮನವಿ 

ಹಾಸ್ಟೇಲಗಳಲ್ಲಿದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಮತ್ತು ಕೋವಿಡ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಮನವಿ 

Spread the love

 

ವಿಜಯಪೂರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನಲ್ಲಿ ಇಂದು ಹಾಸ್ಟಲ್ ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಹಾಗೂ ಕೊವಿಡ್ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ತಹಶಿಲ್ದಾರರವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ 2020 ಮಾರ್ಚ ತಿಂಗಳಿಂದ ಇಲ್ಲಿಯವರೆಗೆ ವೇತನವನ್ನು ಪಾವತಿಸಬೇಕು ಸರ್ಕಾರವು ಈ ನೌಕರರಿಗೆ ಲಾಕಡೌನ ರಜೆ ವೇತನವನ್ನು ಕೂಡುವದಾಗಿ ಆಶ್ವಾಸನೆ ನೀಡಿ ಇಲ್ಲಿಯವರೆಗೆ ವೇತನವನ್ನು ಪಾವತಿಸಲ್ಲ ಕಳೆದ 11ತಿಂಗಳು ವಸತಿ ನಿಲಯಗಳು ಬಂದ ಇದ್ದಿದರಿಂದ ದುಡಿಯಲು ಕೆಲಸವಿಲ್ಲದೆ ಹೊರಗುತ್ತಿಗೆ ನೌಕರರು ಅತ್ಯಂತಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ.ವಿಜಯಪೂರ ಜಿಲ್ಲೆಯಲ್ಲಿ 2019 ರಲ್ಲಿ ನೇಮಕಾತಿಯಿಂದ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಸೇವೆಯಲ್ಲಿ ಮುಂದುವರೆಸುವುದಾಗಿ ಸರಕಾರ ಒಪ್ಪಿಕೊಂಡಿದ್ದು ಆದರೆ ಈ ನೌಕರರು ಕೂಡಾ ದುಡಿಯಲು ಕೆಲಸವಿಲ್ಲದೆ ಪರದಾಡುವಂತಾಗಿದೆ ಆ ಹೊರಗುತ್ತಿಗೆ ನೌಕರರಿಗೂ ಲಾಕ್ ಡೌನ್ ರಜೆ ವೇತನ ಪಾವತಿಸಬೇಕೆಂದು ಒತ್ತಾಯಿಸುತ್ತೆವೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ.ಪವಾಡೆಪ್ಪ ಚಲವಾದಿ.ಗೌರಕ್ಕ ಬಿಳೂರ.ಬಸವರಾಜ ಗುರುಬಟ್ಟಿ.ಶರಣಮ್ಮ ಜಟ್ಟಗಿ.ಶೈಲಾ ಹುಣ್ಣಿಬಾವಿ.ಸರದಾರ ಮಾಳಿ.ರಾಧಾಬಾಯಿ ಭಜಂತ್ರಿ.ಮಹಾದೇವಿ ಮಾಲಗಾರ.ರುಕ್ಮಿಣಿ ಭೂತನಾಳ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು

 

ವರದಿ ಬಿ ಎಸ್ ಹೊಸೂರ.

 


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ