Breaking News
Home / Uncategorized / ಯಾವುದೇ ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷರು, ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ: ಸತೀಶ ಜಾರಕಿಹೊಳಿ

ಯಾವುದೇ ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷರು, ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ: ಸತೀಶ ಜಾರಕಿಹೊಳಿ

Spread the love

 

 

 

 

ಗೋಕಾಕ: ಸಮೀಪದ ಸತ್ತಿಗೇರಿ ತೋಟದಲ್ಲಿ ಇಂದು ಹಮ್ಮಿಕೊಂಡಿದ್ದ ಚಕ್ರವರ್ತಿ ದಾನೇಶ್ವರ ಕೃಪಾ ಸಂಚಾರಿ ಕುರುಬರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.

 

ನಂತರ ಮಾತನಾಡಿದ ಅವರು, ಸಂಘದವರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಕುರಿಗಾಹಿಗಳು ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹೇಳಿದರು.

 

ಯಾವುದೇ ಸಂಘ ಅಭಿವೃದ್ಧಿಯಾಗಲು ಅಧ್ಯಕ್ಷರು ಹಾಗೂ ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ಅಧ್ಯಕ್ಷರು ಹಾಗೂ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದರೇ ಆ ಸಂಘ ಯಶಸ್ಸು ಪಡೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮವಹಿಸಿ ಸಂಘವನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗಬೇಕು ಎಂದು ಸತೀಶ ಅವರು ಸಲಹೆ ನೀಡಿದರು.

 

 

 

ಡಿಸಿಸಿ ಬ್ಯಾಂಕ್ ನಿಂದ ಸೌಲಭ್ಯ ಕೊಡಿಸಲು ಮನವಿ:

 

ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್ ನ ಸದಸ್ಯತ್ವ ಪಡೆದಿವೆ. ಆದರೂ ಕೂಡ ಈ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಈ ಬಗ್ಗೆ ಗಮನ ಹರಿಸಿ, ಈ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನಿಂದ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

 

 

 

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಡವಳೇಶ್ವರ,ನಿರ್ದೇಶಕ ಕೃಷ್ಣಾ ಅನಗೋಳಕರ್, ಗೋಕಾಕ ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ಮಸಗುಪ್ಪಿ, ಕರುನಾಡು ಕುರುಬರ ಪಡೆಯ ರಾಜ್ಯಾಧ್ಯಕ್ಷ ಶಿವಾನಂದ ಖಿಲಾರಿ, ಮುಖಂಡರಾದ ಶಂಕರ ಬಿಲಕುಂದಿ, ಯಲ್ಲಪ್ಪ ಸತ್ತಿಗೇರಿ, ಪಾಂಡು ಮನ್ನಿಕೇರಿ, ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಅಲ್ಲಪ್ಪ ಗಣೇಶವಾಡಿ, ಉಪಾಧ್ಯಕ್ಷೆ ಜ್ಯೋತಿ ದಾನೋಳ್ಳಿ, ನಿರ್ದೇಶಕರಾದ ಭೀಮಸಿ ಸನ್ನಲಗಮನ್ನವರ, ಭೀಮಶಿ ಬಂಗಾರಿ ಸೇರಿ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Spread the loveಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ